ಕಾಪು: ಅಕ್ರಮ ಮರಳು ಸಂಗ್ರಹ; ಪ್ರಕರಣ ದಾಖಲು – vishwanews24
ಕಾಪು: ಅಕ್ರಮ ಮರಳು ಸಂಗ್ರಹ; ಪ್ರಕರಣ ದಾಖಲು
ಕಾಪು: ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಸಂಕು ತೋಟ ಎನ್ನುವಲ್ಲಿ ಹರಿಯುವ ಪಾಪನಾಶಿನಿ ನದಿಯಿಂದ ಮರಳು ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಪ್ರಕರಣವನ್ನು ಕಾಪು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಅಕ್ರಮವಾಗಿ ಮರಳು ಸಂಗ್ರಹಿಸುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಪೊಲೀಸರು ಬುಧವಾರ ಮುಂಜಾನೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ನದಿಯ ಪೂರ್ವ ಬದಿಯ ದಡದಲ್ಲಿ ಮರಳನ್ನು ಸಂಗ್ರಹಿಸಿರುವುದು ಪತ್ತೆಯಾಗಿತ್ತು.
ಅಲ್ಲಿದ್ದ ವ್ಯಕ್ತಿ ಪೊಲೀಸರನ್ನು ಕಂಡು ನದಿಗೆ ಹಾರಿ ನದಿ ದಾಟಿಕೊಂಡು ಪರಾರಿಯಾಗಿದ್ದಾನೆ. ಆತನನ್ನು ಪಾಂಗಾಳ ನಿವಾಸಿ ಪ್ರಸಾದ್ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿದ್ದ ಮರಳನ್ನು ತೆಗೆಯುವ ಸಲಕರಣೆಗಳನ್ನು ಮತ್ತು ಅಂದಾಜು 4 ಯೂನಿಟ್ನಷ್ಟು ಮರಳನ್ನು ಜಪ್ತಿ ಮಾಡಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
