ಕಾಪು ಕಲ್ಯಾ ಭರತ್‌ನಗರ ರಸ್ತೆಯಲ್ಲಿ ಅಶ್ಲೀಲ ಶಬ್ದ ಬರೆದು ಹೊಸವರ್ಷದ ಶುಭಾಶಯ ಕೋರಿದ ವಿಕೃತರು:vishwanews24

Featured, ಉಡುಪಿ

ಕಾಪು ಕಲ್ಯಾ ಭರತ್‌ನಗರ ರಸ್ತೆಯಲ್ಲಿ ಅಶ್ಲೀಲ ಶಬ್ದ ಬರೆದು ಹೊಸವರ್ಷದ ಶುಭಾಶಯ ಕೋರಿದ ವಿಕೃತರು:vishwanews24

ಕಾಪು: ಕಲ್ಯಾ ಭರತ್‌ನಗರ ವಾರ್ಡಿನ ರಸ್ತೆಯಲ್ಲಿ ಡಿಸೆಂಬರ್31 ರ ತಡರಾತ್ರಿ ವಿಕೃತ ಮನಸ್ಸಿನ ಕಿಡಿಗೇಡಿಗಳು ರಸ್ತೆಯಲ್ಲಿ ಅಶ್ಲೀಲ ಶಬ್ದ ಬರೆದು ಹೊಸವರ್ಷದ ಶುಭಾಶಯ ಕೋರಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಸ್ಥಳಿಯ ನಾಯಕರು ಕಾಪು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು ಖುದ್ದಾಗಿ ಸ್ಥಳಕ್ಕೆ ಬಂದ ಅಧಿಕಾರಿಗಳು ಶುಭಾಶಯ ಸಲ್ಲಿಸಿದ ಶಬ್ದದ ಪೈಕಿ ಅಶ್ಲೀಲ ಶಬ್ದಗಳಿಗೆ ಪೈಂಟ್ ಹಾಕಿ ಒರೆಸಿಹೋಗಿದ್ದಾರೆಂಬುದು ಸದ್ಯದ ಸುದ್ದಿ.

ತನಿಖೆಗೆ ಒತ್ತಾಯಿಸಿದ ಅರುಣ್ ಶೆಟ್ಟಿ ಪಾದೂರು
ಕಲ್ಯಾ ಭರತ್‌ನಗರ ರಸ್ತೆಯಲ್ಲಿ ಶಾಂತಿಗೆಡಿಸುವ ಅಶ್ಲೀಲ ಶಬ್ದಉಪಯೋಗಿಸಿ ಹೊಸವರ್ಷದ ಶುಭಾಶಯ ಕೋರಿದ ಕಿಡಿಗೇಡಿಗಳ ವಿರುದ್ದ ತನಿಖೆ ನಡೆಸಿ ಪತ್ತೆಹಚ್ಚುವಂತೆ .ಪುರಸಭಾ ಸದಸ್ಯ ಅರುಣ್‌ಶೆಟ್ಟಿ ಪಾದೂರು ಆಗ್ರಹಿಸಿದ್ದಾರೆ .

Leave a Reply