ಕಾಪು :  ಜ.21 ರಂದು ಕಡಲ ಕಿನಾರೆಯಲ್ಲಿ ರಜತ ಮಹೋತ್ಸವ ಸಮಾರಂಭ – Vishwanews24

Featured, ಉಡುಪಿ

ಕಾಪು :  ಜ.21 ರಂದು ಕಡಲ ಕಿನಾರೆಯಲ್ಲಿ ರಜತ ಮಹೋತ್ಸವ ಸಮಾರಂಭ  

ಉಡುಪಿ: ಕಾಪು ತಾಲೂಕು ಆಡಳಿತ ಇವರ ವತಿಯಿಂದ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಸಮಾರಂಭವು ಜನವರಿ 21 ರಂದು ಮಧ್ಯಾಹ್ನ 2.30 ಕ್ಕೆ ಕಾಪು ಕಡಲ ಕಿನಾರೆಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಡಿ.ವಿ ಸದಾನಂದ ಗೌಡ ಉದ್ಘಾಟಿಸಲಿದ್ದು, ಶಾಸಕ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆ ವಹಿಸಲಿದ್ದಾರೆ.

May be a cartoon of ‎8 people and ‎text that says "‎21.01.2023 ಶನಿವಾರ ಸಂಜೆ 6.00 ಗಂಟೆಯಿಂದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರಾದ ಗುರುಕಿರಣ್ ಹಾಗೂ ತಂಡದವರಿಂದ ಸಂಗೀತ್ರ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉಡುಪಿ ಜಿಲ್ಲೆಯು 25ನೇ ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಕಾಪು ಕಡಲ ಕಿನಾರೆಯಲ್ಲಿ ی ಅನುರಾಧ ಭಟ್ ಜತ ಮಹೋತ್ಸವ 8023 ಸಂತೋಷ್ ವೆಂಕಿ 21.01. 2023 ಶನಿವಾರ ಶಮಿತಾ ಮಲ್ನಾಡ್ ಸ್ಥಳ ಕಾಪು ಕಡಲ ಕಿನಾರೆ ಗುರುಕಿರಣ್ ಐಶ್ವರ್ಯ ಕಾರ್ಯಕ್ರಮಗಳು ಮಧ್ಯಾಷ್ಸ 2:30 ಕಾಪು ಪುರಸಭೆಯಿಂದ ಸ್ತಬ್ಟ ಚಿತ್ರ ಮೆರವಣಿಗೆ ಕ್ರಮದಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ೈೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿಳುವಂತೆ ದಿನಂತಿ ಸರ್ವರಿಗೂ ಆದರದ ಸ್ವಾಗತ ಬಯಸುವ ಲಾಲಾಜಿ ಆರ್ ಮೆಂಡನ್ ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ ಸಂಬೆ 4:00 ಸ್ಥಳೀಯ ವಿವಿಧ ಗ್ರಾಮ ಪಂಚಾಯಿತಿ ವತಿಯಿಂದ ಸಾಂಸ್ಕ್ೃತಿಕ ಕಾರ್ಯಕ್ರಮಗಳು ಸಂಜೆ 5:00 ಸಚಿವರ ಹಾಗೂ ಗಣ್ಣರ ಉಪಸ್ಸಿತಿಯಲ್ಲಿ ಸಭಾ ಕಾರ್ಯಕ್ರಮ ಉದ್ರಾಟನಾ ಸಮಾರಂಭ‎"‎‎

ಕಾರ್ಯಕ್ರಮದಲ್ಲಿ ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಸಂಸದ ಬಿ. ವೈ ರಾಘವೇಂದ್ರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ, ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ರಘುಪತಿ ಭಟ್ ಮತ್ತು ಬಿ.ಎಂ ಸುಕುಮಾರ್ ಶೆಟ್ಟಿ, ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ, ಎಸ್.ಎಲ್. ಭೋಜೆಗೌಡ, ಡಾ. ತೇಜಸ್ವಿನಿ ಗೌಡ, ಮಂಜುನಾಥ ಭಂಡಾರಿ, ದಿ ಮೈಸೂರು ಎಲೆಕ್ಟಿçಕಲ್ ಇಂಡಸ್ಟಿçÃಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚೀಂದ್ರ, ಕುಂದಾಪುರ ಸಹಾಯಕ ಕಮೀಷನರ್ ರಾಜು ಕೆ ಹಾಗೂ ಮತ್ತಿತರರು ಭಾಗವಹಿಸಲಿರುವರು.

ಮುಂಬೈ: ಟ್ರಕ್ ಹಾಗೂ ಕಾರು ನಡುವೆ ಭೀಕರ ರಸ್ತೆ ಅಪಘಾತ : 9 ಮಂದಿ ಸ್ಥಳದಲ್ಲೇ ಸಾವು – Vishwanews24

Leave a Reply