ಕಾಪು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವ ಸಾಹಿತಿ ಡಾ.ಭರತ್ ಕುಮಾರ್‌ ರವರಿಗೆ ಅಧಿಕೃತ ಆಹ್ವಾನ -Vishwanews24

Featured, ಉಡುಪಿ

ಕಾಪು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವ ಸಾಹಿತಿ ಡಾ.ಭರತ್ ಕುಮಾರ್‌ ರವರಿಗೆ ಅಧಿಕೃತ ಆಹ್ವಾನ -Vishwanews24

ಕಾಪು,: ಪಡುಬಿದ್ರಿ ಶ್ರೀಮಹಾಲಿಂಗೇಶ್ವರ, ಗಣಪತಿ ದೇವಳದ ಪ್ರಾಂಗಣದಲ್ಲಿ ಶುಕ್ರವಾರ ಜರಗಲಿರುವ ಕಾಪು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವ ಹಿರಿಯ ರಂಗಕರ್ಮಿ, ಸಾಹಿತಿ ಡಾ.ಭರತ್ ಕುಮಾರ್‌ ರವರಿಗೆ ತಾಲೂಕು ಕಸಾಪ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ವತಿಯಿಂದ ಪೊಲಿಪು ನಿವಾಸದಲ್ಲಿ ಗೌರವಿಸಿ, ಅಧಿಕೃತವಾಗಿ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.

ಕೆಂಪು ಕೋಟೆ ಹಿಂಸಾಚಾರ: ನಟ ದೀಪ್ ಸಿಧು ವಿರುದ್ಧ ಎಫ್‌ಐಆರ್ ದಾಖಲು -Vishwanews24

ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು. ಕಾಪು ತಾಲೂಕು ಸಾಹಿತ್ಯ ಸಮ್ಮೇಳನದ ಸ್ವಾಗತಿ ಸಮಿತಿಯ ಕಾರ್ಯಾಧ್ಯಕ್ಷ ಕೆ. ಅನಂತ ಪಟ್ಟಾಭಿ ರಾವ್, ಉಪಾಧ್ಯಕ್ಷೆ ಸುಮತಿ ಹೆಗಡೆ, ಪ್ರಧಾನ ಕಾರ್ಯದರ್ಶಿ ಕಸ್ತೂರಿ ರಾಮಚಂದ್ರ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು, ಕಸಾಪ ಸದಸ್ಯರಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಸುಧಾಕರ ಪೂಜಾರಿ ಬೆಳ್ಳೆ, ಸೇವಂತಿ ಸದಾಶಿವ ಮೊದಲಾದವರು ಉಪಸ್ಥಿತರಿದ್ದರು.ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಸ್ವಾಗತಿಸಿದರು. ಕಾರ್ಯದರ್ಶಿ ವಿದ್ಯಾಧರ ಪುರಾಣಿಕ್ ವಂದಿಸಿದರು.

ಮುಂಬೈಯನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು, ಅಲ್ಲಿಯವರಗೆ ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಕೇಂದ್ರ ಸರ್ಕಾರವನ್ಮು ಒತ್ತಾಯಿಸುತ್ತೇನೆ : ಲಕ್ಷ್ಮಣ ಸವದಿ -Vishwanews24