ಕಾಪು: ತುಳುನಾಡಿನ ಗರೋಡಿಗಳ ಪುನಶ್ಚೇತನಕ್ಕೆ ಮಹತ್ವದ ಹೆಜ್ಜೆ: ಅ.25ರಂದು ಸಮಾವೇಶ ಮತ್ತು ಸಮಾಲೋಚನಾ ಸಭೆ – vishwanews24

Featured, ಉಡುಪಿ

ತುಳುನಾಡಿನ ಗರೋಡಿಗಳ ಪುನಶ್ಚೇತನಕ್ಕೆ ಮಹತ್ವದ ಹೆಜ್ಜೆ: ಅ.25ರಂದು ಸಮಾವೇಶ ಮತ್ತು ಸಮಾಲೋಚನಾ ಸಭೆ

ಕಾಪು ತಾಲೂಕಿನ ಗರೋಡಿಗಳ ಪೂ ಪೂಜಾನೆ-ಬೈದರ್ಲೆ ಪಾತ್ರಿ-ಕೂಡಕಟ್ಟಿನ‌ ಗುರಿಕಾರರ ಭಾಗವಹಿಸುವಿಕೆ

ಕಾಪು: ತುಳುನಾಡಿನ ಗರೋಡಿಗಳ ಪರಂಪರೆ, ಧಾರ್ಮಿಕ ಆಚರಣೆಗಳು ಹಾಗೂ ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಬೈದರ ದರ್ಶನ ಪೂಜಾರಿಗಳು ಹಾಗೂ ಕೂಡು ಕಟ್ಟಿನ ಗುರಿಕಾರರು,ಪೂ ಪೂಜನೆಯವರ ಸಮಾವೇಶ ಮತ್ತು ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.

ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗಳ ಪುನಶ್ಚೇತನಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗರೋಡಿಗಳ ಇತಿಹಾಸ, ಸಂಪ್ರದಾಯ, ಆಚರಣೆಗಳು ಹಾಗೂ ಅವುಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮುದಾಯದ ಪ್ರಮುಖರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು.

ತುಳುನಾಡಿನ ಆರಾಧನಾ ಕೇಂದ್ರಗಳಾದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗಳ ಪರಂಪರೆಯನ್ನು ಸಂರಕ್ಷಿಸುವುದು, ಗರೋಡಿಗಳ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸುವುದು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ.

ಈ ಹಿನ್ನೆಲೆಯಲ್ಲಿ 2026ರ ಅಕ್ಟೋಬರ್ 25ರ ಭಾನುವಾರ ಬೆಳಗ್ಗೆ 10 ಗಂಟೆಗೆ ಶ್ರೀ ವಿಷ್ಣುನಾಥ ಕ್ಷೇತ್ರದ ‘ಸಪ್ತಪದಿ’ ಸಭಾಂಗಣದಲ್ಲಿ ಸಮಾವೇಶ ಮತ್ತು ಸಮಾಲೋಚನಾ ಸಭೆ ನಡೆಯಲಿದೆ ಎಂದು ಮಾಜಿ‌ಸಚಿವ ವಿನಯ್ ಕುಮಾರ್ ಸೊರಕೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತುಳುನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವವರು, ಗರೋಡಿಗಳ ಪದಾಧಿಕಾರಿಗಳು ಹಾಗೂ ಸಂಬಂಧಪಟ್ಟ ಸಮುದಾಯದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದರು.
ಈ‌ ಸಂಧರ್ಭದಲ್ಲಿ ಅಧ್ಯಕ್ಷ ಸೂರ್ಯೋಧಯ ಪೆರಂಪಳ್ಳಿ ಪದಾಧಿಕಾರಿಗಳಾದ ದಾಮೋಧರ ಕಲ್ಮಾಡಿ,ಹರೀಶ್ ಎಂ ಕೆ, ಸುಧಾಕರ ಅಮೀನ್ ಪಾಂಗಾಳ ಉಪಸ್ಥಿತರಿದ್ದರು.

Leave a Reply