ಕಾಪು ಧರಣಿ ಸೇವಾ ಸಮಾಜ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ- ಸಮವಸ್ತ್ರ ವಿತರಣೆ : vishwanews24

Featured, ಉಡುಪಿ

ಕಾಪು ಧರಣಿ ಸೇವಾ ಸಮಾಜ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ- ಸಮವಸ್ತ್ರ ವಿತರಣೆ

ಮಜೂರು ಕರಂದಾಡಿ ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀ ಲೀಲಾಧರ ಶೆಟ್ಟಿಯವರ ನೇತೃತ್ವದಲ್ಲಿ ಅವರ ಧರಣಿ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು ಹಾಗೂ ದಾನಿಗಳಾದ ದಿನೇಶ್ ಶೆಟ್ಟಿ ಪೆರ್ಡೂರು, ವಿಜಯ್ ಶೆಟ್ಟಿ ಪೆರ್ಡೂರು ಇವರು ಶಾಲೆಗೆ ಪ್ರಾಜೆಕ್ಟರ್ ಕೊಡುಗೆಯಾಗಿ ನೀಡಿದರು.


ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಆರ್. ಎಸ್ ಕಲ್ಲೂರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ಪದ್ಮನಾಭ ಶಾನುಭಾಗ್, ನಿವೃತ್ತ
ಮುಖ್ಯ ಶಿಕ್ಷಕ ಶ್ರೀ ನಿರ್ಮಲ್ ಕುಮಾರ್ ಹೆಗ್ಡೆ, ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ನಾಗಭೂಷಣ್ ರಾವ್, ದಾನಿಗಳಾದ ಶ್ರೀಮತಿ ದೇವಿಕಾ ಚೌಟ ಹಾಗೂ ಶಾಲಾ ಗೌರವ ಶಿಕ್ಷಕರಾದ ಶ್ರೀ ಪ್ರಕಾಶ್,ಶಿಕ್ಷಕಿಯರಾದ ಶ್ರೀಮತಿ ಅನಿತಾ, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಲವೀನಾ,ಕು.ಶ್ವೇತಾ, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ಪಿಂಕ್ ವಾಟ್ಸ್​ಆ್ಯಪ್ – ತಪ್ಪಿಯೂ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ ಎಚ್ಚರ.!

Leave a Reply