ಕಾಪು ಧೂಮಾವತಿ ಸೇವಾ ಸಮಿತಿ-ದಿನ ಬಳಕೆಯ ಅಗತ್ಯ ಸೊತ್ತುಗಳ ವಿತರಿಸುವ ಕಾರ್ಯ ನಡೆಯಿತು: vishwanews24
ಕಾಪು : ಕಾಪು ಧೂಮಾವತಿ ಸೇವಾ ಸಮಿತಿಯ ವತಿಯಿಂದ ಇಂದು ಕಾಪು ಪಡು ಧೂಮಾವತಿ ದೈವಸ್ಥಾನದ ವಠಾರದಲ್ಲಿ ಭಾರತ ಲಾಕ್ ಡೌನ್ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳಿಗೆ ದಿನ ಬಳಕೆಯ ಅಗತ್ಯ ಸೊತ್ತುಗಳನ್ನು ವಿತರಿಸುವ ಕಾರ್ಯ ನಡೆಯಿತು. ಈ ಸಂದರ್ಭ ಉದ್ಯಮಿ ಯೋಗಿಶ್ ಶೆಟ್ಟಿ ಬಾಲಾಜಿ ಮಾತನಾಡಿ, ನಮ್ಮ ಸಂಸ್ಥೆಯು ಅರ್ಹ ಪಲಾನುಭವಿಗಳನ್ನು ಗುರುತಿಸಿ ಅವರಿಗೆ ಅಕ್ಕಿ ಸಹಿತ ಬೇಳೆ ಕಾಳುಗಳನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಿಟ್‍ಗಳನ್ನು ವಿತರಿಸುವ ಯೋಜನೆ ಇದೆ ಎಂದರು. ಸುಮಾರು 100 ಅರ್ಹ ಕುಟುಂಬಗಳಿಗೆ ಅಕ್ಕಿ, ಸಾಂಬಾರು ಪುಡಿ, ಉಪ್ಪು, ಬೆಲ್ಲ,ತೊಗರಿ ಬೇಳೆಗಳನ್ನುವಿತರಿಸಿದರು. ಈ ಸಂಧರ್ಭದಲ್ಲಿ ಉದ್ಯಮಿ ಯೋಗಿಶ್ ಶೆಟ್ಟಿ ಬಾಲಾಜಿ, ದೈವಸ್ಥಾನದ ಅರ್ಚಕ ಹರಿಶ್ಚಂದ್ರ ಕೋಟ್ಯಾನ್, ಸೇವಾ ಸಮಿತಿ ಅಧ್ಯಕ್ಷ ರಮನಾಥ ಶೆಟ್ಟಿ, ಅನಿಲ್‍ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
facebook video link
youtube video link
