ಕಾಪು : ನನ್ನ ಊರು ಮತ್ತು ನನ್ನ ಜನತೆಯ ಕಲ್ಯಾಣಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ :ಗುರ್ಮೆ ಸುರೇಶ್ ಶೆಟ್ಟಿ – Vishwanews24
ಕಾಪು : ನನ್ನ ಊರು ಮತ್ತು ನನ್ನ ಜನತೆಯ ಕಲ್ಯಾಣಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ :ಗುರ್ಮೆ ಸುರೇಶ್ ಶೆಟ್ಟಿ
ಕಾಪು : ಕಾಪು ಕ್ಷೇತ್ರ ನನ್ನ ಹುಟ್ಟೂರು. ನನ್ನ ಊರು ಮತ್ತು ನನ್ನ ಜನತೆಯ ಕಲ್ಯಾಣಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಸಮಾಜ ಸೇವೆಯ ಮೂಲಕವಾಗಿ ಬೆಳೆದು ಬಂದಿರುವ ನನಗೆ ಬಿಜೆಪಿ ರಾಜಕೀಯ ಶಕ್ತಿ ಕೊಟ್ಟು ಶಾಸಕನಾಗಿ ಸ್ಪರ್ಧಿಸಲು ಅವಕಾಶ ಕೊಟ್ಟು, ಜನರ ಸಮಸ್ಯೆಗಳಿಗೆ ಸ್ಪಂಧಿಸುವ ದಾರಿಯನ್ನು ತೋರಿಸಿಕೊಟ್ಟಿದೆ. ನನ್ನ ಊರಿನ ಜನತೆ ನನ್ನ ಗೆಲುವಿಗಾಗಿ ಕೈ ಜೋಡಿಸಿದರೆ, ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನರನ್ನು ಎಲ್ಲಿಯೂ ಸೋಲಲು ಬಿಡಲಾರೆ, ತಲೆ ತಗ್ಗಿಸಲು ಬಿಡುವುದಿಲ್ಲ. ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಜನಸೇವೆ ಮಾಡುತ್ತೇನೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಉಡುಪಿ: ಸರ್ವ ಸಮುದಾಯಗಳ ಏಳಿಗೆಗೆ ಬಿಜೆಪಿಗೆ ಬದ್ಧ: ಯಶ್‌ಪಾಲ್ ಸುವರ್ಣ – Vishwanews24
ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಮತಯಾಚನೆ ನಡೆಸಿ, ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಪು ವಿಧಾನಸಭಾ ಕ್ಷೇತ್ರವು ಕೋಸ್ಟಲ್ ಟೂರಿಸಂ, ಟೆಂಪಲ್ ಟೂರಿಸಂ, ಕೈಗಾರಿಕೆ ಮತ್ತು ಶೈಕ್ಷಣಿಕ ಹಬ್‌ಗ ಪ್ರಸಿದ್ಧಿ ಪಡೆಯುತ್ತಿದೆ. ಇಷ್ಟೆಲ್ಲಾ ವ್ಯವಸ್ಥೆಗಳಿದ್ದರೂ ನಮ್ಮ ಯುವಕರು ಉದ್ಯೋಗ ಅರಸಿ ಹೊರ ಜಿಲ್ಲೆ, ರಾಜ್ಯ, ರಾಷ್ಟ್ರಗಳಿಗೆ ತೆರಳುವಂತಾಗಿದೆ. ಕಾಪು ಕ್ಷೇತ್ರದಲ್ಲಿ ಬಲವಾಗಿರುವ ಕೋಸ್ಟಲ್ ಟೂರಿಸಂ, ಟೆಂಪಲ್ ಟೂರಿಸಂ, ಕೈಗಾರಿಕೆ ಮತ್ತು ಶೈಕ್ಷಣಿಕ ಹಬ್‌ಗಳಲ್ಲಿ ನಮ್ಮ ಊರಿನ ಯುವಕ-ಯುವತಿಯರಿಗೆ ಆದ್ಯತೆಯಡಿ ಕೆಲಸ ದೊರಕಿಸಿಕೊಡುವ ಮೂಲಕ ನಿರುದ್ಯೋಗ ನಿವಾರಣೆಗೆ ವಿಶೇಷ ಪ್ರಯತ್ನ ನಡೆಸುವುದಾಗಿ ಗುರ್ಮೆ ಸುರೇಶ್ ಶೆಟ್ಟಿ ಭರವಸೆ ನೀಡಿದ್ದಾರೆ.
ಉಡುಪಿ: ಸರ್ವ ಸಮುದಾಯಗಳ ಏಳಿಗೆಗೆ ಬಿಜೆಪಿಗೆ ಬದ್ಧ: ಯಶ್‌ಪಾಲ್ ಸುವರ್ಣ – Vishwanews24
