ಕಾಪು: ನವೆಂಬರ್ 1ರಂದು ಉಚಿತ ಮೂಳೆ ಸಾಂದ್ರತಾ, ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ – vishwanews24

Featured, ಉಡುಪಿ

ಕಾಪು: ನವೆಂಬರ್ 1ರಂದು ಉಚಿತ ಮೂಳೆ ಸಾಂದ್ರತಾ, ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಕಾಪು: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಾಪುವಿನ ರಾಷ್ಟ್ರೀಯ ಹೆದ್ದಾರಿ 66ರ ಕೋತಲ್ ಕಟ್ಟೆಯಲ್ಲಿರುವ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ವತಿಯಿಂದ ನವೆಂಬರ್ 1ರ ಭಾನುವಾರ ಉಚಿತ ಮೂಳೆ ಸಾಂದ್ರತಾ ತಪಾಸಣೆ, ನೇತ್ರ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಸಲಹಾ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಆವರಣದಲ್ಲಿ ನಡೆಯಲಿದೆ.

ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಮೂಳೆ ಖನಿಜ ಸಾಂದ್ರತಾ ತಪಾಸಣೆ, ನೇತ್ರ ತಪಾಸಣೆ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಸಲಹೆ ನೀಡಲಾಗುವುದು.

ಕೋಲಾರ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ; ಅಂಗಾಂಗ ದಾನದ ಮೂಲಕ ಇಬ್ಬರಿಗೆ ಹೊಸ ಬದುಕು – vishwanews24

ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಮೂಳೆ ಸವೆತ, ಮೂಳೆ ಖನಿಜ ಸಾಂದ್ರತೆ ಇಳಿಕೆ, ಗಂಟು ನೋವು, ಬೆನ್ನು ನೋವು ಹಾಗೂ ದೃಷ್ಟಿ ಸಂಬಂಧಿತ ಸಮಸ್ಯೆಗಳ ಕುರಿತು ತಪಾಸಣೆ ನಡೆಸಲಾಗುವುದು.

ಇದಲ್ಲದೆ ಮಹಿಳೆಯರ ಆರೋಗ್ಯ ಸಮಸ್ಯೆಗಳು, ಮೂಲವ್ಯಾಧಿ, ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಸಮಸ್ಯೆಗಳು, ಮುಖದ ಸೌಂದರ್ಯ ಹಾಗೂ ಕೂದಲಿನ ಸಮಸ್ಯೆಗಳಿಗೂ ತಜ್ಞ ವೈದ್ಯರಿಂದ ಉಚಿತ ಸಲಹೆ ನೀಡಲಾಗುವುದು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್‌ನ ಡಾ. ಸದಾನಂದ ಎಲ್. ಭಟ್ (ಎಂ.ಡಿ. ಆಯು.) ಹಾಗೂ ಡಾ. ಸುಷ್ಮಾ ಎಸ್. ಭಟ್ (ಎಂ.ಡಿ. ಆಯು.) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply