ಕಾಪು : ನಿವೃತ್ತ ಸಿ.ಆರ್.ಪಿ.ಎಫ್ ಯೋಧನ ಪತ್ನಿ ವನಜಾಕ್ಷಿ ಅವರಿಗೆ ಸಮ್ಮಾನ, ಗೌರವ ಅರ್ಪಣೆ -Vishwanews24

Featured, ಉಡುಪಿ

ಕಾಪು : ನಿವೃತ್ತ ಸಿ.ಆರ್.ಪಿ.ಎಫ್ ಯೋಧನ ಪತ್ನಿ ವನಜಾಕ್ಷಿ ಅವರಿಗೆ ಸಮ್ಮಾನ, ಗೌರವ ಅರ್ಪಣೆ -Vishwanews24

ಕಾಪು, : ಕಾಪು ಜೇಸಿಐನ ವತಿಯಿಂದ ಹಮ್ಮಿಕೊಳ್ಳಲಾದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮ ಪ್ರಯುಕ್ತ ಮಾಜಿ ಸಿ.ಆರ್.ಪಿ.ಎಫ್ ಯೋಧ ದಿ| ತೀರ್ಥಪ್ರಕಾಶ್ ಅವರ ಪತ್ನಿ ಚಂದ್ರನಗರ ಕ್ರೆಸೆಂಟ್ ಇಂಟರ್‍ನ್ಯಾಷನಲ್ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ವನಜಾಕ್ಷಿ ಅವರನ್ನು ಎ. 7ರಂದು ಕಾಪು ಜೇಸಿ ಭವನದಲ್ಲಿ ಸಮ್ಮಾನಿಸಿ, ಗೌರವಿಸಲಾಯಿತು.

ಸಮ್ಮಾನ ಕಾರ್ಯಕ್ರಮ ನೆರವೇರಿಸಿದ ಜೇಸಿಐ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಮಾತನಾಡಿ, ದೇಶಕ್ಕಾಗಿ ಸೇವೆ ಸಲ್ಲಿಸುವ ಯೋಧರು ಮತ್ತು ಅವರ ಕುಟುಂಬದವರನ್ನು ಸಮ್ಮಾನಿಸುವ ಮೂಲಕ ಯೋಧರ ಕುಟುಂಬಕ್ಕೆ ವಿಶೇಷ ಗೌರವ ನೀಡಿದಂತಾಗಿದೆ. ನಕ್ಸಲ್ ಧಾಳಿಯಿಂದ ಹುತಾತ್ಮರಾದ ಯೋಧರನ್ನು ಸ್ಮರಿಸುವ ಸಂದರ್ಭದಲ್ಲೇ ಜೇಸಿಐ ವತಿಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಸೇನಾ ಯೋಧರ ಪತ್ನಿಯನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.

ಸಮ್ಮಾನ ಸ್ವೀಕರಿಸಿದ ವನಜಾಕ್ಷಿ ಅವರು ಮಾತನಾಡಿ, ಸಿ.ಆರ್.ಪಿ.ಎಫ್ ಯೋಧರಾಗಿದ್ದ ತೀರ್ಥಪ್ರಕಾಶ್ ಅವರು ಸೇವಾವ„ಯಲ್ಲಿರುವಾಗಲೇ ಆಕಸ್ಮಿಕವಾಗಿ ಅಗಲಿದ್ದು, ಅವರ ಕಾಲಾನಂತರದಲ್ಲಿ 17 ವರ್ಷಗಳ ಬಳಿಕ ಅವರ ಹೆಸರಿನಲ್ಲಿ ಜೇಸಿಐ ಕಾಪು ಗೌರವ ಸಮರ್ಪಣೆ ಮಾಡುತ್ತಿರುವುದು ಸ್ಮರಣೀಯವಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರು ಮತ್ತು ಅವರ ಕುಟುಂಬ ನೆಮ್ಮದಿಯ ಜೀವನ ಸಾಗಿಸುತ್ತವೆ, ಅವರಿಗೆ ಯಾವುದೇ ತೊಂದರೆಗಳಿಲ್ಲ ಎಂದು ಯೋಚಿಸುವ ಜನರ ನಡುವೆ ಗೌರವಯುತವಾಗಿ ಬದುಕಲು ಕೆಲವು ಕುಟುಂಬಗಳು ಇಂದಿಗೂ ಸಂಕಷ್ಟ ಪಡುತ್ತಿವೆ. ಅಂತಹ ಕುಟುಂಬಗಳನ್ನು ಗುರುತಿಸಿ, ಗೌರವಿಸುವ ಕೆಲಸ ಸಂಘ ಸಂಸ್ಥೆಗಳ ಮೂಲಕ ನಡೆಯಬೇಕಿದೆ ಎಂದರು.

ಛತ್ತೀಸ್‍ಘಡದಲ್ಲಿ ನಕ್ಸಲೀಯರ ಧಾಳಿಯಿಂದಾಗಿ ಹುತಾತ್ಮರಾದ ಭಾರತೀಯ ಸೇನೆಯ ಯೋಧರಿಗೆ ಕಾಪು ಜೇಸಿಐನ ವತಿಯಿಂದ ನುಡಿನಮನ ಸಲ್ಲಿಸಲಾಯಿತು.

ಜೇಸಿಐನ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮದ ರಾಷ್ಟ್ರೀಯ ಸಂಯೋಜಕಿ ಸೌಮ್ಯ ರಾಕೇಶ್, ಜೇಸಿಐ ವಲಯಾ„ಕಾರಿ ರಮೇಶ್ ನಾಯ್ಕ್, ಕಾಪು ಜೇಸಿಐನ ನಿಕಟ ಪೂರ್ವ ಅಧ್ಯಕ್ಷ ವಿನೋದ್ ಕಾಂಚನ್, ಪೂರ್ವಾಧ್ಯಕ್ಷರಾದ ಜಗದೀಶ್ ಬಂಗೇರ, ಅರುಣ್ ಶೆಟ್ಟಿ ಪಾದೂರು, ರಾಜೇಂದ್ರ ಬಿ.ಕೆ., ಜೇಸಿರೆಟ್ ಅಧ್ಯಕ್ಷೆ ಗಾಯತ್ರಿ ಜಿ. ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಜೇಸಿಐನ ಅಧ್ಯಕ್ಷೆ ಅರುಣಾ ಐತಾಳ್ ಅವರು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ದೀಕ್ಷಾ ಎರ್ಮಾಳ್ ವಂದಿಸಿದರು.