ಕಾಪು ಪರಸಭೆ- ಮಾಸ್ಕ್ ದಿನಾಚರಣೆ ಜಾಥಕ್ಕೆ ಚಾಲನೆ: vishwanews24
ಕಾಪು ಪರಸಭೆ- ಮಾಸ್ಕ್ ದಿನಾಚರಣೆ ಜಾಥಕ್ಕೆ ಚಾಲನೆ
ಕಾಪು: ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಜೂನ್೧೮ ರಂದು ಕೊರೋನಾ ಜಾಗೃತಿ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಡೇ ಅಚರಣೆಯ ಅಂಗವಾಗಿ ಕಾಪು ಪೇಟೆಯಲ್ಲಿ ಮಾಸ್ಕ್ ದಿನಾಚರಣೆ ಜಾಥಕ್ಕೆ ಪುರಸಭಾ ಸದಸ್ಯ ಅನಿಲ್ ಕುಮಾರ್ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಮಾತನಾಡಿ” ರಾಜ್ಯ ಸರ್ಕಾರದ ಅದೇಶದಂತೆ ಮಾಸ್ಕ್ ಡೇ ಆಚರಣೆ ಮತ್ತು ಮಾಸ್ಕ್ ಧರಿಸುವಂತೆ ಜನಜಾಗೃತಿ ಜಾಥ ಇದಾಗಿದ್ದು ಸಾರ್ವಜನಿಕರು ತಮ್ಮ ಮತ್ತು ಇತರರ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸಿ,ಕೈಗಳನ್ನು ಸೋಪ್ ಬಳಸಿ ತೊಳೆದುಕೊಂಡು ಶುಚಿತ್ವ ಕಾಪಾಡುವ ಮೂಲಕ ಕೊರೋನಾ ಮಹಮಾರಿಯ ವಿರುದ್ಧ ಹೋರಾಡುವ ಕೆಲಸ ಮಾಡಬೇಕೆಂದು ವಿನಂತಿಸಿದರು. ಶುಕ್ರವಾರದಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸಿ ತಿರುಗಾಡಬೇಕು ತಪ್ಪಿದಲ್ಲಿ ರೂಪಾಯಿ ೨೦೦ ದಂಡ ಪಾವತಿಸಲಾಗುವುದು ಎಂದರು. ಈ ಸಂಧರ್ಭದಲ್ಲಿ ಪುರಸಭಾ ವಿವಿಧ ವಿಭಾಗದ ಅಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

