Featured

ಕಾಪು ಪುರಸಭಾ ಚುನಾವಣೆಗೆ ರಾಜಕೀಯ ಪಕ್ಷಗಳದ್ದುಅಸ್ತ್ರವಾಯಿತೇ- ಪುರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ:ಓಟು ಹಾಕುವ ಮುನ್ನಾ ಪ್ರತಿಯೊಬ್ಬರೂ ಓದಲೇ ಬೇಕಾದ ಸುದ್ದಿ ಇದು: vishwanews24

ಕಾಪು ಪುರಸಭಾ ಚುನಾವಣೆಗೆ ರಾಜಕೀಯ ಪಕ್ಷಗಳದ್ದುಅಸ್ತ್ರವಾಯಿತೇ- ಪುರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ:ಪ್ರತಿಯೊಬ್ಬರೂ ಓದಲೇ ಬೇಕಾದ ಸುದ್ದಿ ಇದು:vishwanews24

ಕಾಪು: ಚುನಾವಣೆ ಬಂದಾಗ ಎದುರಿಸಲು ಯಾವುದಾದರೊಂದು ಅಸ್ತ್ರಬೇಕು ಅದೇ ಅಸ್ತ್ರದಿಂದ ಪ್ರಯೋಗಿಸಿ ಮತದಾರನ ಮನಸ್ಸು ಬದಲಾಯಿಸಿ ಓಟ್ ಗಿಟ್ಟಿಸಿಕೊಳ್ಳುವ ಬ್ಲ್ಯಾಕ್‍ಮೇಲ್ ತಂತ್ರ ಎಲ್ಲಾ ರಾಜಕೀಯ ಪಕ್ಷಗಳದ್ದು ಅದು ಯಾವುದೇ ಚುನಾವಣೆ ಬಂದರೂ ಸರಿ ಅದನ್ನ ಎದುರಿಸಲು ಬೇಕಾದ ಅಸ್ತ್ರ ರೆಡಿಮಾಡಿಯೇ ಎಲ್ಲಾ ಪಕ್ಷಗಳು ಚುನಾವಣೆಯ ರಣರಂಗಕ್ಕೆ ಇಳಿಯುವಂತದ್ದು ಅಂತಹದೇ ಪ್ರಯತ್ನ ಈ ಬಾರಿ ಕಾಪು ಪುgಸÀಭಾ ಚುನಾವಣೆಯಲ್ಲೂ ಮುಂದುವರಿದಿದೆ.

2016 ರಲ್ಲಿ ಕಾಪು ಗ್ರಾಮ ಪಂಚಾಯತ್ ವ್ಯವಸ್ಥೆಯಿಂದ ಪುರಸಭೆ ಅನ್ನುವ ವ್ಯವಸ್ಥೆಗೆ ಮೇಲ್ದರ್ಜೆಗೇರಿತು ಆ ಸಮಯದಲ್ಲಿ ಯಾವ ರಾಜಕಾರಣಿಯಾಗಲಿ ಆಗಿನ ಪಂಚಾಯತ್ ಸದಸ್ಯರಾಗಲಿ ಪ್ರತಿಭಟಿಸಲಿಲ್ಲ ಅಥಾವ ಗ್ರಾಮಸ್ಥರಿಗೆ ಈ ವಿಚಾರವನ್ನು ತಿಳಿಸಲೂ ಇಲ್ಲ ಎಂಬುದು ಸ್ಪಷ್ಟವಾದ ವಿಚಾರ.

2016 ರಲ್ಲಿಯೇ ನೂತನ ರೂಪುರೇಷೆಗೊಂಡ ಪುರಸಭೆಗೆ ಚುನಾವಣೆ ನಡೆಯಿತು ಆ ಸಮಯದಲ್ಲಿ ಕೂಡ ಹಿಂದೆ ಪಂಚಾಯತ್ ಸದಸ್ಯರೂ ಸೇರಿ ಎರಡು ಪಕ್ಷಗಳಿಂದ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿ ಚುನಾವಣೆ ಎದುರಿಸಿದ್ರು . ಆಗ ಯಾರಿಗೂ ಪುರಸಭೆಯ ಆಗುಹೋಗು ತಿಳಿದಿಲ್ಲ ಕೆಲವೇ ಕೆಲವು ಸದಸ್ಯರಿಗೆ ಅಲ್ಪಸ್ವಲ್ಪ ಮಾಹಿತಿಯ ಕೈಪಿಡಿ ಮಸ್ತಕದೊಳಗಿತ್ತು. 2016ರ ಚುನಾವಣೆ ಸಮಯದಲ್ಲಿ ಕಾಂಗ್ರೇಸ್ ಬಿಜೆಪಿ ನಡುವೆ ಇವರ ನಡುವೆ ತೀವೃ ಪೈಪೋಟಿಯ ಸ್ಪರ್ಧೆ ನಡೆಯಿತು , ಬಿಜೆಪಿಯವರು ಗ್ರಾಮಸ್ತರ ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆಯಲ್ಲಿ ಕೂರಿಸಿ ಕಾಂಗ್ರೇಸ್ ಶಾಸಕರು ಪುರಸಭೆ ಮಾಡಿದ್ದಾರೆ ಅದರ ವಿರುದ್ಧ ಹೋರಾಡಬೇಕು ಅದಕ್ಕಾದರೂ ಜನ ಬಿಜೆಪಿಗೆ ಮತ ಕೊಡಿ ಎಂದು ಮನೆಮನೆಗೆ ತೆರಳಿ ಕಸರತ್ತು ಮಾಡಿ 11 ಸೀಟು ಗೆದ್ದು ಬಂದ್ರು. ಆದರೇ ಕಾಂಗ್ರೇಸ್ ಕೂಡ ಸುಮ್ನಿರಲಿಲ್ಲ ಪುರಸಭೆ ತಂದದ್ದು ಗ್ರಾಮದ ಅಭಿವೃದ್ಧಿಗಾಗಿ-ಕಾಂಕ್ರೀಟ್ ರಸ್ತೆ-ಶುದ್ಧ ನೀರು-ದಾರಿದೀಪ ಒಳಚರಂಡಿ ವ್ಯವಸ್ಥೆ ಮಾಡ್ತೇವೆ ತೆರಿಗೆ ಏರಿಕೆ ಆಗಲ್ಲ ಪಂಚಾಯತ್ ವ್ಯವಸ್ಥೆಯ ರೀತಿಯಲ್ಲಿಯೇ ಪುರಸಭೆ ಇರ್ತದೆ ಜನ ಭಯ ಪಡುವುದು ಬೇಡ ಅಂದ್ರೂ ಇವ್ರು ಅಷ್ಟೇ ಹೇಗೊ ಸರ್ಕಸ್ ಮಾಡಿ 12 ಸೀಟ್ ಗೆದ್ದು ಬಂದ್ರು ಕಡೆಗೆ 23 ವಾರ್ಡಿನಲ್ಲಿ ಬಹುಮತ ಕಾಂಗ್ರೇಸ್ ಗೆ ಬಂತು ಖುಷಿ ಪಟ್ರು ಮೊದಲ ಬಾರಿಗೆ ಪುರಸಭೆಯ ಗದ್ದುಗೆಯನ್ನ ಏರಿಯೇ ಬಿಟ್ರು ಶುರುವಾಯಿತು ಕಾಪು ಪುರಸಭೆಯಲ್ಲಿ ಕಾಂಗ್ರೇಸ್ ದರ್ಬಾರ್.

ದರ್ಬಾರ್ ಆರಂಭಿಸಿದ ಕೆಲವೇ ಸಮಯದಲ್ಲಿ ಬಂತು ಕೋಟಿ ಕೋಟಿ ಅನುದಾನ ರಸ್ತೆ-ನೀರು-ದಾರಿ ದೀಪ -ಚರಂಡಿಗೆ ಎಲ್ಲಾದಕ್ಕೂ ಶಂಕುಸ್ಥಾಪನೆಯಾಯ್ತು ಕಾಮಗಾರಿ ಕೂಡ ಶುರುವಾಯ್ತು ಅದರ ನಡುವೆ ಜನರಿಗೆ ಬಿತ್ತು ಮೊದಲ ಪೆಟ್ಟು “ಹೆಚ್ಚಿದ ತೆರಿಗೆ ಹೊರೆ” ಮಾಡಿದ ಅಭಿವೃದ್ಧಿ ಕೆಲಸ ಎಲ್ಲಾವೂ ತೆರಿಗೆ ಏರಿಕೆಯ ವಿಚಾರದಲ್ಲಿ ಮಣ್ಣು ಪಾಲಾಯಿತು.

ಅದರ ನಡುವೆ ಹೊಸ ಬೆಳವಣಿಗೆಯಂದರೆ ನೂತನವಾಗಿ ಅನುಷ್ಠಾನಕ್ಕೆ ಬಂದ ಕಾಪು ನಗರಾಭಿವೃದ್ಧಿ ಪ್ರಾಧಿಕಾರ ಆ ಸಮಯದಲ್ಲಿ ಪುರಸಭೆಯಲ್ಲಿ ಆಡಳಿತ ಕಾಂಗ್ರೇಸ್-ಶಾಸಕ ಕೂಡ ಕಾಂಗ್ರೇಸ್, ವಿರೋಧ ಪಕ್ಷದಲ್ಲಿ ಮಾತ್ರ ಬಿಜೆಪಿ ಆ ಸಮಯದಲ್ಲಿ ಕೆಲವೇ ಕೆಲವು ಸದಸ್ಯರು ವಿರೋದಿಸಿದ್ದು ಬಿಟ್ಟರೆ ಮತ್ತೆ ಈ ವಿಚಾರದ ಬಗ್ಗೆ ಬಿಜೆಪಿಗೆ ಮತ್ತು ಕಾಂಗ್ರೇಸ್ ಗೆ ಮತ ಹಾಕಿದ ಒಂದೇ ಒಂದು ಮತದಾರರಿಗೆ ಮಾಹಿತಿ ನೀಡಲಿಲ್ಲ ಮಾತ್ರವಲ್ಲದೆ ವಿರೋಧಪಕ್ಷದಲ್ಲಿದ್ದ ಬಿಜೆಪಿ ಕೂಡ ಸದನದ ಭಾವಿಗೆ ಇಳಿಯಲು ಇಲ್ಲ -ಸಭಾತ್ಯಾಗ ಮಾಡಲೂ ಇಲ್ಲ .

ಸರಿ ಮುಂದೇನಾಯತ್ತು ಕಾಪುವಿಗೆ ಪ್ರಾಧಿಕಾರವೂ ಬಂತೂ ಪಂಚಾಯತ್ ವ್ಯವಸ್ಥೆಯ ಒಂದೇ ಒಂದು ಇಟ್ಟಿಗೆ ಕೂಡ ಪುರಸಭೆಯಲ್ಲಿ ಇರ್ಲಿಲ್ಲ ಏನಿದ್ದರೂ ಹೊಸ ಅಧ್ಯಾಯ ಪ್ರಾರಂಭವಾಗಿಯೇ ಬಿಡ್ತು ಜನ ತೆರಿಗೆ ಜಾಸ್ತಿ ಕಟ್ಟಿದ್ರೂ ಶಾಪ-ಕೋಪ ಹಾಕಿದ್ರೂ ಏನ್ ಮಾಡಿದ್ರೂ ಯಾವ ಪ್ರಯೋಜನವೂ ಇಲ್ಲ ” ಬಡವನ ಕೋಪ ದವಡೆಗೆ ಮೂಲ” ಅನ್ನುಂತಾಯಿತು.

23 ಸದಸ್ಯರು ಪುರಸಭೆ ಕೌನ್ಸಿಲ್ ಮೀಟಿಂಗ್‍ಗೆ ಬರುವ ಹಲ್ವಾ-ಇಡ್ಲಿ ತಿಂದ್ರು ಕೆಲವರು ಮಾತಾಡಿದ್ರು-ಇನ್ನು ಕೆಲವರು ಮೊಬೈಲ್ ನೋಡಿದ್ರು-ಇನ್ನು ಕೆಲವರು ಸುಮ್ಮನೆ ಕೂತ್ರು.ಕಾಂಗ್ರೇಸ್‍ಗೆ ಏನ್ ಬೇಕ್ ಅದನ್ನ ಮಾಡಿಯೇ ತೀರಿಸಿತು ಒಟ್ಟು ಒಂದೂವರೆ ವರ್ಷದ ಅವಧಿಯಲ್ಲಿ.

 

ಅಷ್ಟು ಹೊತ್ತಿಗೆ ವಿಧಾನಸಭಾ ಚುನಾವಣೆಗೆ ದಿನ ಹತ್ತಿರ ಬಂತು ಮತ್ತೆ ಶುರುವಾಯಿತು ಎರಡು ಪಾರ್ಟಿಯ ಹೈಡ್ರಾಮ,ಬಿಜೆಪಿ ಕಾಂಗ್ರೇಸ್ ಮೇಲೆ ಅಪವಾದ-ಕಾಂಗ್ರೇಸ್ ಬಿಜೆಪಿ ಮೇಲೆ ಅಪವಾದ ಮಾಡ್ತು ಬಿಜೆಪಿ ಇದನ್ನೆ ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೇಸ್ ಮೇಲೆ ಇಟ್ಟ ಗುರಿ ಮುಟ್ಟಿಯೇ ಬಿಡ್ತು.ಪುರಸಭೆ ಕಾಪುವಿಗೆ ಬಂದ ಪರಿಣಾಮವಾಗಿ ಜನರಿಗೆ ಸಮಸ್ಯೆಯಾಗಿದ್ದು ಪ್ರಾಧಿಕಾರ ಕಾಂಗ್ರೇಸ್ ಪಾರ್ಟಿಯ ಪಾಪದ ಕೂಸು ಇದರಿಂದಾಗಿ ಜನರಿಗೆ ಸಮಸ್ಯೆಯಾಗುತ್ತಿದೆ ಮಾತ್ರವಲ್ಲದೆ ಕಳೆದ ಪುರಸಭಾ ಚುನಾವಣೆಯಲ್ಲಿ ಬೆಜೆಪಿಗೆ ಬಹುಮತ ಕೊಡ್ಲಿಲ್ಲ ಮಾತ್ರವಲ್ಲದೆ ಶಾಸಕರೂ ಕೂಡ ಆ ಪಾರ್ಟಿಯದ್ದೆ ಹಾಗಾಗಿ ನಮ್ಮ ಕೂಗನ್ನು ಕೇಳುವ ಕಿವಿ ಕಿವುಡಾಯಿತು, ಇ ಸಲದ ವಿಧಾನಸಾಭ ಚುನಾವಣೆಯಲ್ಲಿ ಕಾಪುವಲ್ಲಿ ಬಿಜೆಪಿ ಶಾಸಕ ಗೆದ್ದು ಬರಬೇಕು ಆ ಸಮಯದಲ್ಲಿ ನಮ್ಮ ಧ್ವನಿಗೆ ಧ್ವನಿಗೂಡಿಸಿ ಸರ್ಕಾರಕ್ಕೆ ಮುಟ್ಟಿಸುವ ಪ್ರತಿನಿಧಿ ಇದ್ದೇ ಇರುತ್ತಾರೆ ಕಾಂಗ್ರೇಸ್ ಮಾಡಿದ ಪುರಸಭೆ-ಪ್ರಾಧಿಕಾರ ರದ್ದು ಮಾಡುತ್ತೇವೆ ಮಾತ್ರವಲ್ಲದೆ ಕಾಂಗ್ರೇಸ್ ಪಾರ್ಟಿಯ ನಾಯಕರಿಗೆ ಪಟ್ಟ ಕಟ್ಟಲು ಪ್ರಾಧಿಕಾರ ತಂದಿರುವುದು ಎಂಬುದಾಗಿ ಬಿಟ್ಟಿ ಪ್ರಚಾರ ಮಾಡಿ ಭಿತ್ತಿಪತ್ರ ಹಂಚಿ, ಕಡೆಗೆ ಹೇಗೊ ಮೋದಿಯ ದಯೆಯಿಂದ ಕಾಪುವಿನಲ್ಲಿ 10 ಸಾವಿರ ಚಿಲ್ಲದೆ ಮತದ ಅಂತರದಿಂದ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಜನ ಕಳ್ಸಿದ್ರು.

ಕಾಪು ಪುರಸಭೆಯ ಮತದಾರರಿಗೆ ಬಾರಿ ನಂಬಿಕೆ ಇತ್ತು ಈ ಸಲ ಬಿಜೆಪಿ ಬಂತ್ತಲ್ಲ ಖಂಡಿತ ಪ್ರಾಧಿಕಾರ ಮತ್ತೆ ಪುರಸಭೆಯ ಸಮಸ್ಯೆ ಕ್ಲೀಯರ್ ಆಗುತ್ತೆ ಅಂತಾ, ಅದೇ ಸಮಯಕ್ಕೆ ಅಧ್ಯಕ್ಷ ಅವಧಿಗೆ ಎರಡನೇ ಸುತ್ತಿನ ಮೀಸಲಾತಿ ಪ್ರಕಟವಾಯ್ತು ಯಾರೋ ಒಬ್ಬ ಪುಣ್ಯಾತ್ಮ ಮೀಸಲಾತಿಗೆ ತಡೆಯಾಜ್ಞೆ ತಂದು ಒಂದೂವರೆ ವರ್ಷ ಇಡೀ ಪುರಸಭೆ ಆಡಳಿತಾಧಿಕಾರಿಯ ಕೈ ಬಂತು- ಓಟ್ ಹಾಕಿದ ಸದಸ್ಯರ ಸಭೆಯೂ ಇಲ್ಲ ಇತ್ತ ಕಡೆ ಜನ ಸಮಸ್ಯೆಗೆ ಪರಿಹಾರವೂ ಇಲ್ಲ.

ಒಂದೂವರೆ ವರ್ಷದ ನಂತರ ಮರುಮೀಸಲಾತಿ ಪ್ರಕಟವಾಯ್ತು ಬಿಜೆಪಿ ಶಾಸಕ ಮತ್ತು ಸಂಸದರ ಕೃಪಾಕಟಾಕ್ಷದಿಂದ ಮತ ಪಡೆದು ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಅಲಂಕಾರ ಮಾಡಿಯೇ ಬಿಡ್ತು.ಅದರ ನಡುವೆ ಬಿಜೆಪಿ ಸÀರ್ಕಾರದ ಅವಧಿಯಲ್ಲಿಯೇ ಪ್ರಾಧಿಕಾರ ಕೂಡ ಬಿಜೆಪಿಯ ಕೈ ವಶವಾಯ್ತು ಇವರದ್ದೆ ಪಕ್ಷದ ನಾಯಕ ಅಧ್ಯಕ್ಷರಾದ್ರೂ, ಪುರಸಭೆಯ ತೆರಿಗೆ ಮತ್ತೆ ಏರಿಕೆಯಾಯ್ತು , ಕುಡಿಯುವ ನೀರಿಗಾಗಿ ನೆಲದಡಿಗೆ ಪೈಪ್ ಹಾಕಿದ್ರು ನೀರು ಬಂದಿಲ್ಲ-ದಾರಿ ದೀಪ ಉರಿಯಲಿಲ,್ಲ ಮಳೆ ನೀರು ಚರಂಡಿಯಲ್ಲಿ ಹೋಗ್ಲೆ ಇಲ್ಲ ಜನರಿಗೆ ಕೊಟ್ಟ ಭರವಸೆ – ಹುಟ್ಟಿಸಿದ ಆಸೆ ಹಾಗೇಯೆ ಉಳಿದು ಬಿಡ್ತು, ಅವತ್ತೂ ಎಂ.ಎಲ್.ಎ ಚುನಾವಣೆಯ ಸಮಯದಲ್ಲಿ ನೀಡಿದ ಪ್ರಾಧಿಕಾರದ ಸಮಸ್ಯೆಯ ಪರಿಹಾರಕ್ಕೆ ಭರವಸೆಗೆ ಅವತ್ತಿಂದ ಇವತ್ತಿನವರೆಗೆ ಸರಿ ಮಾಡ್ಲಿಕ್ಕೆ ಆಗ್ಲೆ ಇಲ್ಲ, ಬಿಜೆಪಿ ಕಾಪುವಿನಲ್ಲಿ ಆಡಳಿತಕ್ಕೆ ಬಂದು ಹತ್ತಿಹತ್ತಿರ ನಾಲ್ಕು ವರ್ಷಕ್ಕೆ ಸಮೀಪ ಇದೆ, ಬಾಕಿ ಉಳಿದಿರುವ ದಿನ ಕಡಿಮೆ ಹಿಂದೆ ಹೋದ ದಿವೇ ಜಾಸ್ತಿ.


ಅವತ್ತೂ ಕೂಡ ಇದೇ ನಾಯಕರು 2 ಪಕ್ಷದಿಂದ ಮನೆಬಾಗಿಲಿಗೆ ಬಂದು ಮತ ಕೇಳಿದವರು ಇವತ್ತೂ ಕೂಡ ಅದೇ ನಾಯಕರು ವೋಟಿಗಾಗಿ ನಿಮ್ಮ ಮನೆಬಾಗಿಲನ್ನು ಬಡಿಯುತ್ತಿರುವವರು ಎಂಬುದು ನೆನಪಿರಲಿ.
ಕಾಂಗ್ರೇಸ್ ಹೇಗೊ ಪ್ರಾಧಿಕಾರ-ಪುರಸಭೆ ಮಾಡಿ ಹೋಯ್ತು ಅದಕ್ಕೆ ಜನ ಕಳೆದ ವಿಧಾನಸಾಭ ಚುನಾವಣೆಯಲ್ಲಿ ಉತ್ತರ ನೀಡಿದ್ರೂ, ಭರವಸೆÀ ಕೊಟ್ಟ ಬಿಜೆಪಿ ಹಾಗಾದರೇ 4 ವರ್ಷದ ಅವಧಿಯಲ್ಲಿ ಏನು ಮಾಡಿತು…?? ಕಾಲ ಮಿಂಚಿಹೋಗಿಲ್ಲ ಹಠ-ಛಲ-ಇಚ್ಛೆ ಇದ್ದರೆ ಇನ್ನೂ ಒಂದು ವರ್ಷ ಮತ್ತು ಕೆಲವೆ ಕೆಲವು ದಿನಗಳು ಬಾಕಿ ಇದೆ ಮಾಸ್ಟರ್ ಪ್ಲ್ಯಾನ್ ತಯಾರಿಸಿ ಮಧ್ಯಮ ವರ್ಗದ -ಬಡ ಜನರ ಸಮಸ್ಯೆಗೆ ಪರಿಹಾರ ಒದಗಿಸಿ ಕೊಡಬಹುದು…!

ಜನ ಐದು ವರ್ಷ ಎರಡು ಪಕ್ಷದ ದೊಂಬರಾಟ ನೋಡಿದ್ರು 23 ವಾರ್ಡಿನ ಜನರಿಗೂ ಗೊತ್ತಿದೆ ಅವರವರ ವಾರ್ಡಿನಲ್ಲಿ ಎಷ್ಟು ಕೆಲಸ ಆಗಿದೆ-ಆಗಿಲ್ಲ ಎಂಬುದು ಈ ಸಲ ಚುನಾವಣೆಯಲ್ಲಿ ಯಾವ ಪ್ರಾಧಿಕಾರ, ಪುರಸಭೆ, ತೆರಿಗೆ, ನೀರು, ರಸ್ತೆ, ಅಂದ್ರೂ ಕೂಡ ಕ್ಯಾರೇ ಮಾಡಲ್ಲ ಕಾರಣವಿಷ್ಟೆ ಮತದಾರ ಬುದ್ದಿವಂತ ಪಕ್ಕಾ ಕಿಂಗ್ ಮೇಕರ್.

ಈ ಸಲವೂ ಕೂಡ ಅದೇ ಪ್ರಾಧಿಕಾರ -ಅದೇ ತೆರಿಗೆ-ಅದೇ ಮುಖಗಳು ಮತ್ತೆ ನಿಮ್ಮ ಮನೆಗೆ ಮುಂದೆ ಬಂದಿದೆ. ಹೊಸ ವಿಚಾರ ಯಾವುದೂ ಇಲ್ಲ ಅದೇ ಪ್ರಾಧಿಕಾರ-ಅದೇ ಪುರಸಭೆ-ಅಭಿವೃದ್ದಿ ಮೂಲ ಮಂತ್ರ -ಪ್ರತಿ ಚುನಾವಣೆಗೂ ಅದೊಂದು ಅಸ್ತ್ರವಾಗಿಬಿಟ್ಟಿದೆ.
ಕಾದು ನೊಡಬೇಕಿದೆ ಮತದಾರನ ಚಿತ್ತ ಯಾರತ್ತ- ಇದುವರೆಗೆ ಗುಟ್ಟು ಬಿಟ್ಟುಕೊಡದ ಮತದಾರರ ಯಾವ ಚಿಹ್ನೆಗೆ ಮತಹಾಕಿ ಯಾರನ್ನು ಪುರಸಭೆಯ ಗದ್ದುಗೆಯಲ್ಲಿ ಕೂರಿಸುತ್ತಾನೆಂದು..??
ಪೊಲಿಟಿಕಲ್ ಬ್ಯರೋ ವಿಶ್ವನ್ಯೂಸ್24

Vishwa News 24

Recent Posts

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

15 hours ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

15 hours ago

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು – vishwanews24

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…

15 hours ago

ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – vishwanews24

ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…

16 hours ago

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ – vishwanews24

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…

16 hours ago

ಕೋಳಿಮರಿ ವಿತರಣೆ : ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ – vishwanews24

 ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ  ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…

16 hours ago