ಕಾಪು: ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 7 ವಾರ್ಡಿನಲ್ಲಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿತ್ತು ಈ ಪೈಕಿ ಒಂದು ಸೀಟು ಗೆಲ್ಲುವ ಮುಖಾಂತರ ಎರಡು ರಾಷ್ಟಿçÃಯ ಪಕ್ಷಗಳಿಗೆ ಕರಾವಳಿ ಭಾಗದಲ್ಲಿ ಮುಖಭಂಗಮಾಡಿದೆ.
ಬೆಜೆಪಿಯ ಸ್ಥಳಿಯ ಶಾಸಕ ಹಾಗೂ ಪ್ರಾಧಿಕಾರದ ಅಧ್ಯಕ್ಷರ ಜತೆಗಿನ ಟಿಕೆಟ್ ನೀಡುವ ವಿಚಾರವಾಗಿ ಭಿನ್ನಮತಗೊಂಡು ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿ ಹೊರಬಂದಿದ್ದ ಉಮೇಶ್ ಕರ್ಕೆರಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದೆಂದು ನಿರ್ಧರಿಸಿದ್ದು ಮಾತ್ರವಲ್ಲದೆ ಬಡಗರಗುತ್ತು ವಾರ್ಡಿನಲ್ಲಿಯೂ ತನ್ನದೆ ಅಭ್ಯರ್ಥಿಯನ್ನು ಕಣಕ್ಕೀಳಿಸುವ ಪ್ಲಾö್ಯನ್ ಮಾಡಿದ್ದರು.
ಆ ಸಮಯದಲ್ಲಿ ಜೆಡಿಎಸ್ ಪಾರ್ಟಿ ಉಮೇಶ್ ಅವರಿಗೆ ರೆಡ್‌ಕಾರ್ಪೆಟ್ ಹಾಸಿ ಪಕ್ಷಕ್ಕೆ ಬರಮಾಡಿಕೊಂಡು ಬಿ ಫಾರ್ಮ್ ನೀಡಿ ಕೊಂಬಗುಡ್ಡೆ ವಾರ್ಡಿನಲ್ಲಿ ಸ್ಪರ್ಧಿಸಲು ಉತ್ತೇಜನ ನೀಡಿದ ಪರಿಣಾಮವಾಗಿ ೪ ಮಂದಿ ಮುಸ್ಲಿಂ ಅಭ್ಯರ್ಥಿಗಳ ನಡುವೆ ಕೊಂಬಗುಡ್ಡೆ ವಾರ್ಡಿನಲ್ಲಿ ಫಿನಿಕ್ಸ್ನಂತೆ ಗೆದ್ದು ಬಂದರು.ಈ ಪೈಕಿ ಕಾಪು ಪುರಸಭೆಯಲ್ಲಿ ಜೆಡಿಎಸ್ ಪಾರ್ಟಿ ಪ್ರಪ್ರಥಮ ಬಾರಿಗೆ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ
ಅದರ ಜತೆಗೆ ಕಾಂಗ್ರೇಸ್ ಪಾರ್ಟಿಯಲ್ಲಿ ಬಡಗರಗುತ್ತು ವಾರ್ಡಿನಲ್ಲಿ ತನ್ನದೆ ಕ್ಯಾಂಡಿಡೇಟ್ ವಿದ್ಯಾಲತ ಅವರಿಗೆ ಕಾಂಗ್ರೇಸ್‌ನಲ್ಲಿ ಸೀಟ್ ಕೊಡಿಸಿ ಅಲ್ಲಿಯೂ ಕೂಡ ತನ್ನದೆ ಅಭ್ಯರ್ಥಿಯನ್ನು ಗೆಲ್ಲಿಸಿದ ಕೀರ್ತಿ ಅವರ ಪಾಲಿಗಿದೆ.
ಒಟ್ಟಾರೆಯಾಗಿ ಈ ಬಾರಿ ಬಿಜೆಪಿ ಸುಲಭವಾಗಿ ಗೆಲ್ಲಬಹುದಾಗಿದ್ದ ಕೊಂಬಗುಡ್ಡೆ,ಬಡಗರ ಗುತ್ತು,ತೊಟ್ಟಂ,ದುಗ್ಗನ್‌ತೋಟ,ಪೊಲಿಪು,ಕೈಪುAಜಾಲು ವಾರ್ಡನ್ನು ಇತರೆ ಪಕ್ಷಗಳಿಗೆ ಬಿಟ್ಟುಕೊಟ್ಟಂತಾಗಿದೆ.
ಇನ್ನೂ ಬೀಡುಬದಿ ವಾರ್ಡಿನಲ್ಲಿ 156 ಮತಗಳನ್ನು ಪಡೆಯುವ ಮುಖಾಂತರ ಜೆಡಿಎಸ್ ಪಕ್ಷದ ಅಸ್ಥಿತ್ವ ಕರಾವಳಿ ಭಾಗದಲ್ಲಿದೆ ಮತ್ತು ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿಯ ಬಾಲಾಜಿಯ ಶ್ರಮ ಕೊಡುಗೆ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಬ್ಯುರೋ ರಿಪೋರ್ಟ್
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…