ಕಾಪು: ಈ ಬಾರಿಯ ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಪಾರ್ಟಿಗೆ ೧೨ ಸೀಟು ಗೆಲ್ಲಿಸಿಕೊಡುವ ಮೂಲಕ ಕಾರ್ಯಕರ್ತರ ನೈಜತೆ ಮತ್ತು ಪಕ್ಷದ ಮೇಲಿನ ನಂಬಿಕೆಗೆ ಮತ್ತೊಂದು ಸಾಕ್ಷಿಯಾಗಿದೆ.
ಭಾಜಪ ಕಾರ್ಯಕರ್ತರ ಪಕ್ಷ ಎಂಬುದನ್ನು ಹಿಂದಿನಿAದಲೂ ಡಂಗುರ ಸಾರಿಸಿಕೊಂಡು ಬಂದಿದ್ದರೂ ಕೂಡ ನೈಜ ಕಾರ್ಯಕರ್ತನಿಗೆ ಅನ್ಯಾಯವಾದ ಸಮಯದಲ್ಲಿ ಬಿಜೆಪಿ ಬೆಂಬಲಿಸಿಲ್ಲ ಎನ್ನುವ ಆರೋಪ ಇದ್ದರೂ ಕೂಡ ಕಾರ್ಯಕರ್ತ ಪಕ್ಷ ಬಿಡದೆ ಒದ್ದಾಟ- ಕೇಸು ಮಾಡಿಕೊಂಡು ಪಕ್ಷ ಕಟ್ಟುವಲ್ಲಿ ಯಶಸ್ವಿಯಾಗುತ್ತಾನೆ ಆದರೇ ನಾಯಕರು ಮಾತ್ರ ಸ್ವಂತ ಹಿತಾಸಕ್ತಿಗಾಗಿ ಬೇರೆ ಪಕ್ಷದ ಜತೆ ಪಲಾಯನ ಮಾಡಿರುವ ಉದಾಹರಣೆಗಳು ಇದೆ. ಅದರ ಜತೆಗೆ ಒಂದು ಕಾಲದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬೂಟಿನಿಂದ ಒದ್ದು ಬೇಕಾಬಿಟ್ಟಿ ಕೇಸು ಹಾಕಿ ಜೈಲಿನಲ್ಲಿ ಕೂರಿಸಿದ ಕಾಂಗ್ರೇಸ್ ಜೆಡಿಎಸ್ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಹುದ್ದೆ ನೀಡಿದ ಘಟನೆಯೂ ಕಣ್ಣಮುಂದೆ ಹಾದುಹೋಗುವುದು ಸಾಮಾನ್ಯವಾಗಿದೆ ಅದನ್ನೆಲ್ಲ ಸಹಿಸಿಕೊಂಡು ಪಕ್ಷದ ನೈಜ ಕಾರ್ಯಕರ್ತ ಬಿಜೆಪಿಯ ಜತೆಗೆ ನಿಂತವರು ನಿಜವಾಗಿಯೂ ದೇವದುರ್ಲಬ ಕಾರ್ಯಕರ್ತರು.
ಸರಿ ಮುಂದೆ ನೋಡುವ…ಈ ಬಾರಿಯ ಕಾಪು ಪುರಸಭಾ ಚುನಾವಣೆ ಬಿಜೆಪಿಗೆ ಪೂರಕವಾಗಿತ್ತು ಅಂದರೆ ಅದು ತಪ್ಪು ಗ್ರಹಿಕೆ ಕ್ಷೇತ್ರ ಮಟ್ಟದಿಂದ ಹಿಡಿದು ರಾಜ್ಯಮಟ್ಟದ ನಾಯಕರವರೆಗೂ ಅಸಮಾಧಾನ -ಗೊಂದಲಮಯ ವಾತಾವರಣ ಈ ಭಾಗದಲ್ಲಿತ್ತು ಆದರೆ ಕಡೇ ಕ್ಷಣದಲ್ಲಿ ಜಿಲ್ಲಾ ನಾಯಕರು-ಸ್ಥಳಿಯ ನಾಯಕರಿಂದ ಮತದಾರನ ಮನವೊಲಿಕೆ ಈ ಬಾರಿ ಸಕ್ಸಸ್ ತರಲು ಕಾರಣವಾಯಿತು ಅದಕ್ಕೆ ಮೂಲ ಕಾರಣ ಇಷ್ಟೇ ಬಿಜೆಪಿಯ ಕೆಲವು ನಾಯಕರಿಗೆ ಕಾರ್ಯಕರ್ತ ಬೇಡವಾದರೂ -ಕಾರ್ಯಕರ್ತನಿಗೆ ಧರ್ಮದ ಕಾರಣದಿಂದರೂ ಕೂಡ ಪಕ್ಷ ಬೇಕು ಅನ್ನಿಸಿತು ಹಾಗಾಗಿ ಬಿಜೆಪಿಯನ್ನು ಗೆಲ್ಲಿಸಿಕೊಟ್ಟರು ಆದ್ದರಿಂದ ಅವರು “ದೇವದುರ್ಲಬ” ಕಾರ್ಯಕರ್ತರು.
ಕರಾವಳಿ ಭಾಗದಲ್ಲಿ ಈ ಬಾರಿ ಬಿಜೆಪಿಗೆ ಅನಿಸಿದಷ್ಟು ಸೀಟುಗಳು ಬರಲೇ ಇಲ್ಲ ಅದಕ್ಕೆ ಸ್ಥಳಿಯ ಶಾಸಕರ ಮೇಲಿನ ಅಕ್ರೋಶವೆ ಹೊರತು ಬಿಜೆಪಿಯಿಂದಲ್ಲ ಎಂಬುದು ಸಾಬಿತಾಗಿದೆ..ಉದಾಹರಣೆ ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ ಇತ್ಯಾದಿ.
ಇನ್ನು ಬೋನಸ್ ಆಗಿ ಪರಿಣಮಿಸಿದ ಕ್ಷೇತ್ರಗಳು ಕೊಪ್ಪಲಂಗಡಿ-ಗರಡಿ-ಜನರಲ್ ಶಾಲೆ-ಕಳೆದ ಬಾರಿ ಕಾಂಗ್ರೇಸ್ ಈ ಭಾಗದಲ್ಲಿ ಪಾರುಪತ್ಯ ನಡೆಸಿತ್ತು ಈ ಸಲ ಬಿಜೆಪಿ ದರ್ಬಾರು ಮಾಡಲಿದೆ.ಹೀಗಾಗಿ ಈ ಸಲವೂ ಕೂಡ ಬಿಜೆಪಿಯ ನಿಜವಾದ ಅಭಿಮಾನಿಗಳು-ಹಿತೈಷಿಗಳು-ಮತ್ತು ನಾಯಕರಿಗೆ ಕಾರ್ಯಕರ್ತರು ಬೇಡವಾದರೂ ಪಕ್ಷದ ನೈಜ ದೇವದುರ್ಲಬ ಕಾರ್ಯಕರ್ತರ ಪರಿಶ್ರಮ ಫಲ ನೀಡಿದೆ ಎಂದುದು ಸತ್ಯ.
ಮಲ್ಪೆ : ಸೈಂಟ್‌ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…