ಕಾಪು ಬಂಟರ ಸಂಘ (ರಿ) ಇದರ ನೂತನ ಕಾರ್ಯದರ್ಶಿಯಾಗಿ ಯೊಗೀಶ್ ವಿ. ಶೆಟ್ಟಿ ಬಾಲಾಜಿ ಆಯ್ಕೆ  – vishwanews24

Featured, ಉಡುಪಿ

ಕಾಪು ಬಂಟರ ಸಂಘ (ರಿ) ಇದರ ನೂತನ ಕಾರ್ಯದರ್ಶಿಯಾಗಿ ಯೊಗೀಶ್ ವಿ. ಶೆಟ್ಟಿ ಬಾಲಾಜಿ ಆಯ್ಕೆ

12 ಗ್ರಾಮಗಳನ್ನೊಗೊಂಡ ಕಾಪು ಬಂಟರ ಸಂಘ (ರಿ) ಇದರ ನಿರ್ದೇಶಕರ ಸಭೆಯು ಸಂಘದ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರ ನೇತೃತ್ವದಲ್ಲಿ 4_02_2024 ರಂದು ನಡೆಯಿತು. ಈ ಸಭೆಯಲ್ಲಿ ಲೀಲಾಧರ ಶೆಟ್ಟಿಯವರ ಅಗಲುವಿಕೆಯಿಂದ ತೆರವಾದ ಕಾರ್ಯದರ್ಶಿ ಸ್ಥಾನಕ್ಕೆ ಸೂಕ್ತವಾದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಉದ್ಯಮಿ ಹಾಗೂ ತನ್ನ ಕಾಲೇಜು ದಿನಗಳಿಂದಲೇ ನಾಯಕರಾಗಿರುವ ಯೊಗೀಶ್ ವಿ. ಶೆಟ್ಟಿ ಬಾಲಾಜಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

ತೆರವಾದ ಜೊತೆ ಕೋಶಾಧಿಕಾರಿ ಸ್ಥಾನಕ್ಕೆ ಸಮಾಜ ಸೇವಕ ಕಳತ್ತೂರು ದಿವಾಕರ ಡಿ. ಶೆಟ್ಟಿಯವರನ್ನು ಸರ್ವಾನುಮತದೊಂದಿಗೆ ಆಯ್ಕೆ ಮಾಡಲಾಯಿತು.

ಪದಗ್ರಹಣ ಸಂದರ್ಭದಲ್ಲಿ ಎಲ್ಲಾ ನಿರ್ದೇಶಕರ ಸಹಕಾರವನ್ನು ಕೋರಿ ಸಂಘದ ಅಭ್ಯುದಯಕ್ಕಾಗಿ ಶ್ರಮಿಸುವೆವು ಎಂದು ಕಾರ್ಯದರ್ಶಿ ಮತ್ತು ಜೊತೆ ಕೋಶಾಧಿಕಾರಿ ಭರವಸೆ ನೀಡಿದರು.

ಮಂಗಳೂರು : ಶ್ರೀ ಕ್ಷೇತ್ರ ಪನೋಲಿ ಬೈಲ್‌ನಲ್ಲಿ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆ ಕೋಲ ನೆರವೇರಿಸಿದ ಯು.ಟಿ ಖಾದರ್ – vishwanews24

ಉಪಾಧ್ಯಕ್ಷರುಗಳಾದ ಪಂಜಿತ್ತೂರು ಗುತ್ತು ರವಿರಾಜ್ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ದೊರೆಗಳ ಗುತ್ತು ಬಾಲಕೃಷ್ಣ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಹೆಗ್ಡೆ ಕಲ್ಯಾ ಬೀಡು ಉಪಸ್ಥಿತರಿದ್ದರು. ಉಳಿಯಾರಗೋಳಿ, ಪಡು, ಮಲ್ಲಾರು, ಮೂಳೂರು, ಮಜೂರು, ಪಾದೂರು, ಇನ್ನಂಜೆ, ಕಳತ್ತೂರು, ಹೇರೂರು, ಪಾಂಗಳ ಹಾಗೂ ಇನ್ನಿತರ ಗ್ರಾಮಗಳ ನಿರ್ದೇಶಕರು ಹಾಜರಿದ್ದು ಉತ್ತಮ ಸಲಹೆ ಸೂಚನೆ ನೀಡಿದರು. ಜೊತೆ ಕಾರ್ಯದರ್ಶಿ ನಿರ್ಮಲ್ ಕುಮಾರ್ ಹೆಗ್ಡೆ ಸ್ವಾಗತಿಸಿ, ದಿವಾಕರ್ ಡಿ. ಶೆಟ್ಟಿ ವಂದಿಸಿದರು.

Leave a Reply