ಕಾಪು : ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆ ; ಹಕ್ಕಿಗಳ ವಾಸಸ್ಥಳ ಗೂಡು ಸಮೇತ ಮರವನ್ನೇ ಕಡಿದ ಭೂಪರು
ಕಾಪು : ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆ ; ಹಕ್ಕಿಗಳ ವಾಸಸ್ಥಳ ಗೂಡು ಸಮೇತ ಮರವನ್ನೇ ಕಡಿದ ಭೂಪರು
ಕಾಪು: ಕಾಪು ಪೇಟೆಯ ಒಳಭಾಗದ ಕಾರ್ಪೊರೇಷನ್ ಬ್ಯಾಂಕಿನ ಮುಂಭಾಗದ ಸುವರ್ಣ ಬಾರ್ ಬಳಿಯಲ್ಲಿದ್ದ ಬಹುವರ್ಷದ ಮರವೊಂದನ್ನು ಕಡಿದು ಹಾಕಿದ ಘಟನೆ ಸೋಮವಾರ ನಡೆದಿದೆ.
ಸಾವಿರಾರು ಹಕ್ಕಿಗಳು ವಾಸವಾಗಿದ್ದ ಈ ಮರವನ್ನು ಸೋಮವಾರ ಕಡಿದು ಹಾಕಿದ್ದಾರೆ.
ಈ ಮರದಲ್ಲಿ ಸಾವಿರಾರು ಹಕ್ಕಿಗಳು ವಾಸವಾಗಿದ್ದು ಹಕ್ಕಿಗಳ ಪಿಕ್ಕೆಗಳು ನೆಲಕ್ಕೆ ಬಿದ್ದು ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುವ ದೃಷ್ಟಿಯಿಂದ ಮರವನ್ನು ಕಡಿಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.



ಬಾರ್ ನಿರ್ಮಾಣವಾಗುವ ಮುನ್ನವೆ ಇದ್ದ ಈ ಮರವು ಸದ್ಯ ಸಾವಿರಾರು ಹಕ್ಕಿಗಳಿಗೆ ವಾಸಸ್ಥಾನ ಮತ್ತು ನೂರಾರು ಗೂಡುಗಳಿದ್ದವು ಜತೆಗೆ ಅದರಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಹೊರಬರುವ ಮೊಟ್ಟೆಯೊಳಗಿನ ಮರಿಗಳಿದ್ದವು.
ಆದರೇ ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುತ್ತೆಂಬ ದೃಷ್ಟಿಯಿಂದ ಈ ಮರವನ್ನು ಕಡಿದು ಹಾಕಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯ ಅಕ್ರೋಶ ಹೊರಹಾಕಿದೆ.
