ಕಾಪು ಬಿಜೆಪಿ ಕಾರ್ಯಕರ್ತರಿಂದ ರೋಡ್ ಶೋ ನಡೆಸಿ ಮತಯಾಚನೆ. https://wp.me/p9KQap-5AE
ಕಾಪು ಬಿಜೆಪಿ ಕಾರ್ಯಕರ್ತರಿಂದ ರೋಡ್ ಶೋ ನಡೆಸಿ ಮತಯಾಚನೆ.
ಕಾಪು: ಉಡುಪಿ ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕುಮಾರಿ ಶೋಭಾ ಕರಂದ್ಲಾಜೆ ಪರ ಕಾಪು ಬಿಜೆಪಿ ಕಾರ್ಯಕರ್ತರು ಪೇಟೆಯಲ್ಲಿ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು.
ಸುಮಾರು 300 ಕ್ಕೂ ಅಧಿಕ ಕಾರ್ಯಕರ್ತರು ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಜಪೇಯಿ ಕಟ್ಟೆಯ ಬಳಿ ಬಹಿರಂಗ ಸಭೆ ನಡೆಸಲಾಯಿತು.
ಸಭೆಯಲ್ಲಿ ಶೋಭಾ ಕರಂದ್ಲಾಜೆ ಮಾತಾಡಿ” ಈ ದೇಶದ ಅಭಿವೃದ್ಧಿ ಮತ್ತು ರಕ್ಷಣೆಯ ಜವಾಬ್ದಾರಿ ಪ್ರತಿಯೊಂದು ಭಾರತಿಯನದ್ದು.ಈ ದೇಶ ಕಂಡ ಪ್ರಧಾನಿ ನರೇಂದ್ರ ಮೋದಿಯವರನ್ನ ಮತ್ತೊಂದು ಬಾರಿ ಪ್ರಧಾನಮಂತ್ರಿ ಮಾಡುವ ಉದ್ದೇಶದಿಂದ ಎಲ್ಲಾರೂ ಬಿಜೆಪಿ ಗೆ ಮತ ನೀಡುವ ಮೂಲಕ ದೇಶವನ್ನ ಗೆಲ್ಲಿಸಬೇಕು ಎಂದರು.
ರೋಡ್ ಶೋ ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕ್ಷೇತ್ರ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಕಿದಿಯೂರು ಉದಯ್ ಕುಮಾರ್ ಶೆಟ್ಟಿ,ಗುರ್ಮೆ ಸುರೇಶ್ ಶೆಟ್ಟಿ
ಅರುಣ್ ಶೆಟ್ಟಿ ಪಾದೂರು,ಕಿರಣ್ ಆಳ್ವಾ.ಕುಯಿಲಾಡಿ ಸುರೇಶ್ ನಾಯಕ್ ಮೊದಲಾದವರು ಭಾಗಿಯಾಗಿದ್ದರು.


