Featured

ಕಾಪು : ಬೀಚ್‌ನಲ್ಲಿ ಪ್ರವಾಸಿಗರಿಗೆ ಗಾಂಜಾ ಮಾರಾಟ ; ಇಬ್ಬರು ಆರೋಪಿಗಳ ಬಂಧನ -vishwanews24

ಕಾಪು:  ಬೀಚ್‌ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನ – ಇಬ್ಬರ ಬಂಧನ, ₹2.85 ಲಕ್ಷ ಮೌಲ್ಯದ 5.710 ಕೆ.ಜಿ. ಗಾಂಜಾ ವಶ

ಉಡುಪಿ: ಕಾಪು ತಾಲೂಕಿನ ಉಳಿಯಾರಗೋಳಿ ಯಾರ್ಡ್ ಬೀಚ್‌ನಲ್ಲಿ ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿ, 2.85 ಲಕ್ಷ ರೂ. ಮೌಲ್ಯದ 5.710 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಬೆಳಪು ಗ್ರಾಮದ ವಿನಯನಗರದ ಬದ್ರಿಯಾ ಮಸೀದಿ ಬಳಿಯ ನಿವಾಸಿ ಆರೀಫ್ (38) ಹಾಗೂ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆಯ ಕೆಮ್ಮಣ್ಣು ಜಾಮೀಯ ಮಸೀದಿ ಬಳಿಯ ನಿವಾಸಿ ಅಕೀಫ್ (34) ಎಂದು ಗುರುತಿಸಲಾಗಿದೆ.

ಅ. 27ರಂದು ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರಿಗೆ ದೊರೆತ ಖಚಿತ ಮಾಹಿತಿಯಂತೆ, ಕಾಪು ಮತ್ತು ಮಟ್ಟು ಬೀಚ್‌ಗಳಿಗೆ ಆಗಮಿಸುವ ಪ್ರವಾಸಿಗರಿಗೆ ಇಬ್ಬರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಕಾಪು ಠಾಣೆಯ ಪಿಎಸ್‌ಐ ತೇಜಸ್ವಿ ನೇತೃತ್ವದ ತಂಡ ಮಧ್ಯಾಹ್ನ 12.05ರ ಸುಮಾರಿಗೆ ಉಳಿಯಾರಗೋಳಿ ಯಾರ್ಡ್ ಬೀಚ್‌ನಲ್ಲಿ ದಾಳಿ ನಡೆಸಿತು.

ಈ ವೇಳೆ ಆರೋಪಿಗಳು ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಹೊಂದಿರುವುದು ಪತ್ತೆಯಾಗಿದೆ. ಪೊಲೀಸರು ಆರೋಪಿಗಳಿಂದ 5.710 ಕೆ.ಜಿ. ಗಾಂಜಾ, 225 ರೂ. ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳು ಆಂಧ್ರಪ್ರದೇಶದ ಹೈದರಾಬಾದ್‌ನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆರೋಪಿಗಳ ವಿರುದ್ಧ ಈಗಾಗಲೇ ಹಲವು ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2026ರ ಅಡಿಯಲ್ಲಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(c), 20(b)(ii)(B)ರಂತೆ ಪ್ರಕರಣ ದಾಖಲಾಗಿದೆ.

ಕಾರ್ಕಳ ಉಪವಿಭಾಗದ ಎಎಸ್‌ಪಿ ಈಶಿತಾ ಗುಪ್ತಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ತೇಜಸ್ವಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಕಾಪು ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಕಾರ್ಕಳ ಉಪವಿಭಾಗದ ಆಂಟಿ ಎನ್‌ಡಿಪಿಎಸ್ ಸ್ಕ್ವಾಡ್, ಸಿಡಿಆರ್ ತಾಂತ್ರಿಕ ವಿಭಾಗದ ಸಿಬ್ಬಂದಿ ಮತ್ತು ಸಾಕ್ಷ್ಯ ಸಂಗ್ರಹಣಾ ಘಟಕದ ಅಧಿಕಾರಿಗಳು ಕಾರ್ಯಾಚರಣೆಗೆ ಸಹಕರಿಸಿದರು.

Vishwa News 24

Recent Posts

ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೋ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ -vishwanews24

ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೋ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಾಡಿ…

23 minutes ago

ಉಡುಪಿ : ನ. 24ರಂದು ಜಿಲ್ಲಾಮಟ್ಟದ ಗ್ಯಾರಂಟಿ ಸಮಾವೇಶ: ಅಶೋಕ್ ಕೊಡವೂರು -vishwanews24

ಉಡುಪಿ : ನ. 24ರಂದು ಜಿಲ್ಲಾಮಟ್ಟದ ಗ್ಯಾರಂಟಿ ಸಮಾವೇಶ: ಅಶೋಕ್ ಕೊಡವೂರು ಉಡುಪಿ : ಜಿಲ್ಲೆಯಲ್ಲಿ ಮುಂದಿನ ನವೆಂಬರ್ 24…

42 minutes ago

ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ; ಆರೋಪಿ ಬಂಧನ -vishwanews24

ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ; ಆರೋಪಿ ಬಂಧನ ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೊ (43) ಎಂಬಾತನನ್ನು  ರಾತ್ರಿ ಬ್ರಹ್ಮಾವರ…

2 hours ago

ಮೆಸ್ಕಾಂ ವೈಫಲ್ಯ ಖಂಡಿಸಿ ಉಡುಪಿ ನಗರ ಬಿಜೆಪಿಯಿಂದ ಪಂಜಿನ ಮೆರವಣಿಗೆ -vishwanews24

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಮೆಸ್ಕಾಂ ವೈಫಲ್ಯ ಖಂಡಿಸಿ  ಬಿಜೆಪಿಯಿಂದ ಪಂಜಿನ ಮೆರವಣಿಗೆ: ದಿನೇಶ್ ಅಮೀನ್ ಉಡುಪಿ…

17 hours ago

ಉಡುಪಿ: ಖರ್ಗೆ ಹೇಳಿಕೆ ಕಾಂಗ್ರೆಸ್‌ನ ಅಧಃಪತನಕ್ಕೆನಾಂದಿ: ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಕ್ರೋಶ – vishwanews24

ಉಡುಪಿ: ಮೋದಿ ವಿರುದ್ಧ ಖರ್ಗೆ ಹೇಳಿಕೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಖಂಡನೆ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ ದೇಶವನ್ನು…

21 hours ago

ಬೆಳಗಾವಿ: ರಾಜಮನೆತನದ ಗೌರವ, ಸಂಪ್ರದಾಯಕ್ಕೆ ಚ್ಯುತಿ ತರುವ ಉದ್ದೇಶ ಸರ್ಕಾರಕ್ಕಿಲ್ಲ: ಡಿಕೆ ಶಿವಕುಮಾರ್ – vishwanews24

ಬೆಳಗಾವಿ: ರಾಜಮನೆತನದ ಗೌರವ, ಸಂಪ್ರದಾಯಕ್ಕೆ ಚ್ಯುತಿ ತರುವ ಉದ್ದೇಶ ಸರ್ಕಾರಕ್ಕಿಲ್ಲ: ಡಿಕೆ ಶಿವಕುಮಾರ್ ಬೆಳಗಾವಿ: ರಾಜಮನೆತನಕ್ಕೆನೀಡಬೇಕಾದ ಗೌರವ ಹಾಗೂ ಸಾಂಪ್ರದಾಯಿಕ…

22 hours ago