Featured

ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ; ಆರೋಪಿ ಬಂಧನ -vishwanews24

ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ; ಆರೋಪಿ ಬಂಧನ

ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೊ (43) ಎಂಬಾತನನ್ನು  ರಾತ್ರಿ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ.

ಸುಜಿತ್ ಪಿಂಟೊ ಮನೆಗೆ ಸಾಮಾನುಗಳನ್ನು ಪೂರೈಕೆ ಮಾಡುವ ರಿಕ್ಷಾ ಚಾಲಕ ಪ್ರಮೋದ್ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದು, ಆತನನ್ನು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ರೌಡಿಶೀಟರ್ ಸುಜಿತ್ ಪಿಂಟೊ ರಿಕ್ಷಾ ಚಾಲಕ ಪ್ರಮೋದ್ ಗೆ ಹಣ ನೀಡಲು ಬಾಕಿ ಇದ್ದು ಇದೇ ಕಾರಣಕ್ಕೆ ಪ್ರಮೋದ್ ಸುಜಿತ್ ಪಿಂಟೋನನ್ನು ತಾನು ಇರುವ ಸ್ಥಳಕ್ಕೆ ಬರುವಂತೆ ಕರೆದಿದ್ದನು. ಅದರಂತೆ ಸುಜಿತ್ ಪಿಂಟೊ ಅಲ್ಲಿಗೆ ಹೋಗಿದ್ದು ಇಬ್ಬರು ಮದ್ಯದ ಅಮಲಿನಲ್ಲಿ ಹೊಡೆದಾಟ ಮಾಡಿಕೊಂಡಿದ್ದರೆನ್ನಲಾಗಿದೆ. ಈ ವೇಳೆ ಸಿಟ್ಟಿಗೆದ್ದ ಪ್ರಮೋದ್ ಕಬ್ಬಿಣದ ರಾಡಿನಿಂದ ಸುಜಿತ್ ಪಿಂಟೊನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧೀಕ್ಷಕ‌ ಹರಿರಾಂ ಶಂಕರ್ ತಿಳಿಸಿದ್ದಾರೆ.

ರೌಡಿಶೀಟರ್‌ ಸುಜಿತ್ ಪಿಂಟೊ 2018ರಲ್ಲಿ ಮಣಿಪಾಲದಲ್ಲಿ ನಡೆದ ಕ್ಲಬ್ ಮಾಲಕ ಗುರುಪ್ರಸಾದ್ ಭಟ್ ಕೊಲೆ ಪ್ರಕರಣ, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಲಕ್ಷ್ಮಿನಗರದಲ್ಲಿ 2020ರಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದು, ಈತ ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈತ ಮೊದಲು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆ ಎಂಬಲ್ಲಿ ವಾಸವಾಗಿದ್ದು ಕೆಲ ವರ್ಷಗಳ ಹಿಂದೆ ಬ್ರಹ್ಮಾವರಕ್ಕೆ ಶಿಫ್ಟ್ ಆಗಿದ್ದನು. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Vishwa News 24

Recent Posts

ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೋ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ -vishwanews24

ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೋ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಾಡಿ…

23 minutes ago

ಕಾಪು : ಬೀಚ್‌ನಲ್ಲಿ ಪ್ರವಾಸಿಗರಿಗೆ ಗಾಂಜಾ ಮಾರಾಟ ; ಇಬ್ಬರು ಆರೋಪಿಗಳ ಬಂಧನ -vishwanews24

ಕಾಪು:  ಬೀಚ್‌ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನ – ಇಬ್ಬರ ಬಂಧನ, ₹2.85 ಲಕ್ಷ ಮೌಲ್ಯದ 5.710 ಕೆ.ಜಿ. ಗಾಂಜಾ ವಶ…

35 minutes ago

ಉಡುಪಿ : ನ. 24ರಂದು ಜಿಲ್ಲಾಮಟ್ಟದ ಗ್ಯಾರಂಟಿ ಸಮಾವೇಶ: ಅಶೋಕ್ ಕೊಡವೂರು -vishwanews24

ಉಡುಪಿ : ನ. 24ರಂದು ಜಿಲ್ಲಾಮಟ್ಟದ ಗ್ಯಾರಂಟಿ ಸಮಾವೇಶ: ಅಶೋಕ್ ಕೊಡವೂರು ಉಡುಪಿ : ಜಿಲ್ಲೆಯಲ್ಲಿ ಮುಂದಿನ ನವೆಂಬರ್ 24…

42 minutes ago

ಮೆಸ್ಕಾಂ ವೈಫಲ್ಯ ಖಂಡಿಸಿ ಉಡುಪಿ ನಗರ ಬಿಜೆಪಿಯಿಂದ ಪಂಜಿನ ಮೆರವಣಿಗೆ -vishwanews24

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಮೆಸ್ಕಾಂ ವೈಫಲ್ಯ ಖಂಡಿಸಿ  ಬಿಜೆಪಿಯಿಂದ ಪಂಜಿನ ಮೆರವಣಿಗೆ: ದಿನೇಶ್ ಅಮೀನ್ ಉಡುಪಿ…

17 hours ago

ಉಡುಪಿ: ಖರ್ಗೆ ಹೇಳಿಕೆ ಕಾಂಗ್ರೆಸ್‌ನ ಅಧಃಪತನಕ್ಕೆನಾಂದಿ: ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಕ್ರೋಶ – vishwanews24

ಉಡುಪಿ: ಮೋದಿ ವಿರುದ್ಧ ಖರ್ಗೆ ಹೇಳಿಕೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಖಂಡನೆ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ ದೇಶವನ್ನು…

21 hours ago

ಬೆಳಗಾವಿ: ರಾಜಮನೆತನದ ಗೌರವ, ಸಂಪ್ರದಾಯಕ್ಕೆ ಚ್ಯುತಿ ತರುವ ಉದ್ದೇಶ ಸರ್ಕಾರಕ್ಕಿಲ್ಲ: ಡಿಕೆ ಶಿವಕುಮಾರ್ – vishwanews24

ಬೆಳಗಾವಿ: ರಾಜಮನೆತನದ ಗೌರವ, ಸಂಪ್ರದಾಯಕ್ಕೆ ಚ್ಯುತಿ ತರುವ ಉದ್ದೇಶ ಸರ್ಕಾರಕ್ಕಿಲ್ಲ: ಡಿಕೆ ಶಿವಕುಮಾರ್ ಬೆಳಗಾವಿ: ರಾಜಮನೆತನಕ್ಕೆನೀಡಬೇಕಾದ ಗೌರವ ಹಾಗೂ ಸಾಂಪ್ರದಾಯಿಕ…

22 hours ago