Featured

ಬೆಳಗಾವಿ: ರಾಜಮನೆತನದ ಗೌರವ, ಸಂಪ್ರದಾಯಕ್ಕೆ ಚ್ಯುತಿ ತರುವ ಉದ್ದೇಶ ಸರ್ಕಾರಕ್ಕಿಲ್ಲ: ಡಿಕೆ ಶಿವಕುಮಾರ್ – vishwanews24

ಬೆಳಗಾವಿ: ರಾಜಮನೆತನದ ಗೌರವ, ಸಂಪ್ರದಾಯಕ್ಕೆ ಚ್ಯುತಿ ತರುವ ಉದ್ದೇಶ ಸರ್ಕಾರಕ್ಕಿಲ್ಲ: ಡಿಕೆ ಶಿವಕುಮಾರ್

ಬೆಳಗಾವಿ: ರಾಜಮನೆತನಕ್ಕೆನೀಡಬೇಕಾದ ಗೌರವ ಹಾಗೂ ಸಾಂಪ್ರದಾಯಿಕ ಪದ್ಧತಿಗಳಿಗೆ ಯಾವುದೇ ಚ್ಯುತಿ ತರುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್‌  ಹೇಳಿದ್ದಾರೆ.

ಮೈಸೂರು ದಸರಾ ಮಹೋತ್ಸವ ಆಚರಣೆ ವಿಚಾರವಾಗಿ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು.

ದಸರಾ ಮಹೋತ್ಸವ ಸರ್ಕಾರದ ಕಾರ್ಯಕ್ರಮವೇ ಹೊರತು ಡಿಕೆಶಿ ಕಾರ್ಯಕ್ರಮವಲ್ಲ. ನಮ್ಮ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ತಿದ್ದಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: 

ಪ್ರಮೋದಾದೇವಿ ಅವರು ನೀಡಿರುವ ಹೇಳಿಕೆಯನ್ನು ನಾನು ಇನ್ನೂ ಪೂರ್ಣವಾಗಿ ನೋಡಿಲ್ಲ. ಅವರು ಏನು ಹೇಳಿದ್ದಾರೆ ಎಂಬುದನ್ನು ಗಮನಿಸಿ, ಅವರೊಂದಿಗೆ ಚರ್ಚೆ ಮಾಡುತ್ತೇನೆ. ಇದು ನನ್ನ ವೈಯಕ್ತಿಕ ವಿಚಾರವೂ ಅಲ್ಲ, ಪ್ರಮೋದಾದೇವಿ ಅವರ ವೈಯಕ್ತಿಕ ವಿಚಾರವೂ ಅಲ್ಲ; ಇದು ಇಡೀ ರಾಜ್ಯದ ಹೆಮ್ಮೆಯ ಹಬ್ಬದ ವಿಚಾರ ಎಂದರು.

ಮೊದಲಿನಿಂದಲೂ ರಾಜಮನೆತನಕ್ಕೆ ಯಾವ ರೀತಿ ಗೌರವ ನೀಡಬೇಕೋ, ಆ ಪರಂಪರೆಯ ಪ್ರಕಾರವೇ ಎಲ್ಲವನ್ನೂ ಮಾಡಿಕೊಂಡು ಬರಲಾಗಿದೆ. ಹಳೆಯ ಪದ್ಧತಿ ಏನಿದೆಯೋ ಅದನ್ನೇ ಮುಂದುವರಿಸಿದ್ದೇವೆ. ನನಗೆ ಇತಿಹಾಸದ ಎಲ್ಲಾ ಸೂಕ್ಷ್ಮಗಳು ಗೊತ್ತಿಲ್ಲದಿರಬಹುದು, ಆದರೆ ಪರಂಪರೆಗೆ ಗೌರವ ನೀಡಿದ್ದೇವೆ. ಈಗ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಪ್ರಜಾಪ್ರಭುತ್ವ ಇರದಿದ್ದರೆ ಬೇರೆಯೇ ಇರುತ್ತಿತ್ತು, ಆದರೆ ಈಗ ನಿಯಮಗಳ ಪ್ರಕಾರ ನಡೆಯಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: 

ಆನೆ ನನ್ನ ಮಾತು ಕೇಳಲಿಲ್ಲ ಎಂಬ ವಿಚಾರವೇ ಇಲ್ಲ. ಈ ಬಾರಿ ಹೊಸ ಆನೆ ‘ಪ್ರಶಾಂತ’ ಮೂಲಕ ಮೆರವಣಿಗೆಯನ್ನು ಸಾಂಪ್ರದಾಯಿಕವಾಗಿ ನಡೆಸಲಾಗಿದೆ. ಶಿವಮೊಗ್ಗದಲ್ಲಿ ಈ ಹಿಂದೆ ಏನಾಯಿತು ಎಂಬುದನ್ನು ಎಲ್ಲರೂ ನೋಡಿದ್ದೀರಿ, ಹೀಗಾಗಿ ಮುನ್ನೆಚ್ಚರಿಕೆಯಿಂದ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದರು.

ದಸರಾ ನಾಡಿನ ದೇವತೆಗೆ ಗೌರವ ಕೊಡುವ ಹಬ್ಬ. ಕೊಪ್ಪಳದ ಸ್ವಾಮೀಜಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇಡೀ ಹಬ್ಬವನ್ನು ಒಬ್ಬರೇ ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ವಹಿಸಲಾಗಿತ್ತು. ಸಚಿವರು ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕೆಲವರು ಚುನಾವಣೆ ನಿಮಿತ್ತ ಬರಲು ಸಾಧ್ಯವಾಗಿಲ್ಲ ಅಷ್ಟೇ ಎಂದು ತಿಳಿಸಿದರು.

ಇದನ್ನೂ ಓದಿ: 

Vishwa News 24

Recent Posts

ಉಡುಪಿ: ಖರ್ಗೆ ಹೇಳಿಕೆ ಕಾಂಗ್ರೆಸ್‌ನ ಅಧಃಪತನಕ್ಕೆನಾಂದಿ: ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಕ್ರೋಶ – vishwanews24

ಉಡುಪಿ: ಮೋದಿ ವಿರುದ್ಧ ಖರ್ಗೆ ಹೇಳಿಕೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಖಂಡನೆ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ ದೇಶವನ್ನು…

1 hour ago

ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್: ಟೊರೆಂಟ್ ಫಾರ್ಮಾ ಔಷಧಗಳ ಬೆಲೆಯಲ್ಲಿ ಶೇ. 70ರವರೆಗೆ ಇಳಿಕೆ – vishwanews24

ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್: ಟೊರೆಂಟ್ ಫಾರ್ಮಾ ಔಷಧಗಳ ಬೆಲೆಯಲ್ಲಿ ಶೇ. 70ರವರೆಗೆ ಇಳಿಕೆ ಅಹಮದಾಬಾದ್: ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸಾ…

2 hours ago

ಅ. 29 ರಂದು ಉಡುಪಿ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಬೃಹತ್ ರಕ್ತದಾನ ಶಿಬಿರ – vishwanews24

ಅ. 29 ರಂದು ಉಡುಪಿ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಬೃಹತ್ ರಕ್ತದಾನ ಶಿಬಿರ ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ…

3 hours ago

ಸೌಜನ್ಯಾ ಪ್ರಕರಣ: ಹಿಂದಿನ ತನಿಖಾಧಿಕಾರಿಗಳಿಗೆ ಎಸ್ಐಟಿ ನೋಟಿಸ್ – vishwanews24

ಸೌಜನ್ಯಾ ಪ್ರಕರಣ: ಹಿಂದಿನ ತನಿಖಾಧಿಕಾರಿಗಳಿಗೆ ಎಸ್ಐಟಿ ನೋಟಿಸ್ 15ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗಲು ಸೂಚನೆ ಮಂಗಳೂರು: ಧರ್ಮಸ್ಥಳದ…

3 hours ago

ಮಂಗಳೂರು : ಕಾನೂನುಬದ್ಧ ಮಾಂಸ ಸಾಗಾಟ ತಡೆದರೆ 10 ವರ್ಷ ಜೈಲು ಶಿಕ್ಷೆ : ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ – vishwanews24

ಮಂಗಳೂರು : ಕಾನೂನುಬದ್ಧ ಮಾಂಸ ಸಾಗಾಟ ತಡೆದರೆ 10 ವರ್ಷ ಜೈಲು ಶಿಕ್ಷೆ : ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ…

4 hours ago

ಮಂಗಳೂರು – ರಾಸ್ ಅಲ್ ಖೈಮಾ ನಡುವೆ ನೇರ ಸೇವೆ ಆರಂಭಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ – vishwanews24

ಮಂಗಳೂರು - ರಾಸ್ ಅಲ್ ಖೈಮಾ ನಡುವೆ ನೇರ ಸೇವೆ ಆರಂಭಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು: ಕರಾವಳಿಯ ಅಂತಾರಾಷ್ಟ್ರೀಯ…

4 hours ago