ಕಾಪು ಬೀಚ್‌: ನೀರು ಪಾಲಾಗುವ ಅಪಾಯಕ್ಕೆ ಸಿಲುಕಿದ್ದ ವಿದ್ಯಾರ್ಥಿಯ ರಕ್ಷಿಸಿದ ಲೈಫ್‌ ಗಾರ್ಡ್‌ ತಂಡ – Vishwanews24

Featured, ಉಡುಪಿ

ಕಾಪು ಬೀಚ್‌: ನೀರು ಪಾಲಾಗುವ ವಿದ್ಯಾರ್ಥಿಯ ರಕ್ಷಿಸಿದ ಲೈಫ್‌ ಗಾರ್ಡ್‌ ತಂಡ

ಕಾಪು: ಕಾಪು ಬೀಚ್‌ನಲ್ಲಿ ಸಮುದ್ರ ಸ್ನಾನಕ್ಕಿಳಿದು ನೀರು ಪಾಲಾಗುವ ಅಪಾಯಕ್ಕೆ ಸಿಲುಕಿದ್ದ ವಿದ್ಯಾರ್ಥಿಯೊಬ್ಬನನ್ನು ಲೈಫ್‌ ಗಾರ್ಡ್‌ಗಳ ತಂಡ ರಕ್ಷಿಸಿದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

ಕೊಪ್ಪಳ ಮೂಲದ ಆರು ಮಂದಿ ವಿದ್ಯಾರ್ಥಿಗಳು ಬೈಕ್‌ನಲ್ಲಿ ಕಾಪು ಬೀಚ್‌ಗೆ ಆಗಮಿಸಿದ್ದು, ಇವರೆಲ್ಲರೂ ಸಮುದ್ರ ಸ್ನಾನಕ್ಕಿಳಿದ್ದರು. ಈ ಪೈಕಿ ರಾಹುಲ್‌ (20) ಎಂಬಾತ ನೀರಿನಲ್ಲಿ ಮುಳುಗಿದ್ದು, ಇದನ್ನು ಗಮನಿಸಿದ ಜೀವ ರಕ್ಷಕರ ತಂಡ ಕೂಡಲೇ ಸಮುದ್ರಕ್ಕೆ ಇಳಿದು ರಕ್ಷಿಸಿದೆ.

ಬಳಿಕ ಪ್ರಥಮ ಚಿಕಿತ್ಸೆ ನೀಡಿ, ಕಾಪು ಟ್ರೂ ಕೇರ್‌ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.

ಲೈಫ್‌ ಗಾರ್ಡ್‌ಗಳಾದ ಸಂದೇಶ್‌, ಪ್ರವೀಣ್‌, ದಾದಾ ಪೀರ್‌ ಮತ್ತು ಸ್ಥಳೀಯರಾದ ಪ್ರಶಾಂತ್‌ ನೇತೃತ್ವದಲ್ಲಿ ರಕ್ಷಣ ಕಾರ್ಯ ನಡೆಸಲಾಗಿದ್ದು, ಪ್ರಶಂಸೆ ವ್ಯಕ್ತವಾಗಿದೆ.

ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದ ಜಗದೀಶ್‌ ಶೆಟ್ಟರ್‌ – Vishwanews24

Leave a Reply