ಕಾಪು: ಮೂರೂ ಮಾರಿಗುಡಿಯಲ್ಲಿ ವೈಭವದ ಕಾಲಾವಧಿ ಸುಗ್ಗಿ ಮಾರಿಪೂಜೆ – Vishwanews24

Featured, ಉಡುಪಿ

ಕಾಪು: ಮೂರೂ ಮಾರಿಗುಡಿಯಲ್ಲಿ ವೈಭವದ ಸುಗ್ಗಿ ಮಾರಿಪೂಜೆ 

ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ದೇವಿಯ ಸಿಂಹವಾಹನಕ್ಕೆ ಸ್ವರ್ಣ ಮುಖ ಸಮರ್ಪಣೆ 

ಕಾಪು: ಇಲ್ಲಿನ ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಯಲ್ಲಿ ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಮಂಗಳವಾರ ಸಂಜೆ ವೈಭವದ ಚಾಲನೆ ದೊರಕಿದ್ದು, ಬುಧವಾರ ಸಂಜೆಯ ವರೆಗೆ ಮುಂದುವರಿಯಲಿದೆ.

ಮಂಗಳವಾರ ರಾತ್ರಿ ಹಳೇ ಮಾರಿಗುಡಿಗೆ ಶ್ರೀ ವೆಂಕಟರಮಣ ದೇವಸ್ಥಾನ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಸ್ವರ್ಣಾಭರಣಗಳನ್ನು ಮೆರವಣಿಗೆಯ ಮೂಲಕ ತಂದು, ಬಳಿಕ ಹೊಂಗಾರಕನ ಮರದಲ್ಲಿ ಕೆತ್ತಿದ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ, ವಿವಿಧ ಪೂಜಾ ವಿಧಿವಿಧಾನ ನೆರವೇರಿಸಲಾಯಿತು.

ಬುಧವಾರ ಸಂಜೆ ತೆರೆ
ಮಂಗಳವಾರ ಮಧ್ಯರಾತ್ರಿಯ ಬಳಿಕ ದರ್ಶನ ಸೇವೆ ನಡೆದು, ಬುಧ ವಾರ ಮಧ್ಯಾಹ್ನದ ವರೆಗೆ ಭಕ್ತರಿಗೆ ಮಾರಿಯಮ್ಮ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಬುಧವಾರದ ಮಧ್ಯಾಹ್ನ ಪೂಜೆ ನಡೆದು, ಸಂಜೆ ದರ್ಶನ ಸೇವೆ ನಡೆಯುತ್ತದೆ. ಅಭಯ ಪ್ರಸಾದ ವಿತರಣೆ ಬಳಿಕ ದೇವಿಯ ಮೂರ್ತಿ ಯನ್ನು ಮೆರ ವಣಿಗೆಯಲ್ಲಿ ಒಯ್ದು, ವಿಸರ್ಜಿಸಲಾಗುತ್ತದೆ.

ಉಡುಪಿ: ಅಯೋಧ್ಯೆಯಲ್ಲಿ 25 ಸಾವಿರ ಜನರ ವಸತಿ ಸಾಮರ್ಥ್ಯದ ಬೃಹತ್‌ ಯಾತ್ರಿ ಭವನ ನಿರ್ಮಾಣ  : ಪೇಜಾವರ ಶ್ರೀ – Vishwanews24

ಗದ್ದಿಗೆ ಪೂಜೆ ವಿಶೇಷ
ಮಾರಿಯಮ್ಮನ ಸನ್ನಿಧಿಯಲ್ಲಿ ಗದ್ದಿಗೆಪೂಜೆ ವಿಶೇಷವಾಗಿದ್ದು, ಹೂವಿನ ಪೂಜೆ, ಕುಂಕುಮಾರ್ಚನೆ ಸಹಿತ ವಿವಿಧ ಸೇವೆಗಳು, ಹರಕೆಗಳು ಸಮರ್ಪಿಸಲ್ಪಡುತ್ತವೆ. 3 ಮಾರಿಗುಡಿ ಗಳನ್ನೂ ವಿಶೇಷವಾಗಿ ಅಲಂಕರಿಸಲಾಗಿದೆ. ಸುಮಾರು 200ಕ್ಕೂ ಅಧಿಕ ಮಾರಾಟ ಮಳಿಗೆ ಗಳು ಆಕರ್ಷಿಸುತ್ತಿವೆ.

ಸ್ವರ್ಣ ಮುಖ ಸಿಂಹ ವಾಹನ ಸಮರ್ಪಣೆ
ಮುಂಬಯಿಯ ಸುನೀತಾ ಎಸ್‌. ಕಾಮತ್‌ ಮತ್ತು ಇತರ ಭಕ್ತರ ದೇಣಿಗೆಯೊಂದಿಗೆ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ದೇವಿಯ ಸಿಂಹವಾಹನಕ್ಕೆ ಸ್ವರ್ಣ ಮುಖ ಸಮರ್ಪಣೆ ಗೊಂಡಿತು. ಸ್ವರ್ಣ ಮುಖ ಸಿಂಹವಾಹನದ ಪುರಪ್ರವೇಶ ಶೋಭಾಯಾತ್ರೆಯ ಬಳಿಕ ದೇವಿಯ ರಜತ ರಥೋತ್ಸವ ನಡೆಯಿತು. ವಿವಿಧ ಕಲಾತಂಡಗಳು ಯಾತ್ರೆಯಲ್ಲಿ ಭಾಗವಹಿಸಿದ್ದವು.

ಶಿಲಾ ಸೇವೆ ಸಮರ್ಪಣೆ
ಹೊಸ ಮಾರಿಗುಡಿಯಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಶಿಲಾ ಸೇವೆ ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗಿದ್ದು, ಸಾವಿರಾರು ಮಂದಿ ಶಿಲಾ ಸೇವೆ ಸಮರ್ಪಣೆ ಯಲ್ಲಿ ಪಾಲ್ಗೊಂಡಿದ್ದಾರೆ.

ಉಡುಪಿ: ಅಯೋಧ್ಯೆಯಲ್ಲಿ 25 ಸಾವಿರ ಜನರ ವಸತಿ ಸಾಮರ್ಥ್ಯದ ಬೃಹತ್‌ ಯಾತ್ರಿ ಭವನ ನಿರ್ಮಾಣ  : ಪೇಜಾವರ ಶ್ರೀ – Vishwanews24

ಬಿಗು ಬಂದೋಬಸ್ತ್ ಆದ್ಯತೆ
ಮೂರೂ ಮಾರಿಗುಡಿಗಳ ಸುತ್ತಲೂ ಬಿಗು ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಸ್ಥಳೀಯಾಡಳಿತದಿಂದ ಸ್ವತ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

Leave a Reply