ಕಾಪು : ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ & ಪಾಲಿಟಿಕಲ್ ಸೈನ್ಸ್ ನಿಂದ ರಾಜಕೀಯ ಆಡಳಿತದಲ್ಲಿ ಮಾಸ್ಟರ್ಸ್ ಪದವಿ ಪಡೆದ ವಿನಯ ಕುಮಾರ್ ಸೊರಕೆ ಅವರ ಪುತ್ರ ದ್ವಿಶನ್ ಸೊರಕೆ – vishwanews24

Featured, ಉಡುಪಿ

ಕಾಪು : ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ & ಪಾಲಿಟಿಕಲ್ ಸೈನ್ಸ್ ನಿಂದ ರಾಜಕೀಯ ಆಡಳಿತದಲ್ಲಿ ಮಾಸ್ಟರ್ಸ್ ಪದವಿ ಪಡೆದ ವಿನಯ ಕುಮಾರ್ ಸೊರಕೆ ಅವರ ಪುತ್ರ ದ್ವಿಶನ್ ಸೊರಕೆ 

ಕಾಪು : ಮಾಜಿ ಸಚಿವ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಅವರ ಪುತ್ರನಾದ ದ್ವಿಶನ್ ಸೊರಕೆ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪಾಲಿಟಿಕಲ್ ಸೈನ್ಸ್ ನಿಂದ ರಾಜಕೀಯ ಆಡಳಿತದಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದಾರೆ.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತು ದಕ್ಷ ಸೊರಕೆ ದಂಪತಿಗಳ ಪುತ್ರನಾದ ದ್ವಿಶನ್ ಸೊರಕೆ ಅವರು, ಸಿಂಬಯೋಸಿಸ್ ಕಾನೂನು ಕಾಲೇಜು ಪುಣೆಯಿಂದ ಕಾನೂನು ಪದವಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ, ಹಾಗೂ ಕೆಂಬ್ರಿಜ್ ವಿಶ್ವವಿದ್ಯಾಲಯದಿಂದ ಕಾನೂನು ಮಾಸ್ಟರ್ ಪದವಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ & ಪೊಲಿಟಿಕಲ್ ಸೈನ್ಸ್ – ಸಾರ್ವಜನಿಕ ಆಡಳಿತದ ಮಾಸ್ಟರ್ ಪದವಿಯನ್ನು ಪಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಂಶೋಧನಾ ಸಹಾಯಕರಾಗಿ ಸೇವೆಯನ್ನು ಕೂಡಾ ಸಲ್ಲಿಸಿದ್ದಾರೆ. ಇದೀಗ ಇವರ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.’

ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರ ಕಚೇರಿ ಹಾಗೂ ಮನೆ ಮೇಲೆ ಲೋಕಾಯುಕ್ತ ದಾಳಿ – vishwanews24

Leave a Reply