ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿಯ ಆರ್ಥಿಕ ಸಮಿತಿಯ ವಿಚಾರ ವಿನಿಮಯ -Vishwanews24

Featured, ಉಡುಪಿ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿಯ ಆರ್ಥಿಕ ಸಮಿತಿಯ ವಿಚಾರ ವಿನಿಮಯ -Vishwanews24

ಈಗಾಗಲೇ ತೆಗೆದುಕೊಂಡ ನಿರ್ಣಯದ ಪ್ರಕಾರ ಸರದಿಯಂತೆ ಶೈಲಪುತ್ರಿ ಮತ್ತು ಬ್ರಹ್ಮಚಾರಿಣಿ ತಂಡದ ಉತ್ಸಾಹಿ ಸ್ವಯಂ ಸೇವಕರು ಒಂದೊಂದು ವಾರದಂತೆ ನಿರಂತರವಾಗಿ ದೇವಸ್ಥಾನದ ಮುಖಮಂಟಪದ ಶಿಲಾ ಸೇವಾ ಕೌಂಟರ್ ನಲ್ಲಿ ಭಕ್ತಾದಿಗಳಿಗೆ ಜೀರ್ಣೋದ್ದಾರದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿ ಶಿಲಾ ಸೇವೆಯನ್ನು ಸ್ವೀಕರಿಸುತ್ತಿದ್ದರು. ಈ ಬಗ್ಗೆ ತಾರೀಕು 13/04/2021ನೇ ಮಂಗಳವಾರ ನಡೆದ ಸಭೆಯಲ್ಲಿ ಎರಡು ತಂಡಗಳು ಶಿಲಾ ಸೇವೆ ಪಡೆದ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಲಾಯಿತು.

ಇನ್ನು ಮುಂದಿನ ವಾರಗಳಲ್ಲಿ ಸರದಿಯಂತೆ ಚಂದ್ರಘಂಟಾ, ಕುಷ್ಮಾಂಡ, ಸ್ಕಂದಮಾತಾ, ಕಾತ್ಯಯಿನಿ, ಕಾಲರಾತ್ರಿ, ಮಹಾ ಗೌರಿ, ಸಿದ್ಧಿ ದಾತ್ರಿ ತಂಡದ ಸ್ವಯಂ ಸೇವಕರು ನಿರಂತರವಾಗಿ ಪೂರ್ವಾಹ್ನ ಗಂಟೆ 09:00 ರಿಂದ ಅಪರಾಹ್ನ ಗಂಟೆ 07:00 ರ ವರೆಗೆ ಎಲ್ಲಾ ದಿನಗಳಲ್ಲಿ ಶಿಲಾ ಸೇವಾ ಸಮರ್ಪಣೆಗೆ ಶಿಲಾ ಸೇವಾ ಕೌಂಟರ್ನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಮಂಗಳೂರು ಏರ್‌ಪೋರ್ಟ್ : ‌ಸ್ವಾಗತ ದ್ವಾರದಲ್ಲಿರುವ ಅದಾನಿಯ ಹೆಸರನ್ನು ತೆಗೆಯದಿದ್ದರೆ ಕಾಂಗ್ರೆಸ್‌ನಿಂದ ಪ್ರತಿಭಟನೆ : ಐವನ್‌ ಡಿಸೋಜಾ -Vishwanews24

ಭಕ್ತಾದಿಗಳಿಗೆ ಶಿಲಾ ಸೇವೆ ನೀಡುವಂತೆ ಮನವಿ ಮಾಡಬೇಕೆಂದು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ತಿಳಿಸಿದರು ಮತ್ತು ಸೇವೆ ಸಲ್ಲಿಸಿದ ಎರಡು ತಂಡಗಳನ್ನೂ ಅಭಿನಂದಿಸಿದರು.

ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಯುತ ಉದಯ ಸುಂದರ ಶೆಟ್ಟಿಯವರು ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರು ಮತ್ತು ಸಂಚಾಲಕರುಗಳಿಗೆ ವಿಶೇಷ ಮಾಹಿತಿ ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀ ವಿದ್ಯಾದರ್ ಪುರಾಣಿಕ್, ಶ್ರೀ ಪ್ರಭಾಕರ ಪೂಜಾರಿ ಮತ್ತು ಶ್ರೀ ಬಿ. ಕೆ ಶ್ರೀನಿವಾಸ್ ಅಮೂಲ್ಯ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ಹೆಗ್ಡೆ ಕಲ್ಯಾ, ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಶಾಂತ್ ಕುಮಾರ್ ಶೆಟ್ಟಿ, ಆರ್ಥಿಕ ಸಮಿತಿಯ ಸಂಚಾಲಕರಾದ ಶ್ರೀ ರತ್ನಾಕರ ಹೆಗ್ಡೆ, ಶ್ರೀ ರಮೇಶ್ ಶೆಟ್ಟಿ, ಶ್ರೀ ನಿರ್ಮಲ್ ಕುಮಾರ್ ಹೆಗ್ಡೆ, ಗೌರವ ಸಲಹೆಗಾರರಾದ ಶ್ರೀ ವಿಕ್ರಂ ಕಾಪು ಹಾಗೂ ಆರ್ಥಿಕ ಸಮಿತಿಯ ಸಂಚಾಲಕರು ಉಪಸ್ಥಿತರಿದ್ದರು.

ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀ ಯೋಗೀಶ್.ವಿ.ಶೆಟ್ಟಿ ಬಾಲಾಜಿ ಸರ್ವರನ್ನೂ ಸ್ವಾಗತಿಸಿ.ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀಯುತ ಮಾದವ ಪಾಲನ್ ವಂದಿಸಿದರು.

ದೇಶದಲ್ಲಿ ಕೊರೊನಾ ಅಬ್ಬರ : ಒಂದೇ ದಿನ 2 ಲಕ್ಷಕ್ಕೂ ಅಧಿಕ ಪ್ರಕರಣ -Vishwanews24