ಕಾಪು : 45 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆಯನ್ನು ನಿರ್ಭೀತಿಯಿಂದ ಪಡೆದುಕೊಳ್ಳಲು ಮುಂದಾಗಬೇಕು : ಕಾಪು ಪುರಸಭೆ ಅಧ್ಯಕ್ಷ -Vishwanews24
ಕಾಪು : ಉಡುಪಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾ.ಆ. ಕೇಂದ್ರ ಮತ್ತು ಶ್ರೀದೇವಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಕಾಪು ಪಡು ಸಂಯುಕ್ತ ಆಶ್ರಯದಲ್ಲಿ ಉಚಿತ ಕೋವಿಡ್ ಲಸಿಕೆ ವಿತರಣೆ
45 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆಯನ್ನು ನಿರ್ಭೀತಿಯಿಂದ ಪಡೆದುಕೊಳ್ಳಲು ಮುಂದಾಗಬೇಕು : ಕಾಪು ಪುರಸಭೆ ಅಧ್ಯಕ್ಷ -Vishwanews24
ಕಾಪು: ಉಡುಪಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾ.ಆ. ಕೇಂದ್ರ ಮತ್ತು ಶ್ರೀದೇವಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಕಾಪು ಪಡು ಸಂಯುಕ್ತ ಆಶ್ರಯದಲ್ಲಿ ಉಚಿತ ಕೋವಿಡ್ ಲಸಿಕೆ ವಿತರಣೆ ಕಾಪು ಶ್ರೀ ಧೂಮಾವತಿ ದೈವಸ್ಥಾನದ ಬಳಿ ಇಂದು ನಡೆಯಿತು.
ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್ ಉದ್ಘಾಟಿಸಿ ಮಾತನಾಡಿ, 45 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆಯನ್ನು ನಿರ್ಭೀತಿಯಿಂದ ಪಡೆದುಕೊಳ್ಳಲು ಮುಂದಾಗಬೇಕು. ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳುವುದರ ಜೊತೆಗೆ ಸರಕಾರದ ಕೋವಿಡ್ ನಿಯಮಾವಳಿ ಪಾಲಿಸಿಕೊoಡು ಕೊರೊನಾ ತಡೆಗಟ್ಟುವಲ್ಲಿ ಸಾರ್ವಜನಿಕರೆಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಪುರಸಭೆ ಸದಸ್ಯೆಆಶ್ವಿನಿ, ವೈದ್ಯಾಧಿಕಾರಿ ತೇಜಸ್ವಿನಿ, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ಹಿರಿಯ ಮಹಿಳಾ ಅಧಿಕಾರಿ ನಿರ್ಮಲಾ, ಶಿವ ಬಂಗೇರ, ಆರೋಗ್ಯಿ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು,ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
