ಕಾರ್ಕಳ: ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಕಂಬಳ ಪ್ರೇಮಿ ಯುವರಾಜ ಮುದ್ಯ ಹೃದಯಾಘಾತದಿಂದ ನಿಧನ – Vishwanews24

Featured, ಉಡುಪಿ

ಕಾರ್ಕಳ: ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಕಂಬಳ ಪ್ರೇಮಿ ಯುವರಾಜ ಮುದ್ಯ ಹೃದಯಾಘಾತದಿಂದ ನಿಧನ – Vishwanews24

ಕಾರ್ಕಳ: ಕಳೆದ ಮೂವತ್ತು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಕಾರ್ಕಳ ತಾಲೂಕಿನ ರೆಂಜಾಳ ಮುದ್ಯರ ಮನೆಯ ಯುವರಾಜ ಮುದ್ಯ(65) ನ.07 ರ ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜೋಡುಕರೆ ಕಂಬಳದಲ್ಲಿ ಅಡ್ಡ ಹಲಗೆಯ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿದ್ದರು. ಪ್ರಸಕ್ತ ವರ್ಷದ ಪ್ರಥಮ ಜೋಡುಕರೆ ಕಂಬಳವಾಗಿದ್ದ ಬಂಟ್ವಾಳ ತಾಲೂಕಿನ ಹೊಕ್ಲಾಡಿಗೋಳಿಯಲ್ಲಿ ನಡೆದ ಜೋಡುಕರೆ ಬಯಲು ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ದ್ವಿತೀಯ ಬಹುಮಾನ ಇವರ ಪಾಲಿಗೆ ಲಭಿಸಿತು. ಮೃತರು ಪತ್ನಿ, ನಾಲ್ವರು ಹೆಣ್ಣು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ : ಹೆಚ್‌.ಡಿ.ಕುಮಾರಸ್ವಾಮಿ ಸ್ಪಷ್ಟನೆ – Vishwanews24