ಕಾರ್ಕಳ: ಗ್ಯಾಂಗ್‌ರೇಪ್ ಪ್ರಕರಣ ; ಮುಖ್ಯ ಆರೋಪಿ ಅಲ್ತಾಫ್‌ಗೆ ಜಾಮೀನು ಮಂಜೂರು – vishwanews24

Featured, ಉಡುಪಿ

ಕಾರ್ಕಳ: ಗ್ಯಾಂಗ್‌ರೇಪ್ ಪ್ರಕರಣ ; ಮುಖ್ಯ ಆರೋಪಿ ಅಲ್ತಾಫ್‌ಗೆ ಜಾಮೀನು ಮಂಜೂರು

ಕಾರ್ಕಳ : ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಲನ ಉಂಟು ಮಾಡಿದ್ದ ಗ್ಯಾಂಗ್‌ರೇಪ್ ಪ್ರಕರಣದ ಮುಖ್ಯ ಆರೋಪಿ ಅಲ್ತಾಫ್ ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಕಾರ್ಕಳದ ಪಳ್ಳಿಯ ರಂಗನಪಲ್ಕೆ ಸಮೀಪ ಕಾಡಿನಲ್ಲಿ ಕಳೆದ ಆಗಸ್ಟ್‌ ನಲ್ಲಿ ನಡೆದ ಗ್ಯಾಂಗ್‌ರೇಪ್‌ ಕೇಸಿನಲ್ಲಿ ಅಲ್ತಾಫ್ ಒಂದನೇ ಆರೋಪಿಯಾಗಿದ್ದ. ಅಲ್ತಾಫ್ ಪರವಾಗಿ ಕಾರ್ಕಳದ ವಕೀಲ ರವಿಶಂಕರ್ ಬಿ.ಎಂ. ವಾದಿಸಿದ್ದರು.

ಪುತ್ತೂರು: ಪ್ರವೀಣ್ ನೆಟ್ಟಾರು ಕೊಲೆ ಕೇಸ್; ಆರೋಪಿಗಳಿಗೆ ಸಹಕರಿಸಿದ ಸಿದ್ದಿಕ್ ಮನೆ ಮೇಲೆ ದಾಳಿ – vishwanews24

ಕುಕ್ಕುಂದೂರು ಅಯ್ಯಪ್ಪ ನಗರದ ಗರಡಿ ಸಮೀಪದ ಪರಿಶಿಷ್ಟ ಪಂಗಡದ 21 ವರ್ಷದ ಯುವತಿಯನ್ನು ಪರಿಚಿತ ಟಿಪ್ಪರ್ ಚಾಲಕ ಅಲ್ತಾಫ್ ಕಾರಿನಲ್ಲಿ ಕರೆದುಕೊಂಡು ಹೋಗಿ ಇಬ್ಬರು ಸ್ನೇಹಿತರ ಜೊತೆ ಸೇರಿ ಗ್ಯಾಂಗ್‌ರೇಪ್ ಮಾಡಿದ ಪುಕರಣ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಪುಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆದಿದ್ದವು. ಇದೀಗ ಆರೋಪಿಗೆ ಜಾಮೀನು ಮಂಜೂರಾಗಿದೆ.

Leave a Reply