ಕಾರ್ಕಳ : ಬಸ್ಸು – ಕಾರು ನಡುವೆ ಭೀಕರ ಅಪಘಾತ ; ಮಗು ಸಹಿತ ದಂಪತಿ ಮೃತ್ಯು – Vishwanews24

Featured, ಉಡುಪಿ

ಕಾರ್ಕಳ : ಬಸ್ಸು – ಕಾರು ನಡುವೆ ಭೀಕರ ಅಪಘಾತ ; ಮಗು ಸಹಿತ ದಂಪತಿ ಮೃತ್ಯು

ಕಾರ್ಕಳ: ಕಾರು ಮತ್ತು ಖಾಸಗಿ ಬಸ್ಸಿನ ನಡುವೆ ಭೀಕರ ಅಪಘಾತ ನಡೆದು 2 ವರ್ಷದ ಮಗು ಸಹಿತ ದಂಪತಿಗಳು ಸಾವಿಗೀಡಾದ ಘಟನೆ ಡಿ.10 ರ ಇಂದು ಬೆಳಗ್ಗೆಉಡುಪಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಜಗೋಳಿ ಸಮೀಪದ ನೆಲ್ಲಿಕಾರು ಗ್ರಾ.ಪಂ.ವ್ಯಾಪ್ತಿಯ ಮೈನೇರು ಬಳಿ ಸಂಭವಿಸಿದೆ.

ಭೀಕರ ಅಪಘಾತದ ಪರಿಣಾಮ ಗಂಡ ಹೆಂಡತಿ ಮಗು ಸಹಿತ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಮೃತಪಟ್ಟವರೆಲ್ಲ ಆಂಧ್ರ ಮೂಲದವರು ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಆಂಧ್ರದ ಕುಟುಂಬ ಧರ್ಮಸ್ಥಳಕ್ಕೆ ಭೇಟಿ ನೀಡಿ ಅಲ್ಲಿಂದ ಶೃಂಗೇರಿ ಹೋಗುತ್ತಿದ್ದ ಸಂದರ್ಭ ಬೆಳಗ್ಗೆ 7 ರ ವೇಳೆಗೆ ನೆಲ್ಲಿಕಾರು ಸಮೀಪ ಈ ಘಟನೆ ನಡೆದಿದೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ತನಿಖೆ ಆರಂಭಿಸಿದ್ದಾರೆ. ಮೂವರ ಮೃತದೇಹಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ತೆಗೆಯಲಾಗಿದೆ. ದಂಪತಿಗಳು ಮೂವತ್ತು ವರ್ಷದೊಳಗಿನವರೆಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ಆರ್ಥಿಕ ಪರಿಸ್ಥಿತಿ ಸುಧಾರಣೆ : ನೋಡಿ ಇಂದಿನ ದಿನ ಭವಿಷ್ಯ -Vishwanews24 

 

 

Leave a Reply