ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಿಂದ ಆಸ್ಕರ್ ರವರಿಗೆ ಶ್ರದ್ಧಾಂಜಲಿ -Vishwanews24

Featured, ಉಡುಪಿ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಿಂದ ಆಸ್ಕರ್ ರವರಿಗೆ ಶ್ರದ್ಧಾಂಜಲಿ -Vishwanews24

ಕಾರ್ಕಳ: ಅಜಾತಶತ್ರು, ಹಿರಿಯ ರಾಜಕೀಯ ಧುರೀಣ, ಸರಳ, ಸಜ್ಜನ, ಮಾನವೀಯತೆಯ ದ್ಯೋತಕವಾಗಿದ್ದಂತಹ ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯಸಭಾ ಸದಸ್ಯ ದಿವಂಗತ ಆಸ್ಕರ್ ಫರ್ನಾಂಡಿಸ್ ರವರ ಬಾಳು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೂ ಅನುಕರಣೆಯವಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದೇ ಅವರಿಗೆ ನೀಡಿದಂತಹ ಶ್ರದ್ಧಾಂಜಲಿಯಾಗುತ್ತದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಸದಾಶಿವ ದೇವಾಡಿಗ ನುಡಿನಮನ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಆಸ್ಕರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಬಾಳು ಬದುಕಿನ ಬಗ್ಗೆ, ರಾಜಕೀಯ ಜೀವನದ ಸಾರ್ಥಕತೆಯ ಬಗ್ಗೆ ಜಾರ್ಜ್ ಕ್ಯಾಸ್ಟಲಿನೊ, ಸುಧಾಕರ್ ಕೋಟ್ಯಾನ್, ಸುಶಾಂತ್ ಸುಧಾಕರ್, ವಿಜಯಕುಮಾರ್ ಜೈನ್ ಈದು, ಅಶ್ಫಾಕ್ ಅಹ್ಮದ್ ರವರು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಿರಿಯಣ್ಣ ಶೆಟ್ಟಿ, ಮಾಲಿನಿ ರೈ ಥಾರನಾತ್ ಶೆಟ್ಟಿ ಶ್ರೀಧರ್ ಸನಿಲ್ ಮುಂಡ್ಕೂರು ಸುರೇಶ್ ಅಚಾರ್ಯ ಈದು ಜಯರಾಮ ಆಚಾರ್ಯ ನಕ್ರೆ ಉದಯ ವಿ ಶೆಟ್ಟಿ ಅಣ್ಣಪ್ಪ ನಕ್ರೆ ಶುಭದ ರಾವ್ ಪ್ರಕಾಶ್ ಆಚಾರ್ಯ ಕುಂಟಾಡಿ ವಿನ್ನಿ ಬೊಲ್ಟ್ ಮೆಂಡೊನ್ಸಾ ಮೊಹಮ್ಮದ್ ಅಸ್ಲಾಂ ವಿವೇಕಾನಂದ ಶೆಣೈ ಆರೀಫ್ ಕಲ್ಲೋಟ್ಟೆ ಹಿರಿಯ ಕಾಂಗ್ರೆಸ್ಸಿಗರಾದ ಸಾಣೂರು ಸುಂದರ ಗೌಡ ಕಾಂತಿ ಶೆಟ್ಟಿ ಜಯಂತಿ ಈದು ಶಾಂತಿ, ಶೋಭಾಪ್ರಸಾದ್, ರೀನಾ ಟೀಚರ್ ಸುಮನ ನಾಯ್ಕ್, ಅಪರ್ಣ, ಸುನಿಲ್ ಭಂಡಾರಿ, ಸದಾನಂದ ಭಂಡಾರಿ, ಇನಾಸ್ ಲೂಯಿಸ್, ಸತೀಶ್ ಕಾರ್ಕಳ ಉಪಸ್ಥಿತರಿದ್ದರು ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.