ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು – vishwanews24

Featured, ಉಡುಪಿ

ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು

ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ಮನೆಯೊಂದರ ಅಡಿಕೆ ಗೋಡೌನ್‌ನಿಂದ ಸುಮಾರು 95,000 ರೂಪಾಯಿ ಮೌಲ್ಯದ 2 ಕ್ವಿಂಟಾಲ್ ಸಿಪ್ಪೆ ಸುಲಿದ ಅಡಿಕೆಯನ್ನು ಕಳವು ಮಾಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಮಿಯ್ಯಾರು ಗ್ರಾಮದ ‘ಮಣಿಕಂಠ ಕೃಪಾ’ ನಿವಾಸಿ ಎಸ್. ರಮೇಶ್ ಶೆಟ್ಟಿ (76) ಎಂಬವರು ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೋದಿ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು: ಬಿ.ವೈ .ವಿಜಯೇಂದ್ರ – vishwanews24

ರಮೇಶ್ ಶೆಟ್ಟಿ ಅವರ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ ಗಣಪತಿ ಮತ್ತು ಮಂಜುಳಾ ಎಂಬವರು ಆ.20ರಿಂದ ಸೆ.28ರ ಅವಧಿಯಲ್ಲಿ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ನಗರ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಅ.11ರಿಂದ ಉಚ್ಚಿಲ ದಸರಾ ವೈಭವ : ಚಿನ್ನದ ಹೊಳಪಿನಲ್ಲಿ ಕಂಗೊಳಿಸಲಿದೆ ದಸರಾ ದರ್ಬಾರ್ ಮಂಟಪ – vishwanews24

Leave a Reply