ಕಾರ್ಕಳ:  ಯುವತಿಗೂ ನ್ಯಾಯ ಸಿಗಬೇಕು ; ಪ್ರದೀಪ್ ಪೂಜಾರಿ ಸಾವಿಗೂ ನ್ಯಾಯ ದೊರೆಯಬೇಕು : ಶುಭದ ರಾವ್ – vishwanews24

Featured, ಉಡುಪಿ

ಕಾರ್ಕಳ:  ಯುವತಿಗೂ ನ್ಯಾಯ ಸಿಗಬೇಕು ; ಪ್ರದೀಪ್ ಪೂಜಾರಿಯ ಸಾವಿಗೂ ನ್ಯಾಯ ದೊರೆಯಬೇಕು : ಶುಭದ ರಾವ್

ಕಾರ್ಕಳ: ಪೆರ್ಡೂರಿನಲ್ಲಿ ಇತ್ತೀಚೆಗೆ ನಡೆದ ಪ್ರಕರಣ ಆಘಾತವನ್ನುಂಟು ಮಾಡಿದೆ. ಯುವಕ-ಯುವತಿಯ ಪ್ರೇಮ ದ್ವೇಷಕ್ಕೆ ತಿರುಗಿ ಸಾವಿನಲ್ಲಿ ಅಂತ್ಯಗೊಂಡಿರುವುದು ಸಮಾಜ ಅರಗಿಸಿಕೊಳ್ಳಲು ಅಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಸಂಘಟನೆಗಳ ವರ್ತನೆ ಅತ್ಯಂತ ಪ್ರಮುಖವಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಹೇಳಿದರು.

ಕಾರ್ಕಳ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಮೊದಲ ಸಂತ್ರಸ್ತೆ ಯುವತಿಗೆ ನ್ಯಾಯ ಸಿಗಬೇಕು. ಎರಡನೇ ಸಂತ್ರಸ್ತ ಪ್ರದೀಪ್ ಪೂಜಾರಿಯ ಸಾವಿಗೂ ನ್ಯಾಯ ದೊರೆಯಬೇಕು. ಇಬ್ಬರ ಕುಟುಂಬಗಳ ನೋವು ಮತ್ತು ದುಃಖದಲ್ಲಿ ಸಮಾನವಾಗಿ ಭಾಗಿಯಾಗುತ್ತೇವೆ. ಅವರಿಬ್ಬರಿಗೂ ನ್ಯಾಯ ಸಿಗುವ ಹೋರಾಟದಲ್ಲಿ ನಾವೂ ಭಾಗಿಯಾಗುತ್ತೇವೆ ಎಂದರು.

ಇದನ್ನೂ ಓದಿ :

ನಾನು ಸ್ಪರ್ಧಿಸಿದ್ದರೆ ಭರ್ಜರಿ ಭರ್ಜರಿ ಬಹುಮತದಿಂದ ಗೆಲ್ಲುತ್ತಿದ್ದೆ: ಟ್ರಂಪ್ – vishwanews24

ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಆದರೆ ಪ್ರೇಮ ದ್ವೇಷವಾಗಿ ಮಾರ್ಪಟ್ಟು ಸಾವಿನಲ್ಲಿ ಅಂತ್ಯಗೊಳ್ಳಲು ಪ್ರಮುಖ ಕಾರಣವೇನು ಎಂಬುದನ್ನು ಪತ್ತೆಹಚ್ಚಿ ಜನರ ಮುಂದಿಡುತ್ತಾರೆ ಎಂಬ ಭರವಸೆಯಿದೆ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಯುವಕ ಮತ್ತು ಯುವತಿ ಎರಡು ಪ್ರಮುಖ ಸಮಾಜಗಳಿಗೆ ಸೇರಿದವರಾಗಿದ್ದು, ಆ ಎರಡೂ ಸಮಾಜಗಳು ಈ ನೆಲದ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಗೆ ಬಹುದೊಡ್ಡ ಕೊಡುಗೆ ನೀಡಿವೆ. ಆದ್ದರಿಂದ ಎಲ್ಲರೂ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗಿದೆ. ಪರಸ್ಪರ ಎರಡು ಸಮಾಜಗಳನ್ನು ಎತ್ತಿಕಟ್ಟುವ ಕೆಲಸವನ್ನು ಕೆಲವರು ಈಗಾಗಲೇ ಆರಂಭಿಸಿದ್ದಾರೆ. ಸಮಸ್ಯೆ ಧರ್ಮಗಳ ನಡುವಿನದ್ದಾದರೆ ಸಂಘಟನೆಗಳನ್ನು, ಧರ್ಮದ ಒಳಗಿನದ್ದಾದರೆ ಸಮಾಜವನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ :

ಮಂಗಳೂರು: ಬೈಕಂಪಾಡಿಯಲ್ಲಿ ಅಕ್ರಮ ಗೋ ಸಾಗಾಟ ಪತ್ತೆ:  ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 16 ಗೋವುಗಳ ರಕ್ಷಣೆ – vishwanews24

Leave a Reply