ಕಾರ್ಕಳ : ಹಿಂದೂ ಕಾರ್ಯಕರ್ತರ ತ್ಯಾಗ ಎಲ್ಲಿ ತನಕ ಇದೆಯೋ ಅಲ್ಲಿಯವರೆಗೂ ಧರ್ಮ, ಸಂಸ್ಕೃತಿ ನಶಿಸಲು ಸಾಧ್ಯವಿಲ್ಲ : ಸಾಧ್ವಿ ಬಾಲಿಕಾ ಸರಸ್ವತಿ

Featured, ಉಡುಪಿ

ಹಿಂದೂ ಕಾರ್ಯಕರ್ತರ ತ್ಯಾಗ ಎಲ್ಲಿ ತನಕ ಇದೆಯೋ ಅಲ್ಲಿಯವರೆಗೂ ಧರ್ಮ, ಸಂಸ್ಕೃತಿ ನಶಿಸಲು ಸಾಧ್ಯವಿಲ್ಲ..

ನಮ್ಮೂರೆ ನಮಗೆ ತೀರ್ಥ ಕ್ಷೇತ್ರ ವಾಗಬೇಕು .ಅಗಲೆ ಧರ್ಮದ ಉಳಿಸಲು ಸಾಧ್ಯ..

ಗೋಮಾತೆ ರಾಷ್ಟ್ರಮಾತೆಯಾಗಿ ಘೋಷಣೆಯಾಗಬೇಕು ..

ಲವ್‌ ಜೆಹಾದ್‌, ಮತಾಂತರ, ಗೋಹತ್ಯೆ ತಡೆಗೆ ಕಠಿನ ಕಾನೂನು ಜಾರಿಯಾಗಲಿ..

ಲವ್‌ ಜೆಹಾದ್‌ ತಡೆಗೆ ಪ್ರತಿ ಮನೆಯ ತಾಯಿಯೂ ಝಾನ್ಸಿ ರಾಣಿಯಾಗಬೇಕು..

ಕಾರ್ಕಳ ಬೃಹತ್‌ ಹಿಂದೂ ಸಂಗಮದಲ್ಲಿ ಸಾಧ್ವಿ ಬಾಲಿಕಾ ಸರಸ್ವತಿ ..

ಕಾರ್ಕಳ: ಕಾರ್ಕಳ ವಿಶ್ವ ಹಿಂದೂ ಪರಿಷದ್ ಭಜರಂಗದಳ ಉಡುಪಿ ಇದರ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಕಾರ್ಕಳದ ಗಾಂಧಿ ಮೈದಾನದ ಅಮರ ಸೇನಾನಿ ಜನರಲ್ ಬಿಪಿನ್ ರಾವತ್ ವೇದಿಕೆಯಲ್ಲಿ ನಡೆಯಿತು.

ಹಿಂದೂ ಯುವಕರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಸಾಧ್ವಿ ಬಾಲಿಕಾ ಸರಸ್ವತಿ ಅವರು “ಹಿಂದೂ ಕಾರ್ಯಕರ್ತರ ತ್ಯಾಗ ಎಲ್ಲಿ ತನಕ ಇದೆಯೋ ಅಲ್ಲಿಯವರೆಗೂ ಧರ್ಮ, ಸಂಸ್ಕೃತಿ ನಶಿಸಲು ಸಾಧ್ಯವಿಲ್ಲ . ಟಿಪ್ಪುವನ್ನು ಪೂಜಿಸುವ ಮನಸ್ಸುಗಳನ್ನು ಧಿಕ್ಕರಿಸಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಸಂಸ್ಕೃತಿಯ ಕುರಿತಾದ ಶಿಕ್ಷಣ ಮೊದಲ ಆದ್ಯತೆಯಾಗಬೇಕು” ಎಂದು ಅವರು ಹೇಳಿದರು. ಇದೇ ಸಂಧರ್ಭದಲ್ಲಿ ಕಟ್ಟುನಿಟ್ಟಾದ ಗೋಹತ್ಯೆ ವಿರೋಧಿ ಕಾನೂನು ಮತ್ತು ಮತಾಂತರ ಮತ್ತು ಲವ್ ಜಿಹಾದ್ ವಿರುದ್ಧ ಕಾನೂನನ್ನು ಜಾರಿಗೊಳಿಸಲು ಸರ್ಕಾರವನ್ನು ಅವರು ಒತ್ತಾಯಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಭಾರತೀಯ ಸಂಸ್ಕೃತಿಯ ರಕ್ಷಕರು ಮಾಡಿದ ಉದಾತ್ತ ಕಾರ್ಯದಿಂದಾಗಿ ನಾವು ತಲೆ ಎತ್ತಿ ಬದುಕುತ್ತಿದ್ದೇವೆ. ದೇಶದ ಕಾನೂನಿನ ವ್ಯಾಪ್ತಿಯಲ್ಲಿ ಗೋ ಮಾತೆ ಮತ್ತು ನಮ್ಮ ಧಾರ್ಮಿಕ ಸ್ಥಳಗಳನ್ನು ರಕ್ಷಿಸೋಣ. ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ನಮ್ಮ ಸಂಸ್ಕೃತಿಯನ್ನು ಗೌರವಿಸುವ ಸರ್ಕಾರವನ್ನು ಆಯ್ಕೆ ಮಾಡೋಣ ಎಂದರು.

ಗೌರಿ ಗದ್ದೆ ದತ್ತಾಶ್ರಮದ ವಿನಯ್ ಗುರೂಜಿ ಅವರು ಬಜರಂಗದಳ ಕಾರ್ಯಕರ್ತರ ಮೇಲಿನ ಪ್ರಕರಣಗಳ ಹೋರಾಟಕ್ಕಾಗಿ ಆರಂಭಿಸಿರುವ ದತ್ತಿ ನಿಧಿಗೆ 50,000 ರೂಪಾಯಿಗಳನ್ನು ಘೋಷಿಸಿದರು. ದೇಹವನ್ನು ಶಿಲೆಯಾಗಿ ನಾಮಧೇಯವಾಗಿ , ಧರ್ಮದ ವಿರುದ್ದ ಮಾತನಾಡುವುದು ಧರ್ಮಯುದ್ದವಾದೃ ಕೇಸರಿ ಸನಾತನ ಧರ್ಮ ಹೊಂದಿರುವ ಸಂಕೇತ , ಸೃಷ್ಟಿ ಸರಿದೂಗಲು ಹಿಂದೂ ಧರ್ಮ ಉಳಿಯಲು , ಧರ್ಮ ಪ್ರಜ್ಞೆ ನಿಡುವ ಪ್ರವೃತ್ತಿ ಬಾಲ್ಯದಲ್ಲೇ ಅಗಬೇಕು. ನಾಮ ಭಜನೆ ,ರಾಮ ಭಜನೆಯಾಗಲಿ , ಕಲಿ ಕಲ್ಮಶ ತೊಳೆಯುವ ಕಾರ್ಕಳ ವಾಗಲಿ, ನಮ್ಮೂರೆ ನಮಗೆ ತೀರ್ಥ ಕ್ಷೇತ್ರ ವಾಗಬೇಕು .ಅಗಲೆ ಧರ್ಮದ ಉಳಿಸಲು ಸಾಧ್ಯ ಎಂದರು.

ಸಮಾವೇಶಕ್ಕೂ ಮುನ್ನ ಕಾರ್ಕಳದ ಸ್ವರಾಜ್ ಮೈದಾನದಿಂದ ಗಾಂಧಿ ಮೈದಾನದ ವರೆಗೆ ವೈಭವದ ಶೋಭಾಯಾತ್ರೆ ನಡೆಯಿತು .ಸಮಾವೇಶದಲ್ಲಿ ಬಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.

ಓಮಿಕ್ರಾನ್ ಸೋಂಕು : ಕೇರಳದಲ್ಲಿ ಮೊದಲ ಪ್ರಕರಣ ಪತ್ತೆ – Vishwanews24