ಕಾರ್ಮಿಕರ ಹಿತರಕ್ಷಣೆಗೆ ಬಿಜೆಪಿ ಸರಕಾರ ಬದ್ಧ: ಯಶ್ಪಾಲ್ ಸುವರ್ಣ – Vishwanews24

Featured, ಉಡುಪಿ

ಕಾರ್ಮಿಕರ ಹಿತರಕ್ಷಣೆಗೆ ಬಿಜೆಪಿ ಸರಕಾರ ಬದ್ಧ: ಯಶ್ಪಾಲ್ ಸುವರ್ಣ

ಉಡುಪಿ: ಕಾರ್ಮಿಕ ವರ್ಗದ ಶ್ರಮದ ಫಲವಾಗಿ ಇಂದು ಬೃಹತ್ ಕೈಗಾರಿಕೆಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ದೇಶದ ಆರ್ಥಿಕತೆಗೆ ಶಕ್ತಿ ತುಂಬುತ್ತಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಕಾರ್ಮಿಕರ ಏಳಿಗೆಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕಾರ್ಮಿಕ ವರ್ಗದ ಹಿತರಕ್ಷಣೆಗೆ ಬಿಜೆಪಿ ಸರ್ಕಾರ ಬದ್ಧತೆ ಮೆರೆದಿದೆ.

ಉಡುಪಿ ಕ್ಷೇತ್ರದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಪ್ರೋತ್ಸಾಹ ನೀಡಿ ಉದ್ಯೋಗ ಸೃಷ್ಟಿಸುವುದಾಗಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹೇಳಿದರು.

ಮಣಿಪಾಲ ಭಾಗದ ವಿವಿಧ ಗಾರ್ಮೆಂಟ್ಸ್ ಹಾಗೂ ಕೈಗಾರಿಕಾ ಘಟಕಗಳಿಗೆ ಶಾಸಕ ರಘುಪತಿ ಭಟ್ ರವರೊಂದಿಗೆ ಭೇಟಿ ನೀಡಿ ಕಾರ್ಮಿಕರಲ್ಲಿ ಮತ ಯಾಚನೆ ಮಾಡಿದರು.

ಕಾಪು ಕ್ಷೇತ್ರದ ಮಲ್ಲಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿನಯ್ ಕುಮಾರ್ ಸೊರಕೆ ಮತಯಾಚನೆ – Vishwanews24

ಶಾಸಕ ರಘುಪತಿ ಭಟ್ ಮಾತನಾಡಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ರನ್ನು ಗೆಲ್ಲಿಸಿ ಬಿಜೆಪಿ ಸರ್ಕಾರದ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕೈ ಕೊಡಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ಮಂಜುನಾಥ್‌ ಮಣಿಪಾಲ್‌ ,ಕಲ್ಪನಾ‌ ಸುಧಾಮ, ಮಾಜಿ ನಗರಸಭಾ ಸದಸ್ಯ ನರಸಿಂಹ ನಾಯಕ್ ,ಡಾ ಬಾಲಕೃಷ್ಣ ಮದ್ದೋಡಿ, ಸತೀಶ್ ಸಾಲ್ಯಾನ್ ,ಆಲ್ವಿನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ವಿನಯ್ ಕುಮಾರ್ ಸೊರಕೆಯನ್ನು ಸಾರ್ವಜನಿಕವಾಗಿ ಕೊಂದುಬಿಡಿ ಎಂದು ಫೇಸ್ಬುಕ್ನಲ್ಲಿ ಪ್ರಚೋದನಾತ್ಮಕ ಕಮೆಂಟ್ : ಸಾರ್ವಜನಿಕ ವಲಯದಲ್ಲಿ ಬಾರಿ ಅಕ್ರೋಶ – Vishwanews24

Leave a Reply