ನವದೆಹಲಿ:ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಕಿಡಿಕಾರುತ್ತಿರುವ ಪಾಕಿಸ್ತಾನಕ್ಕೆ ಕ್ರಿಕೆಟಿಗ ಶಿಖರ್ ಧವನ್ ಖಡಕ್ ತಿರುಗೇಟು ನೀಡಿದ್ದು, ಭಾರತದ ವಿರುಗ್ಧ ಬೊಟ್ಟು ಮಾಡಿ ತೋರಿಸುವ ಮುನ್ನ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ
ಖಾಸಗಿ ವಾಹಿನಿಯ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಪಾಕಿಸ್ತಾನ ಸಲಹೆ ನೀಡಿರುವ ಕುರಿತಾಗಿ ಮಾತನಾಡಿರುವ ಧವನ್, ‘ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಖಡಕ್ ಉತ್ತರ ನೀಡಿದ್ದಾರೆ.
ಇದೇ ವೇಳೆ ಕಾಶ್ಮೀರ ನಮ್ಮ ಆಂತರಿಕ ವಿಚಾರ ಎಂದು ಹೇಳಿರುವ ಧವನ್, ಈ ಕುರಿತಂತೆ ಬೇರೆಯವ ಉಪದೇಶ ನಮಗೆ ಬೇಕಿಲ್ಲ. ತಾಯ್ನಾಡಿನ ಕುರಿತಾಗಿ ವಿದೇಶಿಗರು ಮಾತನಾಡಿದರೆ ಖಂಡಿತವಾಗಿಯೂ ತಾವು ಅದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
‘ಯಾರೋ ಒಬ್ಬರು ನಮ್ಮ ದೇಶದ ಕುರಿತಾಗಿ ಇಲ್ಲಸಲ್ಲದನ್ನು ಮಾತನಾಡಿದರೆ ಖಂಡಿತವಾಗಿಯೂ ಅವರ ವಿರುದ್ಧವಾಗಿ ನಿಲ್ಲುತ್ತೇವೆ. ಬೇರೊಬ್ಬರು ನಮಗೆ ಸಲಹೆ ನೀಡುವ ಅಗತ್ಯ ಖಂಡಿತವಾಗಿಯೂ ಇಲ್ಲ. ಮೊದಲು ನಿಮ್ಮ ದೇಶದಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿ ಬಳಿಕ ಬೇರೆಯವರ ಬಗ್ಗೆ ಮಾತನಾಡಿ. ಒಂದು ಗಾದೆ ಮಾತಿದೆ, ಯಾರ ಮನೆ ಗಾಜಿನಿಂದ ಮಾಡಿರುವುದ್ದಾಗಿರುತ್ತೋ ಅವರು ಬೇರೆಯವರ ಮನೆಯ ಮೇಲೆ ಕಲ್ಲೆಸೆಯುವುದಿಲ್ಲ ಎಂದು ಗಬ್ಬರ್ ಖ್ಯಾತಿ ಧವನ್ ತಮ್ಮದೇ ಶೈಲಿಯಲ್ಲಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ.
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…