ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ : ರಾಷ್ಟ್ರ ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆ; ಉಡುಪಿಯ ಗಹನಾಗೆ ಪ್ರಥಮ ಸ್ಥಾನ -Vishwanews24
ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ : ರಾಷ್ಟ್ರ ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆ; ಉಡುಪಿಯ ಗಹನಾ ಮಾನಸಿಗೆ ಪ್ರಥಮ ಸ್ಥಾನ -Vishwanews24
ಉಡುಪಿ: ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ. ಬೆಂಗಳೂರಿನಲ್ಲಿ ಇಸ್ಕಾನ್ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಉಡುಪಿ ಮೂಲದ ಬೆಂಗಳೂರು ನಿವಾಸಿ ಗಹನಾ ಮಾನಸಿ ತನಗಿಂತ 10 ವರ್ಷ ಹಿರಿಯ ವಯಸ್ಸಿನ ವಿದ್ಯಾರ್ಥಿಗಳನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಸ್ಪರ್ಧೆಯನ್ನು 6ರಿಂದ 14 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸ ಲಾಗಿತ್ತು. ವಿವಿಧ ರಾಜ್ಯಗಳ 370 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಗಹನಾ ಮಾನಸಿ (5 ವರ್ಷ 10 ತಿಂಗಳು) ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕವೊಂದನ್ನು ನಿಗದಿ ಮಾಡಲಾಗಿತ್ತು. ಶ್ಲೋಕ ಪೂರ್ಣಗೊಳಿಸಲು ಸಮಯದ ಮಿತಿಯನ್ನು ಸಹ ನೀಡಲಾಗಿತ್ತು. ಗಹನಾ ನಿಗದಿತ ಸಮಯದೊಳಗೆ ಯಾವುದೇ ತಡವರಿಕೆ ಇಲ್ಲದೆ ಶ್ಲೋಕವನ್ನು ಪೂರ್ಣಗೊಳಿಸಿದ್ದು, ಆ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ :ಮಂಗಳೂರು : ಜೇಸಿಐ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಿಧಿ ಶೆಟ್ಟಿ ಪುಳಿಂಚ -Vishwanews24
ಗಹನಾ ಮಾನಸಿ ಬೆಳ್ಳಂಪಳ್ಳಿ ನಿವಾಸಿ ಶ್ವೇತಾ ಮತ್ತು ಮಧುರ್ರಾಜ್ ಶೆಟ್ಟಿಗಾರ್ ದಂಪತಿಯ ಪುತ್ರಿ. ಬೆಳ್ಳಂಪಳ್ಳಿಯ ಉದಯವಾಣಿ ಏಜೆಂಟ್ ಸಾವಿತ್ರಿ ಸೀತಾರಾಮ್ ಶೆಟ್ಟಿಗಾರ್ ಅವರ ಮೊಮ್ಮಗಳು. ಬಾಲಕಿಯ ತಂದೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಗಹನಾ ಬೆಂಗಳೂರಿನ ಶಾಲೆಯೊಂದರಲ್ಲಿ ಯುಕೆಜಿಯಲ್ಲಿ ಕಲಿಯುತ್ತಿದ್ದಾಳೆ. ಶೈಕ್ಷಣಿಕ ಸೇರಿದಂತೆ ಇತರ ಚಟುವಟಿಕೆಗಳಲ್ಲೂ ಮುಂದೆ ಇದ್ದಾಳೆ.
