ಕುಂದಾಪುರ:ಬೃಹತ್ ಮರ ಬಿದ್ದು ಧರೆಗುರುಳಿದ ವಿದ್ಯುತ್ ಕಂಬಗಳು ; ತಪ್ಪಿದ ದುರಂತ – vishwanews24
ಕುಂದಾಪುರ : ಮರ ಬಿದ್ದು ಧರೆಗುರುಳಿದ ವಿದ್ಯುತ್ ಕಂಬಗಳು.. ಅದೃಷ್ಟವಶಾತ್ ಸ್ವಲ್ಪದರಲ್ಲೇ ಪಾರಾದಾ ಶಾಲಾ ಬಸ್
ಕುಂದಾಪುರ: ಬೃಹತ್ ಮರ ಬಿದ್ದು ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದಿದ್ದು, ಅದೃಷ್ಟವಶಾತ್ ಸ್ವಲ್ಪದರಲ್ಲೇ ಶಾಲಾ ಬಸ್ಸೊಂದು ಪಾರಾದ ಘಟನೆ ಹೆಮ್ಮಾಡಿ ಗ್ರಾಮದ ಸಂತೋಷ್ ನಗರ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಗಾಳಿ ಮಳೆಗೆ ಬೃಹತ್ ಮರವೊಂದು ಕೆಳಕ್ಕುರುಳಿದೆ. ಇದರಿಂದಾಗಿ ವಿದ್ಯುತ್ ತಂತಿಗಳು ಸಹ ಧಾರಾಶಾಹಿಯಾಗಿವೆ. ಸಂಚಾರ ಅಸ್ತವ್ಯಸ್ತಗೊಂಡಿದೆ. ಶಾಲೆ ಬಸ್ಸೊಂದು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು, ಮರ ಬಿದ್ದಾಗ ಆ ಬಸ್ ಕೇವಲ 20 ಮೀ. ದೂರದಲ್ಲಿತ್ತು. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದೆ.
ಉಪ್ಪಿನಂಗಡಿ: ಬೈಕ್ ಹಾಗೂ ಪಿಕಪ್ ಢಿಕ್ಕಿ ; ಸವಾರ ಮೃತ್ಯು – vishwanews24
ಸ್ಥಳಕ್ಕೆ ಮೆಸ್ಕಾಂನವರು ಬಂದಿದ್ದು, ಸ್ಥಳೀಯರ ಸಹಾಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.
