ಕುಂದಾಪುರ  : ನಿಯಂತ್ರಣ ತಪ್ಪಿ ರಸ್ತೆ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ  ಆಟೋ ರಿಕ್ಷಾ ; ಪ್ರಯಾಣಿಕ ಸಾವು – Vishwanews24

Featured, ಉಡುಪಿ

ಕುಂದಾಪುರ  : ನಿಯಂತ್ರಣ ತಪ್ಪಿ ರಸ್ತೆ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ  ಆಟೋ ರಿಕ್ಷಾ – ಪ್ರಯಾಣಿಕ ಸಾವು

ಕುಂದಾಪುರ  : ರಿಕ್ಷಾವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಗೋಡು ಸಮೀಪ ತಡರಾತ್ರಿ ನಡೆದಿದೆ. ಕುಂದಾಪುರದ ನಿವಾಸಿ ಭಾಸ್ಕರ (33) ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ ದುರ್ದೈವಿ.

ಭಾನುವಾರ ತಡರಾತ್ರಿ ಮೊವಾಡಿ-ತ್ರಾಸಿ ರಸ್ತೆಯಲ್ಲಿ ರಿಕ್ಷಾ ಚಾಲಕ ಗುರುರಾಜ ಅತೀ ವೇಗದಲ್ಲಿ ಆಟೋ ರಿಕ್ಷಾವನ್ನು ಚಲಾಯಿಸಿದ್ದು ಹಠಾತ್ತನೆ ಬ್ರೇಕ್ ಅದುಮಿದ ಪರಿಣಾಮ ಆಟೋರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೆಂಗಿನ‌ ಮರಕ್ಕೆ ಢಿಕ್ಕಿಯಾಗಿದೆ.

ಆಟೋರಿಕ್ಷಾ ಹಿಂಬದಿ ಕುಳಿತ ಭಾಸ್ಕರ್ ಅವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯರ ಜೊತೆಗೂಡಿ ಗಂಗೊಳ್ಳಿಯ ಆಪತ್ಭಾಂಧವ ಇಬ್ರಾಹಿಂ ಗಂಗೊಳ್ಳಿ ಅವರು ತಮ್ಮ ಆಂಬುಲೆನ್ಸ್ ಮೂಲಕ ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.

‘RSS, ಬಜರಂಗದಳ ಬ್ಯಾನ್ ಮಾಡಿದ್ರೆ ಪ್ರಯೋಜನವಿಲ್ಲ, ಕಾರ್ಯಕರ್ತರನ್ನ ರಿಪೇರಿ ಮಾಡ್ಬೇಕು’ : ಸಚಿವ ಸತೀಶ್ ಜಾರಕಿಹೊಳಿ – Vishwanews24

ರಿಕ್ಷಾ ಚಾಲಕ ಗುರುರಾಜ ಪೂಜಾರಿ ಅವರಿಗೂ ಗಾಯಗಳಾಗಿದ್ದು ಆಸಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply