ಕುಂದಾಪುರ: ಪಡಿತರ ಅಕ್ಕಿಗಾಗಿ ಅಕ್ಕ- ತಂಗಿ ನಡುವೆ ಹೊಡೆದಾಟ ; ಅಕ್ಕ ಆಸ್ಪತ್ರೆಗೆ ದಾಖಲು – Vishwanews24
ಕುಂದಾಪುರ: ಪಡಿತರ ಅಕ್ಕಿಗಾಗಿ ಅಕ್ಕ- ತಂಗಿ ನಡುವೆ ಹೊಡೆದಾಟ ; ಅಕ್ಕ ಆಸ್ಪತ್ರೆಗೆ ದಾಖಲು
ಕೋಟ: ಕೋಟದ ವಡ್ಡರ್ಸೆ ಎಂ.ಜಿ. ಕಾಲನಿಯಲ್ಲಿ ಕುಟುಂಬದ ಪಾಲಿನ ಪಡಿತರ ಅಕ್ಕಿಗಾಗಿ ಅಕ್ಕ- ತಂಗಿ ನಡುವೆ ಹೊಡೆದಾಟ ನಡೆದು ಅಕ್ಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅ. 17ರಂದು ಸಂಭವಿಸಿದೆ.
ಜ್ಯೋತಿ (32) ಗಾಯಗೊಂಡ ಗೃಹಿಣಿಯಾಗಿದ್ದಾರೆ. ಸೂರ್ಯಗ್ರಹಣ : ಅ.25ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಾವುದೇ ಸೇವೆ , ಭೋಜನ ಪ್ರಸಾದ ವ್ಯವಸ್ಥೆ ಇಲ್ಲ – Vishwanews24
ಜ್ಯೋತಿಯವರು ಪತಿ ಹಾಗೂ ಮಕ್ಕಳೊಂದಿಗೆ ಬಿದ್ಕಲ್ ಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಅ.17 ರಂದು ಬೆಳಗ್ಗೆ ವಡ್ಡರ್ಸೆ ಗ್ರಾಮದ ಎಂ.ಜಿ. ಕಾಲನಿಯಲ್ಲಿರುವ ತನ್ನ ತಾಯಿ ಮನೆಗೆ ಬಂದಾಗ, ತಾಯಿಯು ಮನೆಯಲ್ಲಿ ಇರದೇ ಕೆಲಸಕ್ಕೆ ಹೋಗಿದ್ದರು, ಮನೆಯಲ್ಲಿ ತಂಗಿ ಆಶಾ ಇದ್ದು ಅವಳಲ್ಲಿ ಸರಕಾರದಿಂದ ಸಿಗುವ ಉಚಿತ ಪಡಿತರ ಅಕ್ಕಿಯಲ್ಲಿ ತನ್ನ ಪಾಲಿಗೆ ಬಂದ ಅಕ್ಕಿಯನ್ನು ನೀಡುವಂತೆ ಕೇಳಿದಾಗ ಆಶಾ ಅವಾಚ್ಯ ಶಬ್ದಗಳಿಂದ ಬೈದಿದ್ದು, ಮಾತಿಗೆ ಮಾತು ಬೆಳೆದು ಜ್ಯೋತಿಯವರಿಗೆ ಮರದ ದೊಣ್ಣೆಯಿಂದ ಹೊಡೆದಿದ್ದಾರೆ ಎನ್ನಲಾಗಿದೆ.
ಇನ್ನು ತೀವ್ರವಾಗಿ ಗಾಯಗೊಂಡ ಅವರನ್ನು ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಅಲ್ಲಿಂದ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮುಲ್ಕಿ: ಸ್ಕೂಟರ್ ಗೆ ಬುಲೆಟ್ ಬೈಕ್ ಢಿಕ್ಕಿ : ಸವಾರರಿಬ್ಬರು ಗಂಭೀರ ಗಾಯ – Vishwanews24
ಪ್ರಕರಣದ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
