ಕುಂದಾಪುರ :ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಯುತ್ತದೆಯೋ ಆ ದೇವಸ್ಥಾನಗಳಿಂದಲೇ ಕಲಾವಿದರಿಗೆ ಪೂರ್ಣಾವಧಿ ಸಂಭಾವನೆ :ಸಚಿವ ಕೋಟ – Vishwanews24
ಕುಂದಾಪುರ :ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಯುತ್ತದೆಯೋ ಆ ದೇವಸ್ಥಾನಗಳಿಂದಲೇ ಕಲಾವಿದರಿಗೆ ಪೂರ್ಣಾವಧಿ ಸಂಭಾವನೆ :ಸಚಿವ ಕೋಟ – Vishwanews24
- ಕುಂದಾಪುರ: ದೇವಸ್ಥಾನದ ಸಂಪನ್ಮೂಲ ಕ್ರೋಡೀಕರಿಸಿ ಕಲಾವಿದರಿಗೆ ಪೂರ್ಣಾವಧಿ ಸಂಭಾವನೆ ನೀಡುವಂತೆ ಸೂಚಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರ ತಲ್ಲೂರು ಗ್ರಾಪಂ ನಲ್ಲಿ ವಿಶೇಷ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಯುತ್ತದೆಯೋ ಆ ದೇವಸ್ಥಾನದ ಸಂಪನ್ಮೂಲ ಕ್ರೋಡೀಕರಿಸಿ ಕಲಾವಿದರಿಗೆ ಪೂರ್ಣಾವಧಿಯ ಸಂಭಾವನೆ ನೀಡುವ ಬಗ್ಗೆ ತಿಳಿಸಲಾಗಿದೆ.
ಕೆಲವು ದೇವಸ್ಥಾನಗಳು ಕಲಾವಿದರ ಬಳಿ ಅಗ್ರಿಮೆಂಟ್ ಮಾಡಿಕೊಳ್ಳುವಾಗಲೇ ಮಧ್ಯದಲ್ಲೇ ಆಟ ನಿಂತರೆ, ಸಂಭಾವನೆ ಕಡಿತಗೊಳಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ ಎಂಬ ಸುದ್ದಿ ಇದೆ. ಆದೇನೆ ಇದ್ದರೂ, ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಯುತ್ತದೆಯೋ ಆ ದೇವಸ್ಥಾನದ ಸಂಪನ್ಮೂಲಗಳಲ್ಲಿ ಶಕ್ತಿ ಇದ್ದರೆ ಕಲಾವಿದರಿಗೆ ಪೂರ್ಣ ಸಂಬಳ ಕೊಡಿ ಎಂದು ಸರ್ಕಾರ ಆದೇಶಿಸಿದೆ ಎಂದು ಸಚಿವರು ಹೇಳಿದ್ದಾರೆ.
