ಕುಂದಾಪುರ: ವ್ಯಕ್ತಿಯಿಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ; ಆರೋಪಿ ಪೊಲೀಸರ ವಶಕ್ಕೆ (ವಿಡಿಯೋ) -Vishwanews24
ಕುಂದಾಪುರ: ಪಾಕಿಸ್ತಾನದ ಪರ ಘೋಷಣೆ ಕೂಗುವ ಪರಿಪಾಠ ಇಂದು ಅಧಿಕೃತವಾಗಿ ಕುಂದಾಪುರಕ್ಕೂ ಕಾಲಿಟ್ಟಿದೆ. ಕುಂದಾಪುರದ ಸರ್ಕಾರೀ ಕಚೇರಿಗಳ ಸಂಕೀರ್ಣ ಮಿನಿ ವಿಧಾನ ಸೌಧದ ಒಳಗೆ ವ್ಯಕ್ತಿಯೊಬ್ಬ ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾ ನಿರಂತರವಾಗಿ ಘೋಷಣೆ ಕೂಗಿದ ಘಟನೆ ಸೋಮವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ನಡೆದಿದೆ.
ಘೋಷಣೆ ಕೂಗಿದ ವ್ಯಕ್ತಿಯನ್ನು ಕೋಡಿ ನಿವಾಸಿಯಾಗಿರುವ ರಾಘವೇಂದ್ರ ಗಾಣಿಗ(43) ಎಮದು ಗುರುತಿಸಲಾಗಿದ್ದು, ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ ಬೆಳಿಗ್ಗೆ ಸುಮಾರು 9.45ರ ಸುಮಾರಿಗೆ ಆರೋಪಿ ರಾಘವೇಂದ್ರ ಗಾಣಿಗ ಕುಂದಾಪುರ ಕುಂದಾಪುರದ ಸರ್ಕಾರೀ ಕಚೇರಿಗಳ ಸಂಕೀರ್ಣ ಮಿನಿ ವಿಧಾನಸೌಧಕ್ಕೆ ಬಂದಿದ್ದಾನೆ. ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆಯೇ ಪಾಕಿಸ್ತಾನ ಜಿಂದಾಬಾದ್ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆಗಳನ್ನು ಕಾರಿಡಾರ್ ಉದ್ದಕ್ಕೂ ಕೂಗುತ್ತಾ ಸಾಗಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಕುಂದಾಪುರ ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದಾರೆ. ಬಳಿಕ ಆರೋಪಿ ರಾಘವೇಂದ್ರ ಗಾಣಿಗ ಕಾರಿಡಾರ್ನಿಂದ ಮಿನಿ ವಿಧಾನಸವಧದ ಒಳಗೆ ಪ್ರವೇಶಿಸಿದ್ದು, ಅಲ್ಲಿಯೂ ನಿರಂತರವಾಗಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದ್ದಾನೆ. ಈ ಸಂದರ್ಭ ಮಾಹಿತಿ ಪಡೆದ ಕುಂದಾಪುರ ತಹಸೀಲ್ದಾರ್ ಲಿಖಿತವಾಗಿ ಆರೋಪಿಯ ವಿರುದ್ದ ದೂರು ನೀಡಿದ್ದು, ಪೊಲೀಸರು ಆರೋಪಿ ರಾಘವೇಂದ್ರ ಗಾಣಿಗನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
