ಕುಂದಾಪುರ : ಸಂಗಮ್ ಸೇತುವೆಯಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ ; ಶೋಧ ಕಾರ್ಯ – Vishwanews24

Featured, ಉಡುಪಿ

ಕುಂದಾಪುರ : ಸಂಗಮ್ ಸೇತುವೆಯಿಂದ ನದಿಗೆ ಹಾರಿದ ಯುವಕ ; ಶೋಧ ಕಾರ್ಯ

ಕುಂದಾಪುರ: ಯುವಕನೊಬ್ಬ ಸೇತುವೆ ಮೇಲೆ ಸೈಕಲ್ ಇಟ್ಟು ಪಂಚಗಂಗಾವಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಸಂಗಮ್ ಸೇತುವೆಯಲ್ಲಿ ಸಂಭವಿಸಿದೆ. ಸಾಯಿಷ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಾತ ಎನ್ನಲಾಗಿದೆ.

ಕುಂದಾಪುರ ಸಂಗಮ್ ಸೇತುವೆ ಮೇಲಿಂದ ಈತ ನದಿಗೆ ಹಾರಿದ್ದನ್ನು ಗಮನಿಸಿದ ವಾಹನ ಸವಾರರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ನದಿಗೆ ಹಾರುವ ಮೊದಲು ಈ ಯುವಕ ಮೊಬೈಲ್ ಫೋನ್ ಸೇತುವೆ ಮೇಲೆ ಇಟ್ಟಿದ್ದು ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆತ್ಮಹತ್ಯೆಗೆ ಶರಣಾದ ಯುವಕನಿಗಾಗಿ ನದಿಯಲ್ಲಿ ದೋಣಿ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ.

ಕನ್ನಡ ಹಿರಿಯ ನಟಿ ಲೀಲಾವತಿಗೆ ಅನಾರೋಗ್ಯ: ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಭೇಟಿ, ಆರೋಗ್ಯ ವಿಚಾರಣೆ – Vishwanews24

 

Leave a Reply