ಕುಂದಾಪುರ ಹಿಜಾಬ್ ಪ್ರಕರಣ :ಹಿಜಾಬ್ ತೆಗೆಯಲು ಒಪ್ಪದ 11 ಮಂದಿ ವಿದ್ಯಾರ್ಥಿನಿಯರು ತರಗತಿಗೆ ಗೈರು; ಇಬ್ಬರು ಹಾಜರು – Vishwanews24
ಕುಂದಾಪುರ ಹಿಜಾಬ್ ಪ್ರಕರಣ :ಹಿಜಾಬ್ ತೆಗೆಯಲು ಒಪ್ಪದ 11 ಮಂದಿ ವಿದ್ಯಾರ್ಥಿನಿಯರು ತರಗತಿಗೆ ಗೈರು; ಇಬ್ಬರು ಹಾಜರು – Vishwanews24
ಕುಂದಾಪುರ: ಹಿಜಾಬ್ ಪ್ರಕರಣದ ಕುರಿತು ಮಂಗಳವಾರ ಹೈಕೋರ್ಟ್ ತೀರ್ಪು ನೀಡಿದ್ದು, ಬುಧವಾರದಿಂದ ಎಂದಿನಂತೆ ಶಾಲಾ-ಕಾಲೇಜುಗಳು ಆರಂಭವಾಗಿದೆ.
ಕುಂದಾಪುರದ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿ ಆರಂಭವಾಗಿದ್ದು, ಕಾಲೇಜಿನಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.
ಕಾಲೇಜು ಗೇಟ್ ಬಳಿ ಪ್ರಾಂಶುಪಾಲರು, ಉಪನ್ಯಾಸಕರಿಂದ ನಿಗಾ ವಹಿಸಲಾಗಿದೆ. ಹಿಜಾಬ್ ಧರಿಸಿದ್ದ ಇಬ್ಬರು ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದು, ಹಿಜಾಬ್ ಕಳಚಿಡಲು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ.
ಹಿಜಾಬ್ ತೆಗೆಯಲು ಒಪ್ಪದ 11 ಮಂದಿ ವಿದ್ಯಾರ್ಥಿನಿಯರು ತರಗತಿಗೆ ಗೈರುಹಾಜರಾಗಿದ್ದಾರೆ.
ಉಳ್ಳಾಲ: ಪ್ರೇಮ ವೈಫಲ್ಯ ಶಂಕೆ ; ಯುವಕ ನೇಣುಬಿಗಿದು ಆತ್ಮಹತ್ಯೆ – VIshwanews24
