ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.23 ಹಾಗೂ 24ರಂದು ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಇಲ್ಲ – vishwanews24
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.23 ಹಾಗೂ 24ರಂದು ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಇಲ್ಲ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.23 ಹಾಗೂ 24ರಂದು ಸರ್ಪಸಂಸ್ಕಾರ, ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನಡೆಯುವುದಿಲ್ಲ.
ಆ.23ರಂದು ಏಕಾದಶಿ ಹಾಗೂ ಆ.24ರಂದು ಅತಿರಿಕ್ತ ಏಕಾದಶಿ ಇರುವುದು ಇದಕ್ಕೆ ಕಾರಣ.
ಉಳಿದಂತೆ ದೇವರ ದರ್ಶನ, ಮಂಗಳಾರತಿ, ಅರ್ಚನೆ, ಮಹಾಪೂಜೆ ಸಹಿತ ಇತರ ಎಲ್ಲ ಪೂಜಾ ಸೇವೆಗಳು ಎಂದಿನಂತೆ ನಡೆಯಲಿವೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.
