ಕುದುರೆಮುಖ ಆಫ್ ರೋಡಿಂಗ್ ಚಟುವಟಿಕೆ ವಿರುದ್ಧ ತೀವ್ರ ಆಕ್ರೋಶ – vishwanews24

Featured, ಉಡುಪಿ

ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ ..

ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ

ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ ನೂರಾರು ವಾಹನಗಳ ಸಂಚಾರ

ಕಾರ್ಕಳ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಅರಣ್ಯ ಒತ್ತುವರಿ, ಅಕ್ರಮ ಚಟುವಟಿಕೆಗಳ ಬೆನ್ನಲ್ಲೇ ಇದೀಗ ಆಫ್‌ರೋಡಿಂಗ್ ಕಾಟವೂ ಶುರುವಾಗಿದೆ. ಸಾಹಸ ಕ್ರೀಡೆ, ಪ್ರವಾಸೋದ್ಯಮದ ಹೆಸರಿನಲ್ಲಿ ಕಾಡಂಚಿನ ಪ್ರದೇಶಗಳಿಗೆ ನೂರಾರು ಜೀಪುಗಳನ್ನು ಕೊಂಡೊಯ್ದು ಭಾರೀ ಶಬ್ದದೊಂದಿಗೆ ಮೋಜು-ಮಸ್ತಿ ನಡೆಸುವ ಪ್ರವೃತ್ತಿ ಆತಂಕ ಮೂಡಿಸಿದೆ.

ಇತ್ತೀಚೆಗಷ್ಟೇ ಸಕಲೇಶಪುರ ಭಾಗದಲ್ಲಿ ಅರಣ್ಯಾಧಿಕಾರಿಗಳು ಆಫ್‌ರೋಡಿಂಗ್ ನಡೆಸುತ್ತಿದ್ದ ಕೆಲವು ಜೀಪುಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ಕುದುರೆಮುಖ ಭಾಗಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಫ್‌ರೋಡಿಂಗ್ ಚಟುವಟಿಕೆಗಳಿಗೆ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ ವನ್ಯಜೀವಿ ಸಂಚಾರ ಪ್ರದೇಶಕ್ಕೆ ಸಂಪರ್ಕ ಹೊಂದಿರುವ ಸೂಕ್ಷ್ಮ ವಲಯವಾಗಿದೆ. ಈ ಭಾಗದಲ್ಲಿ ಕಾಡುಕೋಣಗಳ ಓಡಾಟವಿದ್ದು, ಇತ್ತೀಚಿನ ದಿನಗಳಲ್ಲಿ ಆನೆಗಳ ಸಂಚಾರದ ಮಾಹಿತಿಯೂ ಇದೆ. ಇಂತಹ ಪರಿಸರದಲ್ಲಿ ನೂರಾರು ವಾಹನಗಳು ಏಕಕಾಲದಲ್ಲಿ ಸಂಚರಿಸಿ ಗದ್ದಲ ಸೃಷ್ಟಿಸುವುದು ವನ್ಯಜೀವಿಗಳ ಸಹಜ ವರ್ತನೆಗೆ ಅಡ್ಡಿಪಡಿಸುವ ಸಾಧ್ಯತೆಯಿದೆ. ವಿಶೇಷವಾಗಿ ಆಫ್‌ರೋಡಿಂಗ್‌ಗಾಗಿ ಸೈಲೆನ್ಸರ್‌ಗಳನ್ನು ಮಾರ್ಪಡಿಸಿಕೊಂಡಿರುವ ಜೀಪುಗಳ ಕರ್ಕಶ ಶಬ್ದವು ಕಾಡಿನ ನೈಸರ್ಗಿಕ ಶಾಂತಿ ಕದಡುವ ಅಪಾಯವಿದೆ.
ವಾಹನಗಳ ನಿರಂತರ ಓಡಾಟ ಮತ್ತು ಶಬ್ದದಿಂದ ಅವುಗಳ ಸಂಚಾರದ ಮಾರ್ಗ ಬದಲಾಗುವ ಸಾಧ್ಯತೆಯಿದ್ದು, ಇದರಿಂದ ಭವಿಷ್ಯದಲ್ಲಿ ಮಾನವ- ವನ್ಯಜೀವಿ ಸಂಘರ್ಷ ಮತ್ತಷ್ಟು ಉಲ್ಬಣಿಸುವ ಅಪಾಯವಿದೆ.

ಕುಂದಾಪುರ: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು; ಚಿನ್ನಾಭರಣ, ನಗದು ಕಳವು – vishwanews24

ಮೋಜು ಮಸ್ತಿಯ ತಾಣವಲ್ಲ ಕುದುರೆಮುಖ

ಆ. 15, 16ರಂದು ಬೆಂಗಳೂರಿನ ನೆಲಮಂಗಲದಿಂದ ಕುದುರೆಮುಖದ ವರೆಗೆ ಆಫ್‌ರೋಡಿಂಗ್ ಚಟುವಟಿಕೆ ಆಯೋಜಿಸಲಾಗಿದೆ ಎನ್ನಲಾಗುತ್ತಿದೆ. ಕಡಿದಾದ ರಸ್ತೆ, ಹಳ್ಳ-ಕೊಳ್ಳ, ಕಣಿವೆ ಪ್ರದೇಶಗಳಲ್ಲಿ ಜೀಪುಗಳನ್ನು ಓಡಿಸುವ ಸಂದರ್ಭ ಉಂಟಾಗುವ ಭಾರೀ ಶಬ್ದ, ಮಣ್ಣಿನ ಸವಕಳಿ ಹಾಗೂ ರಸ್ತೆಗಳಿಗೆ ಹಾನಿಯಿಂದ ಸ್ಥಳೀಯರಿಗೆ ಸಮಸ್ಯೆಯಾಗಬಹುದು.

ಅರಣ್ಯ ಇಲಾಖೆ, ಜಿಲ್ಲಾಡಳಿತ ಕ್ರಮ ವಹಿಸಲು ಆಗ್ರಹ

ಅರಣ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂತಹ ಕಾರ್ಯಕ್ರಮಗಳ ಅನುಮತಿ, ಮಾರ್ಗ, ವಾಹನಗಳ ಸಂಖ್ಯೆ, ಪರಿಸರದ ಮೇಲಾಗುವ ಪರಿಣಾಮ ಹಾಗೂ ಅರಣ್ಯ-ವನ್ಯಜೀವಿ ಕಾನೂನುಗಳ ಪಾಲನೆ ಕುರಿತು ಪರಿಶೀಲನೆ ನಡೆಸಬೇಕು. ಆಯೋಜಕರು, ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಆಗುಂಬೆ, ಶೃಂಗೇರಿ, ಕುದುರೆಮುಖ, ಕಾರ್ಕಳ ಭಾಗದವರು ಆಗ್ರಹಿಸಿದ್ದಾರೆ.

ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಳಗೆ ನುಗ್ಗಿದ ನೀರು : 7 ಕಾರ್ಮಿಕರ ದಾರುಣ ಸಾವು ; 14ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ – vishwanews24

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವನ್ಯಜೀವಿ ವಿಭಾಗ ಪರಿಸರದಲ್ಲಿ ಜೀಪ್ ಆಫ್ ರೋಡಿಂಗ್‌ನಂತಹ ಅನಧಿಕೃತ ಚಟುವಟಿಕೆ ಗಳು, ವನ್ಯಜೀವಿ ಆವಾಸಸ್ಥಾನಕ್ಕೆ ಅಡಚಣೆ ಉಂಟುಮಾಡುವ ಕೃತ್ಯಗಳು ಕಂಡುಬಂದಲ್ಲಿ ಕಠಿನ ಕಾನೂನು ಕ್ರಮ ಜರಗಿಸಲಾಗುವುದು. ಈ ಬಗ್ಗೆ ಸಾರ್ವಜನಿಕ ದೂರು ಗಮನಕ್ಕೆ ಬಂದಿದ್ದು, ನಿಯಮ ಮೀರುವವರ ಮೇಲೆ ನಿರಂತರ ನಿಗಾ ಇರಿಸಲಾಗುತ್ತದೆ. – ಡಿ. ರುಗ್ರೆನ್, ಉಪ ಅರಣ್ಯ ಸಂರಕ್ಷಣಾಧಿಕಾರಿ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ.

Leave a Reply