ಕೆಂಪು ಕೋಟೆಯಲ್ಲಿ ಅಬ್ಬರಿಸಿದ ಮೋದಿ..!!ದೇಶಾಭಿವೃದ್ಧಿಯ ಬಗ್ಗೆ ಮೋದಿಯ ಅದ್ಭುತ ಸಾಲುಗಳು…

Featured, ರಾಷ್ಟ್ರ ನ್ಯೂಸ್

ನವದೆಹಲಿ : ಸಮಸ್ತ ಭಾರತೀಯರಿಗೆ 72 ನೇ ಸ್ವಾತಂತ್ರ್ಯೋತ್ಸವದ ಹಾರ್ಧಿಕ ಶುಭಾಶಯಗಳು… ಈ ಬಾರಿಯ ಮೋದಿ ಸರಕಾರದ ಕೊನೆಯ ಸ್ವಾತಂತ್ರ್ಯ ಉತ್ಸವವನ್ನು ಕೇಂದ್ರ ಸರ್ಕಾರ ನಡೆಸಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದಾರೆ. ನಂತರ ಕೆಂಪುಕೋಟೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಆಯುಷ್ಮಾನ್ ಭಾರತ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದರು.

ದೇಶದ ಅಭಿವೃದ್ಧಿಯ ವಿಚಾರಗಳನ್ನೇ ಹೆಚ್ಚು ಪ್ರಸ್ತಾಪಿಸಿದ ಮೋದಿ ಅವರು, ಭಾರತ ಈಗ ಅಭಿವೃದ್ಧಿಯ ನೆಲ ಎಂದು ಬಣ್ಣಿಸಿದರು. 50 ಕೋಟಿಗೂ ಅಧಿಕ ಜನತೆಗೆ ಉಪಕಾರಿಯಾಗುವಂತಹ ಆಯುಷ್ಮಾನ್ ಯೋಜನೆಯನ್ನು ಆರಂಭಿಸಿದ್ದೇವೆ. ಈ ಯೋಜನೆಯು ಸೆಪ್ಟೆಂಬರ್ 25ರಿಂದ ಜಾರಿಗೆ ಬರುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಅದಲ್ಲದೆ ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನವನ್ನು ಆರಂಭಿಸುತ್ತೇವೆ. ದೇಶದ ಜನರ ಆರೋಗ್ಯವನ್ನು ಕಾಪಾಡುವ ಜವಾಬ್ಧಾರಿ ನಮ್ಮ ಮೇಲಿದೆ ಎಂದರು. ಈ ಮೂಲಕ ಐವತ್ತು ಕೋಟಿ ಭಾರತೀಯರಿಗೆ ಉಚಿತ ಆರೋಗ್ಯ ಸೇವೆ ದೊರೆಯಲಿದೆ ಎಂದು ಮೋದಿ ತಿಳಿಸಿದ್ದಾರೆ.

ಭಾರತದ ಕೋಟ್ಯಂತರ ಕುಟುಂಬಗಳಿಗೆ ಆರೋಗ್ಯ ಭದ್ರತೆ ಒದಗಿಸುವ `ಆಯುಷ್ಮಾನ್ ಭಾರತ್’ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯ ಮೂಲಕ ಘೋಷಣೆ ಮಾಡಿದ್ದಾರೆ. ಬಾಹ್ಯಾಕಾಶ ರಂಗದಲ್ಲಿ ಅನ್ವೇಷಣೆಯಲ್ಲಿ ತೊಡಗಿರುವ ಮತ್ತು ಸಾಧನೆ ಮಾಡುತ್ತಿರುವ ವಿಜ್ಞಾನಿಗಳನ್ನು ಭಾರತ ಅಭಿನಂದಿಸುತ್ತದೆ. 2022ರ ಹೊತ್ತಿಗೆ ಅಥವಾ ಅದಕ್ಕೂ ಮೊದಲೇ ಭಾರತ ಅಂತರಿಕ್ಷದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡುವಂತೆ ನಾವು ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.

ಭಾರತ ಇಂದು ಅಭಿವೃದ್ಧಿಯ ನೆಲವಾಗಿದೆ. ಆರ್ಥಿಕ ಅಭಿವೃದ್ಧಿಯಲ್ಲಿ ನಾವು ಹೊಸ ಮನ್ವಂಥರವನ್ನೇ ಸಾಧಿಸಿದ್ದೇವೆ. ಈ ಹಿಂದೆ ಅವಕಾಶಗಳೇ ಇರದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇಂದು ಭಾರತವೂ ಸೇರಿದೆ. ಈ ಮೂಲಕ ದೇಶ ಅಭಿವೃದ್ಧಿಯ ವೇಗದಲ್ಲಿದೆ ಎಂದು ಮೋದಿ ಹೇಳಿದ್ದಾರೆ.

ಜನರ ಅಕ್ಕಿ, ಗೋಧಿಗಳಲ್ಲೂ ಅಕ್ರಮ ನಡೆಯುತ್ತಿತ್ತು. ಆದರೆ ನಮ್ಮ ಸರಕಾರ ಅದನ್ನು ತಡೆದಿದೆ. ಮನೆಯಲ್ಲಿ ಕುಟುಂಬದ ಜೊತೆ ಕುಳಿತು ಊಟ ಮಾಡುವವರು ನನ್ನ ಮಾತು ಕೇಳಿಸಿಕೊಳ್ಳಿ. ದೇಶದ ಜನತೆಯ ಗೌರವಯುತ ಬದುಕು ನಮ್ಮ ಹಕ್ಕು. ನಿಮ್ಮ ಜೊತೆ ಮತ್ತೆ ಮೂರು ಕುಟುಂಬಗಳು ಊಟ ಮಾಡುತ್ತಿವೆ. ಅವರ ಆಹಾರವನ್ನು ನೀವು ಕಾಪಾಡಬೇಕಿದೆ. ನೀವು ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದರೆ ಇತರೆ ಕುಟುಂಬಗಳಿಗೆ ಉಪಕಾರಿ ಆಗಲಿದೆ.

ದೇಶದಲ್ಲಿ 7 ಕೋಟಿಗೂ ಅಧಿಕ ಮಂದಿ ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಕಳೆದ 60 ವರ್ಷಗಳಲ್ಲಿ ಕೇವಲ 60-70 ಲಕ್ಷ ಮಂದಿ ಮಾತ್ರ ತೆರಿಗೆ ಕಟ್ಟುತ್ತಿದ್ದರು. ಲಂಚ ಪಡೆಯುವವರನ್ನು ಸದೆ ಬಡಿಯಲಾಗಿದೆ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರಿಗೆ ನಾವು ರಕ್ಷಣೆ ನೀಡುತ್ತೇವೆ. ಅದಲ್ಲದೆ ದೇಶದಲ್ಲಿನ ನಕಲಿ ಕಂಪನಿಗಳಿಗೆ ನಿರ್ಬಂಧ ಹೇರಲಾಗಿದೆ. ಸುಮಾರು 3 ಲಕ್ಷ ನಕಲಿ ಕಂಪನಿಯನ್ನು ಮುಚ್ಚಿದ್ದೇವೆ..ಇಂತಹ ನಕಲಿ ಮಾಡುವವರಿಗೆ ನಮ್ಮ ಸರಕಾರ ಎಲ್ಲಿಯವರೆಗೆ ಇರುತ್ತದೋ ಅಲ್ಲಿವರೆಗೆ ಇಂತಹ ಅವಕಾಶಕ್ಕೆ ಎಡೆಮಾಡಿಕೊಡುವುದಿಲ್ಲ ಎಂದರು.

ಅದಲ್ಲದೆ ಈಗಾಗಲೇ ಅತ್ಯಾಚಾರ ತಡೆಹಿಡಿಯುವ ಕ್ರಮ ಕೈಗೊಳ್ಳಲಾಗೆದೆ!! ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವುದು ನಮ್ಮ ಸರಕಾರ ಮುಖ್ಯ ಉಧ್ಧೇಶವಾಗಿದೆ. ಮಹಿಳೆಯರಿಗೆ ಹೆಚ್ಚಿನ ಭದ್ರತೆಯನ್ನು ನೀಡಿದ್ದೇವೆ ಮುಂದೆಯೂ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದರು.

ಜಿಎಸ್‍ಟಿಯಂಥ ಮಹತ್ವದ ಆರ್ಥಿಕ ಸುಧಾರಣೆಗಳ ಫಲವಾಗಿ, ಮುಂದಿನ ಮೂರು ದಶಕಗಳ ಕಾಲ ಭಾರತ ಜಗತ್ತಿನ ಆರ್ಥಿಕತೆಯ ಪ್ರಗತಿ ಇಂಜಿನ್ ಆಗಿರಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ವಿಶ್ವದ ಆರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾದ ಭಾರತದ ಕುರಿತು ಜಾಗತಿಕ ಸಂಸ್ಥೆಗಳು ವ್ಯಕ್ತಪಡಿಸುತ್ತಿರುವ ಸಕಾರಾತ್ಮಕ ಮನೋಭಾವದ ಕುರಿತು ಮಾತನಾಡಿದ ಪ್ರಧಾನಿ, “ಮುಂದಿನ ಮೂರು ದಶಕಗಳ ಕಾಲ ಜಾಗತಿಕ ಆರ್ಥಿಕತೆಗೆ ಭಾರತ ಬಲ ತುಂಬಲಿದೆ. ಭಾರತ ಪ್ರಗತಿಯ ಇಂಜಿನ್ ಆಗಿರಲಿದೆ” ಎಂದು ತಿಳಿಸಿದ್ದಾರೆ. ವ್ಯವಹಾರ ಸ್ನೇಹೀ ವಾತಾವರಣ ನಿರ್ಮಾಣ ಮಾಡಲು ಇದ್ದ ಸಾಕಷ್ಟು ತೊಡಕುಗಳನ್ನು ಕಿತ್ತೊಗೆಯಲಾಗಿದ್ದು ಉದ್ಯಮಗಳಿಗೆ ಕೆಂಪು ಹಾಸಿನ ಮೂಲಕ ಸ್ವಾಗತ ಕೋರಲಾಗುತ್ತಿದೆ. ಮಲಗಿದ್ದ ಆನೆಯು ಎದ್ದು ವೇಗವಾಗಿ ಓಡುತ್ತಿದೆ ಎಂದು ಹೇಳುವ ಸ್ಥಿತಿ ತಲುಪಿದ್ದೇವೆ” ಎಂದು ಮೋದಿ ಹೇಳಿದ್ದಾರೆ.

ಆರ್ಥಿಕ ಪ್ರಗತಿಯ ಪಥದಲ್ಲಿ ಬಿಗಿಯಾಗಿ ಸಾಗುತ್ತಿರುವ ಭಾರತವು ತನ್ನ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಿಕೊಳ್ಳುವ ಮೂಲಕ ಪ್ರಗತಿಯತ್ತ ಸಾಗುತ್ತಿದೆ ಎಂದು ಇತ್ತೀಚೆಗೆ ವಿಶ್ವಬ್ಯಾಂಕ್ ನೀಡಿದ್ದ ವರದಿಯನ್ನು ಪ್ರಧಾನಿ ಇದೇ ವೇಳೆ ಉಲ್ಲೇಖಿಸಿದ್ದಾರೆ. “ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮಥ್ರ್ಯ ನಮಗೆ ಇದೆ. 2014ಕ್ಕೂ ಮುನ್ನ ಭಾರತದ ಆರ್ಥಿಕತೆ ಬಹಳ ಕಷ್ಟ ಎಂದು ಜಾಗತಿಕ ಸಂಸ್ಥೆಗಳು ಹೇಳುತ್ತಿದ್ದವು. ಇಂದು ಅದೇ ಸಂಸ್ಥೆಗಳು ನಾವು ತೆಗೆದುಕೊಳ್ಳುತ್ತಿರುವ ಸುಧಾರಣೆಗಳು ಫಲ ನೀಡುತ್ತಿದ್ದು ಮೂಲಭೂತ ವಿಷಯಗಳಿಗೆ ಬಲ ತುಂಬಿವೆ ಎಂದು ಹೇಳುತ್ತಿವೆ” ಎಂದು ಪ್ರಧಾನಿ ತಿಳಿಸಿದ್ದಾರೆ.

ದೇಶದ ರೈತರಿಂದ ಹಿಡಿದು ರಾಜಕಾರಣಿಗಳ ವರೆಗೆ ಎಲ್ಲರೂ ಬಹುದಿನಗಳಿಂದಲೂ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದರು. ಆದರೆ ಏನೂ ಆಗಿರಲಿಲ್ಲ. ಆದರೆ, ನಮ್ಮ ಸರ್ಕಾರ ರೈತರ ಆಶೀರ್ವಾದದೊಂದಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.

2013ರ ಅವಧಿಯಲ್ಲಿ ಇದ್ದ ವೇಗದಲ್ಲೇ ನಾವು ದೇಶವನ್ನು ನಡೆಸಿಕೊಂಡು ಹೋಗಿದ್ದರೆ, ಅಂದು ಶೌಚಾಲಯಗಳು ನಿರ್ಮಾಣವಾಗುತ್ತಿದ್ದ ವೇಗದಲ್ಲೇ ನಾವು ಮುಂದೆ ನಡೆದಿದ್ದರೆ, ಅಂದು ವಿದ್ಯುಚ್ಛಕ್ತಿಯನ್ನು ವಿಸ್ತರಿಸುತ್ತಿದ್ದ ವೇಗಲ್ಲೇ ನಾವು ಹೆಜ್ಜೆ ಹಾಕಿದ್ದರೆ ಭಾರತವನ್ನು ಅಭಿವೃದ್ಧಿ ಮಾಡಲು ಇನ್ನೂ ದಶಕಗಳು ಬೇಕಾಗಿತ್ತು ಎನ್ನುವ ಮೂಲಕ ಮೋದಿ ಅವರು ಹಿಂದಿನ ಯುಪಿಎ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು. ಅಲ್ಲದೆ, ಎನ್‍ಡಿಎ ಸರ್ಕಾರದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದೆ ಎಂದು ಪ್ರತಿಪಾದಿಸಿದರು.

ಅದಲ್ಲದೆ ಜಲಿಯನ್ ವಾಲಾಬಾಗ್ ದುರಂತಕ್ಕೆ ಮುಂದಿನ ವರ್ಷ ನೂರು ವರ್ಷ ತುಂಬಲಿದೆ ಅದರಲ್ಲಿ ಮಡಿದ ಎಲ್ಲಾ ಸ್ವಾತಂತ್ರ್ಯ ಸೇನಾನಿಗಳಿಗೆ ನಮನ ಸಲ್ಲಿಸಿದರು.. ಈ ಬಾರಿ ದೇಶಾದ್ಯಂತ ಉತ್ತಮ ಮುಂಗಾರು ಸುರಿದಿದೆ. ಆದರೆ, ಕೆಲವೆಡೆ ಅತಿವೃಷ್ಟಿವುಂಟಾಗಿ ಜನತೆ ಸಮಸ್ಯೆಗೆ ಸಿಲುಕಿದ್ದಾರೆ. ತೊಂದರೆಗೆ ಸಿಲುಕಿದ ಕುಟುಂಬಗಳೊಂದಿಗೆ ನಾನು ಇರಲಿದ್ದೇನೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ ಎನ್ನುವ ಮೂಲಕ ನೆರೆ ಪ್ರದೇಶಗಳ ನಾಗರಿಕರ ರಕ್ಷಣೆಗೆ ಬದ್ಧ ಎಂದು ಮೋದಿ ತಿಳಿಸಿದ್ದಾರೆ. ಇಂತಹ ದೇಶ ಅಭಿವೃದ್ಧಿ ನಾಯಕ ಮೋದಿಜೀ ಇನ್ನು ಮುಂದೆಯೂ ಭಾರತದ ಪ್ರಧಾನಿಯಾಗಬೇಕೆಂಬುವುದೇ ಎಂಬುವುದೇ ಎಲ್ಲರ ಆಶಯ…

ಜೈ ಮೋದಿಜೀ…