ಕೆಎಂಎಫ್ನಿಂದ ಹಾಲು ಉತ್ಪಾಕರ ಬ್ಯಾಂಕ್ ತೆರೆಯಲು ಸಿಎಂ ಬೊಮ್ಮಾಯಿ ಸಲಹೆ -Vishwanews24
ಕೆಎಂಎಫ್ನಿಂದ ಹಾಲು ಉತ್ಪಾಕರ ಬ್ಯಾಂಕ್ ತೆರೆಯಲು ಸಿಎಂ ಬಸವರಾಜ ಬೊಮ್ಮಾಯಿ ಸಲಹೆ -Vishwanews24
ಬೆಂಗಳೂರು: ರೈತ ಕುಟುಂಬ ಕೃಷಿ ಹೊರತಾಗಿ ಹೈನುಗಾರಿಕೆಯಲ್ಲಿ (Dairy Farm) ಕಾರ್ಯ ಮಾಡುತ್ತಿದ್ದಾರೆ. ಕೆಎಂಎಫ್ (KMF) ರೈತರ ಪರವಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಹಕಾರಿ ಸಂಸ್ಥೆಗಳು ಶ್ರೀಮಂತಗೊಳ್ಳಬೇಕು. ಅದರಲ್ಲಿ ಕೆಲವರು ಮಾತ್ರ ಶ್ರೀಮಂತಗೊಳ್ಳುವುದು ನಮಗೆ ಬೇಕಾಗಿಲ್ಲ. ಸಹಕಾರ ಕ್ಷೇತ್ರದ ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲರಾಗಬೇಕಿದೆ. ಹಾಲು ಉತ್ಪಾಕರ ಬ್ಯಾಂಕ್ ತೆರೆಯಿರಿ. ಇದು ನನ್ನ ಹಾಗೂ ಸಚಿವ ಸತೀಶ್ ಮನದಾಸೆಯಿದೆ. ಈಗಾಗಲೇ ಕೆಎಂಎಫ್ ಗೆ ಎಲ್ಲ ಅರ್ಹತೆಯಿದೆ. ಈ ಕುರಿತು ಮುಂದೆ ಕಾರ್ಯೋನ್ಮುಖರಾಗಿ. ಆಗ ಸರ್ಕಾರಕ್ಕೆ ಪದೇ ಪದೇ ಅನುದಾನ ಕೇಳುವುದು ತಪ್ಪುತ್ತದೆ. ಈ ರೀತಿ ಮಾಡಿದರೆ 100 ಕೋಟಿ ಕ್ಯಾಪಿಟಲ್ ಸರ್ಕಾರ ನೀಡಲಾಗುತ್ತದೆ ಎಂದು ಕೆಎಂಎಎಫ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲ ವತಿಯಿಂದ ಆಯೋಜಿಸಿರುವ ಕರ್ನಾಟಕ ಹಾಲು ಮಹಾಮಂಡಳದ ಸಾಮೂಹಿಕ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ತೆರೆಯಲಾಗುವುದು. ಆರಂಭಕ್ಕೆ ಬೇಕಾದ ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ. ನಿರ್ವಹಣೆಯನ್ನು ಪಶುಸಂಗೋಪನೆ ಇಲಾಖೆ ನೋಡಿಕೊಳ್ಳಬೇಕು.No profit no loss ರೀತಿ ಕಾರ್ಯ ನಿರ್ವಹಿಸಬೇಕು. ಗೋಶಾಲೆ ಪುಣ್ಯದ ಕೆಲಸ ಅದನ್ನು ನಾವೆಲ್ಲ ಸೇರಿ ಮಾಡಬೇಕು. ಯಾವ ಜಿಲ್ಲೆಯಲ್ಲಿ ನೀರಾವರಿ, ಹಸಿರು ಇದೆ ಅಲ್ಲಿ ಗೋವುಗಳನ್ನು ಹೆಚ್ಚು ರೈತರಿಗೆ ನೀಡಲಾಗುವುದು. ಕೇಂದ್ರ ಹಾಗು ರಾಜ್ಯ ಸರ್ಕಾರ ಹೊಸ ಯೋಜನೆಗಳನ್ನು ಮುಂದೆ ಆರಂಭಿಸಲಾಗುವುದು ಎಂದರು.
ಇದನ್ನೂ ಓದಿ : ಖಾಸಗಿ ಎಂಜಿನಿಯರಿಂಗ್ ಕೋರ್ಸಿನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಇಲ್ಲ : ಸಚಿವ ಅಶ್ವತ್ಥನಾರಾಯಣ -Vishwanews24
ಹಾಲಿನ ದರ ಹೆಚ್ಚಳ ಮಾಡುವ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಈ ಕುರಿತು ನಾನು ಯಾವುದೇ ಆಶ್ವಾಸನೆ ಕೊಡುವುದಿಲ್ಲ. ಕೊಡಲು ಬರುವುದಿಲ್ಲ. ನಾಯಕರಾದ ಯಡಿಯೂರಪ್ಪ ಪ್ರೋತ್ಸಾಹ ಧನ ನೀಡಿದ್ದರು. ಕೋವಿಡ್ ಸಂದರ್ಭದಲ್ಲಿ 1250 ಕೋಟಿ ಸಹಾಯ ಮಾಡಲಾಗಿದೆ. ಇದಕ್ಕೆ ಬಿಎಸ್ ವೈ ಗೆ ಅಭಾರಿಯಾಗಿದ್ದೇನೆ. ಬಿಎಸ್ ವೈ ಅವರ ಯೋಜನೆ ಮುಂದುವರೆಸಲಾಗುವುದು. ಕೆಎಂಎಫ್ ಗೆ ಈ ವರ್ಷ 50 ಕೋಟಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.
