ಕೆಎಸ್ ಆರ್ ಟಿಸಿ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ : ಸಚಿವ ಕೋಟಾ – Vishwanews24

Featured, ರಾಜ್ಯ ನ್ಯೂಸ್

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಖಾಸಗೀಕರಣದ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ..

ಕೆಎಸ್ ಆರ್ ಟಿಸಿ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ..

ಬೆಳಗಾವಿರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಖಾಸಗೀಕರಣದ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಮಾಜ ಕಲ್ಯಾಣ ಸಚಿವರು ಆಗಿರುವ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ನಲ್ಲಿ ಹೇಳಿದ್ದಾರೆ.

ಸದಸ್ಯ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಎಸ್ ಆರ್ ಟಿಸಿ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ, ಇದರಿಂದ ಲಾಭ ಬಂದರೂ ಸರಿ ಅಥವಾ ನಷ್ಟವಾದರೂ ಸರಿ, ಯಾವುದೇ ಕಾರಣಕ್ಕೂ ಸರ್ಕಾರವೇ ನಡೆಸಿಕೊಂಡು ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಬಿಎಂಟಿಸಿ ಕುರಿತು ಉತ್ತರಿಸಿದ ಸಚಿವರು, ಬಿಎಂಟಿಸಿ 733 ಕೋಟಿ ಪಡೆದಿದ್ದು, 195 ಕೋಟಿ ಮರು ಪಾವತಿ ಮಾಡಲಾಗಿದೆ. 11 ವರ್ಷಾವಧಿ ಅಥವಾ 8 ಲಕ್ಷ ಕಿಲೋ ಮೀಟರ್ ವರೆಗೆ ಸಂಚಾರ ಮಾಡಿರುವ ಬಸ್ ಗಳನ್ನು  ಮಾತ್ರ ಮಾರಾಟ ಮಾಡಲು ತಯಾರಿ ನಡೆಸಲಾಗಿದೆ. ಈಗ ಹೊಸದಾಗಿ ಸಾಮಾನ್ಯ ಬಸ್ ಗಳನ್ನು ಮಾತ್ರ ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಕಾಪು ಪುರಸಭಾ ಚುನಾವಣೆ : ಕಾಂಗ್ರೆಸ್‌ ನಾಯಕರಿಂದ  13 ನೇ ತೊಟ್ಟಂ ವಾರ್ಡಿನಲ್ಲಿ ಅಭ್ಯರ್ಥಿ ಸತೀಶ್‌ ಚಂದ್ರ ಮೂಳೂರು ಪರ ಬಿರುಸಿನ ಪ್ರಚಾರ  – Vishwanews24

Leave a Reply