ಕೊಡಗಿನ ಗ್ರಾಮ ದತ್ತು ಪಡೆದು ಪುನರ್ ನಿರ್ಮಾಣ : ಪಲಿಮಾರು ಶ್ರೀ ಘೋಷಣೆ

Featured, ಉಡುಪಿ

ಉಡುಪಿ: ಭೀಕರ ಜಲಪ್ರಳಯದಿಂದ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯ ಸಂತ್ರಸ್ತ್ರರ ನೆರವಿಗೆ ಉಡುಪಿಯ ಕೃಷ್ಣ ಮಠ ಮುಂದಾಗಿದ್ದು, ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಒಂದು ಗ್ರಾಮವನ್ನು ದತ್ತು ಪಡೆದು ಪುನರ್‌ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ. 

ಶಾಸ್ತ್ರಗಳಲ್ಲಿ ಹೇಳಿರುವಂತೆ ಅಷ್ಟ ಭಾವಪುರುಷಗಳಲ್ಲಿ ದಯೆ ಎಂಬುದು ಭಗವಂತನಿಗೆ ಅತ್ಯಂತ ಪ್ರಿಯವಾದುದು. ಆದ್ದರಿಂದ ಕಷ್ಟದಲ್ಲಿರುವವರಿಗೆ ಕರುಣೆ ಮತ್ತು ದಯೆಯಿಂದ ಸಹಾಯ ಮಾಡಿದರೆ ಅವರಲ್ಲಿರುವ ಭಗವಂತ ಸಂತುಷ್ಟನಾಗುತ್ತಾನೆ. ಕೊಡಗಿನಲ್ಲಿ ಸಂಕಷ್ಟಕ್ಕೀಡಾಗಿರುವವರಿಗೆ ಹೆಗಲು ಕೊಡುವುದು ದೇವರ ಪೂಜೆಯಷ್ಟೇ ಶ್ರೇಷ್ಠವಾದುದು ಎಂದು ತಿಳಿಸಿದ್ದಾರೆ. ಅತಿವೃಷ್ಟಿ ಅನಾಹುತವಾಗದಂತೆ ವಿಶೇಷ ಪ್ರಾರ್ಥನೆಯನ್ನೂ ಶ್ರೀಕೃಷ್ಣ  ಸನ್ನಿಧಾನದಲ್ಲಿ ಶ್ರೀಗಳು ಸಲ್ಲಿಸಿದ್ದಾರೆ.

ಸಾರ್ವಜನಿಕರ ನೆರವಿನಿಂದ ಕೊಡಗಿನ ಗ್ರಾಮವನ್ನು  ಪುನರ್‌ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸುವುದಾಗಿ ಶ್ರೀಗಳು ಹೇಳಿದ್ದಾರೆ.