ಕೇರಳದವರಿಗೆ ಸಾಂಸ್ಥಿಕ ಕ್ವಾರಂಟೈನ್ ;ಇತರರಿಗೆ ಹೋಂ ಕ್ವಾರಂಟೈನ್ : ರಾಜ್ಯ ಸರಕಾರ ಆದೇಶ -Vishwanews24
ಕೇರಳದವರಿಗೆ ಸಾಂಸ್ಥಿಕ ಕ್ವಾರಂಟೈನ್ ;ಇತರರಿಗೆ ಹೋಂ ಕ್ವಾರಂಟೈನ್ : ರಾಜ್ಯ ಸರಕಾರ ಆದೇಶ -Vishwanews24
ನಿತ್ಯ ಸಂಚಾರ ನಡೆಸುವವರಿಗೆ ಪ್ರತಿ ವಾರ ಸೋಂಕು ಪರೀಕ್ಷೆ..
ಬೆಂಗಳೂರು: ಕೇರಳದಿಂದ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದ್ದು, ಇತರರಿಗೆ ಹೋಂ ಕ್ವಾರಂಟೈನ್ ಜಾರಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ನಿತ್ಯ ಸಂಚಾರ ನಡೆಸುವವರು ಪ್ರತಿ ವಾರ ಸೋಂಕು ಪರೀಕ್ಷೆಗೊಳಗಾಗಬೇಕು.
ಯಾರಿಗೆ ವಿನಾಯಿತಿ? : ವೈದ್ಯಕೀಯ ಸಿಬಂದಿ, ಎರಡು ವರ್ಷದೊಳಗಿನ ಮಕ್ಕಳು, ಆಸ್ಪತ್ರೆ ಚಿಕಿತ್ಸೆಗೆ, ತುರ್ತು ಸಂದರ್ಭಗಳಿಗೆ ಆಗಮಿಸುವವರು, 3 ದಿನಗಳ ಮಟ್ಟಿಗೆ ಭೇಟಿ ನೀಡುವವರು, ಪರೀಕ್ಷೆ ಕಾರಣಕ್ಕೆ ರಾಜ್ಯಕ್ಕೆ ಆಗಮಿಸು ವವವರು ಮತ್ತವರ ಒಬ್ಬ ಪೋಷಕರು (3 ದಿನಗಳ ಮಟ್ಟಿಗೆ), ಕರ್ನಾಟಕದ ಮೂಲಕ ಬೇರೆಡೆಗೆ ತೆರಳು ವಿಮಾನ, ರೈಲು, ಬಸ್ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ.
