ಕೊಪ್ಪಳ: ವಿದೇಶಿ ಮಹಿಳೆ ಸೇರಿ ಇಬ್ಬರು ಮಹಿಲೆಯರ ಮೇಲೆ ಅತ್ಯಾಚಾರ ನಡೆಸಿ ಒಬ್ಬನನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ಅವರು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇಬ್ಬರು ವಿದೇಶಿಯರು ಸೇರಿ ಐವರು ಪ್ರವಾಸಿಗರು ಇದ್ದ ಗುಂಪು ನಿಸರ್ಗ ವೀಕ್ಷಣೆಗೆ ಸಣಾಪುರದ ಕೆರೆಬಳಿ ಹೋಗಿತ್ತು ಆ ಸಂದರ್ಭದಲ್ಲಿ ಮೂವರು ಅಪರಿಚಿತರು ಅವರಬಳಿ ಬಂದು ನೂರು ರೂಪಾಯಿ ಕೇಳಿದ್ದಾರೆ ಆದರೆ ಪ್ರವಾಸಿಗರು 20 ರೂಪಾಯಿ ಕೊಟ್ಟಿದ್ದಾರೆ ಇದನ್ನು ನಿರಾಕರಿಸಿದ ಆ ಯುವಕರು ಜಗಳ ತೆಗೆದು ಹಲ್ಲೆ ನಡೆಸಿ ಅತ್ಯಾಚಾರ ವೆಸಗಿದ್ದಾರೆ ನಂತರ ಅವರ ಬಳಿ ಇದ್ದ ಎರಡು ಮೊಬೈಲ್ ಫೋನ್ ಗಳನ್ನು ಕಸಿದುಕೊಂಡು ಮೂವರನ್ನು ನೀರಿಗೆ ತಳ್ಳಲಾಗಿತ್ತು ಎಂದರು.
ನೀರಿಗೆ ತಳ್ಳಿದ ಮೂವರಲ್ಲಿ ಇಬ್ಬರು ನೀರಿನಿಂದ ಹೊರಗೆ ಬಂದಿದ್ದಾರೆ. ನಾಸಿಕ್ ಮೂಲದ ಬಿಬಾಷ್ ಎಂಬಾತ ಪತ್ತೆಯಾಗಿರಲಿಲ್ಲ ಇದರಿಂದ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಭಾರತೀಯ ನ್ಯಾಯ ಸಹಿತ ಕಲಂ 309(ಬಿ) 311,64(2),(ಎಲ್ ),70(1) ಸೇರಿದಂತೆ ಮುಂತಾದ ಸೆಕ್ಷನ್ ಗಳಲ್ಲಿ ಪ್ರಕರಣ ದಾಕಲಾಗಿತ್ತು ಅದರಂತೆ ಆರು ವಿಶೇಷ ತಂಡಗಳನ್ನು ರಚಿಸಲಾಗಿತ್ತು ಗಂಗಾವತಿ ತಾಲೂಕಿನ ಸಾಯಿನಗರದ ನಿವಾಸಿಗಲಾದ ಮಲ್ಲೇಶ್(22) ಮತ್ತು ಚೇತನ್ ಸಾಯಿ ಸಿಳ್ಳೇಕ್ಯಾತರ್(21) ಎಂಬ ಇಬ್ಬರು ಆರೋಪಿಗಳನ್ನು ಮಾರ್ಚ್ 8 ರಂದು ಬಂಧಿಸಲಾಗಿತ್ತು. ಆದರೆ ಮೂರನೇ ಆರೋಪಿಯ ಸೆರೆ ಆಗಿರಲಿಲ್ಲ ಎಂದರು.
ಮೂರನೇ ಆರೋಪಿ ತಮಿಳುನಾಡಿನ ಚೆನೈನಲ್ಲಿ ಇರುವುದಾಗಿ ಮಾಹಿತಿ ಬಂಡಮೆರೆಗೆ ನಮ್ಮ ತಂಡಗಳನ್ನು ಅಲ್ಲಿಗೆ ಕಳುಹಿಸಿ ೦೯ ಮಾರ್ಚ್ ೨೦೨೫ ರಂದು ಶರಣಬಸವರಾಜ್(೩೦) ಎಂಬ ಆರೋಪಿಯನ್ನು ಚೆನೈನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದರು.
ಮೂರು ಆರೋಪಿಗಳು ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ, ಆರೋಪಿಗಳಿಂದ ಬೈಕ್ ಅನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.
ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…
ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…
ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…
ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್, ಡೀಸೆಲ್ ಬಳಿಕ…
ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…
ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…